Asianet Suvarna News

ಅನ್ ಲಾಕ್ ಇದ್ದರೂ ನೈಟ್ ಕರ್ಫ್ಯೂ, ನಿಯಮಗಳನ್ನು ಮತ್ತೊಮ್ಮೆ ನೋಡಿ

* ಕೊರೋನಾ  ಮೊದಲನೇ ಹಂತದ ಅನ್ ಲಾಕ್
* ರಾತ್ರಿ ನಿಷೇಧಾಜ್ಞೆ ನಿಯಮಗಳೇನು?
* ಅನಗತ್ಯವಾಗಿ ಹೊರಗೆ ಬಂದ್ರೆ ನಿಮ್ಮ ವಾಹನ ಸೀಜ್ ಆಗಲಿದೆ

Coronavirus Lockdown Night curfew imposed in Bengaluru mah
Author
Bengaluru, First Published Jun 14, 2021, 8:38 PM IST
  • Facebook
  • Twitter
  • Whatsapp

ಬೆಂಗಳೂರು(ಜೂ. 14) ಬೆಂಗಳೂರು ಸೇರಿ ರಾಜ್ಯದ  19  ಜಿಲ್ಲೆಗಳು ಸೋಮವಾರದಿಂದ ಅನ್ ಲಾಕ್ ಆಗಿವೆ. ಆದರೆ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

"

ನೈಟ್ ಕರ್ಫ್ಯೂ ಜಾರಿಯಾಗುವುದಕ್ಕೂ ಮುನ್ನ ಬೆಂಗಳೂರು ಟ್ರಾಫಿಕ್ ಮಯವಾಗಿತ್ತು. ರಾತ್ರಿ 7 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ಸರ್ಕಾರ ಒಂದಿಷ್ಟು ನಿಯಮಗಳನ್ನು ಸ್ಪಷ್ಟ ಮಾಡಿದ್ದು ಮತ್ತೊಮ್ಮೆ ನಿಮ್ಮ ಗಮನಕ್ಕೆ ಇರಬೇಕು.

ಅನ್ ಲಾಕ್; ಜಿಲ್ಲಾವಾರು ಮಾಹಿತಿ ತಿಳಿದುಕೊಳ್ಳಿ

ಈಗಾಗಲೇ ಫೀಲ್ಡ್ ಗಿಳಿದಿರುವ ಪೊಲೀಸರು ಅನಗತ್ಯ ಓಡಾಡ ಮಾಡುತ್ತಿರುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.  ಮುಲಾಜಿಲ್ಲದೇ ವಾಹನಗಳನ್ನ ಸೀಜ್ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮೌಖಿಕ ಆದೇಶ ನೀಡಿದ್ದಾರೆ. ಮೆಜೆಸ್ಟಿಕ್ ನಲ್ಲಿ  ತೀವ್ರ ತಪಾಸಣೆ ನಡೆಸಲಾಗುತ್ತಿದೆ.

*ಸಂಜೆ 7 ರಿಂದ ಬೆಳಿಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ಜಾರಿ

* ರೋಗಿಗಳನ್ನ ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶ

* ಯಾವುದೇ ಕಂಪನಿ ಹಾಗೂ ಕೈಗಾರಿಕಾ ಉದ್ಯೋಗಿಗಳು ಪಾಸ್ ಹೊಂದಿರಬೇಕು 

* ಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸಸ್ ವರ್ಕರ್ಸ್ ತಮ್ಮ ಐಡಿಕಾರ್ಡ್ ಗಳನ್ನ ಹೊಂದಿರಲೇ ಬೇಕು

* ಮೆಡಿಕಲ್ ಎಮರ್ಜೆನ್ಸಿ ಹಾಗೂ ಅಗತ್ಯ ಸರಬರಾಜುವಾಹನಗಳಿಗೆ ಅವಕಾಶ

* ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶ

*ಏರ್ಪೋರ್ಟ್, ರೈಲ್ವೆ ಸೇರಿದಂತೆ ಓಡಾಟಕ್ಕೆ ಸೂಕ್ತ ಮಾಹಿತಿ‌ ಒದಗಿಸಬೇಕು

Follow Us:
Download App:
  • android
  • ios