ಅಜ್ಜಿ ಮನೆಗೆ ಬಂದು ಕೊರೋನಾ ಸೋಂಕು ಅಂಟಿಸಿಕೊಂಡ ಬಾಲಕಿ

ತಾಯಿಯೊಂದಿಗೆ ಅಜ್ಜಿ ಮನೆಗೆ ಬಂದಿದ್ದ ಬಾಲಕಿ| ಬಾಲಕಿಯ ಪ್ರದೇಶ ನಿಯಂತ್ರಿತ ವಲಯವೆಂದು ಘೋಷಣೆ| ಹುಬ್ಬಳ್ಳಿಯ ಮುಲ್ಲಾ ಓಣಿಯ ಪಿ-236 ವ್ಯಕ್ತಿ ಸಹೋದರಿಯ ಮಗಳು ಈ ಬಾಲಕಿ| ತಾಯಿಯೊಂದಿಗೆ ಕಳೆದ ಒಂದೂವರೆ ತಿಂಗಳಿಂದಲೇ ಕೇಶ್ವಾಪುರದ ಆಜಾದ್‌ ಕಾಲನಿಯಿಂದ ಮುಲ್ಲಾ ಓಣಿಯ ಅಜ್ಜಿಯ ಮನೆಯಲ್ಲಿದ್ದಳು| 

Coronavirus Infection to Thirteen Year old Girl in Hubballi

ಧಾರವಾಡ(ಏ.24): ಹುಬ್ಬಳ್ಳಿಯಲ್ಲಿ ಗುರುವಾರ ಇಬ್ಬರಿಗೆ ಪತ್ತೆಯಾದ ಕೋವಿಡ್‌ -19 ಪಾಸಿಟಿವ್‌ ಪ್ರಕರಣದ ಪೈಕಿ 13 ವರ್ಷದ ಬಾಲಕಿ ಅಜ್ಜಿ ಮನೆಗೆ ಬಂದು ಈ ಸೋಂಕಿಗೆ ತುತ್ತಾಗಿರುವುದು ಸೋಜಿಗದ ಸಂಗತಿ.

ಹುಬ್ಬಳ್ಳಿಯ ಮುಲ್ಲಾ ಓಣಿಯ ಪಿ-236 ವ್ಯಕ್ತಿ ಸಹೋದರಿಯ ಮಗಳು ಈ ಬಾಲಕಿ. ತಾಯಿಯೊಂದಿಗೆ ಕಳೆದ ಒಂದೂವರೆ ತಿಂಗಳಿಂದಲೇ ಕೇಶ್ವಾಪುರದ ಆಜಾದ್‌ ಕಾಲನಿಯಿಂದ ಮುಲ್ಲಾ ಓಣಿಯ ಅಜ್ಜಿಯ ಮನೆಯಲ್ಲಿದ್ದಳು. ದುರಾದಷ್ಟವಶಾತ್‌ ತಾಯಿಯ ಕೋವಿಡ್‌ ವರದಿ ನೆಗೆಟಿವ್‌ ಬಂದಿದ್ದು, ತಾಯಿಯ ತಂಗಿ 30 ವರ್ಷದ ಯುವತಿಯೊಂದಿಗೆ ಬಾಲಕಿಗೆ ಸೋಂಕು ತಗುಲಿದೆ.

ಗ್ರಾಮೀಣ ಜನರಿಗೆ ದಿನಸಿ ನೀಡಿ ಮಾನವೀಯತೆ ಮೆರೆದ ಧಾರವಾಡ ಪಿಎಸ್‌ಐ ಮಹೇಂದ್ರ ನಾಯಕ್

ಸಂಪೂರ್ಣ ಶೀಲಡೌನ್‌:

ಮುಲ್ಲಾ ಓಣಿಯಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಿದ್ದು, ಬಾಲಕಿ ಇದ್ದ ಕೇಶ್ವಾಪುರವನ್ನು ಕಂಟೋನ್ಮೆಂಟ್‌ ಪ್ರದೇಶವೆಂದು ಘೋಷಿಸಿದ್ದು 100 ಮೀಟರ್‌ ವ್ಯಾಪ್ತಿ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಘೋಷಿಸಿ ಸಂಪೂರ್ಣ ಪ್ರದೇಶವನ್ನು ಶೀಲ್‌ಡೌನ್‌ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇಲ್ಲಿ ಶಾಶ್ವತವಾಗಿ ತಡೆಗೋಡೆ ಹಾಕುವ ಮೂಲಕ ಪೊಲೀಸರು ನಾಕಾಬಂಧಿ ವಹಿಸಬೇಕು. ಯಾವುದೇ ವ್ಯಕ್ತಿ, ಯಾವುದೇ ರೀತಿಯಿಂದ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ, ಡ್ರೋಣ್‌ ಬಳಸಿ ಸೀಲ್‌ಡೌನ್‌ನ್ನು ಪರಿಣಾಮಕಾರಿಯಾಗಿ ಜಾರಿಗೆ ಮಾಡಲು ಆದೇಶಿಸಲಾಗಿದೆ.

ಇದರೊಂದಿಗೆ ಈ ಪ್ರದೇಶದಲ್ಲಿ ಆರೋಗ್ಯ ಔಟ್‌ ಪೋಸ್ಟ್‌ ಆರಂಭಿಸಿ ಓರ್ವ ವೈದ್ಯ ಹಾಗೂ ಸತತ ಐಇಸಿ ಪ್ರಚಾರ ಮಾಡಬೇಕು. ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ತಕ್ಷಣವೇ ಹುಡುಕಿ ಕ್ವಾರಂಟೈನ್‌ ಮಾಡಬೇಕು. ಅಧಿಕ ಅಪಾಯ ಇರುವ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆ ಮಾಡಬೇಕು. ಜತೆಗೆ ಈ ನಿಯಂತ್ರಿತ ವಲಯದಲ್ಲಿ ನಿತ್ಯ ಘನತ್ಯಾಜ್ಯ ನಿರ್ವಹಣೆ, ಸೋಂಕು ನಿವಾರಣೆ ಸ್ಪ್ರೇ ಮಾಡುವುದು, ಕುಡಿಯುವ ನೀರಿನ ಕೊರತೆ ಕಂಡು ಬಂದರೆ ಸರಿದೂಗಿಸುವುದು, ಆಗತ್ಯ ಬಿದ್ದರೆ ಜನರಿಗೆ ಆಹಾರ ಪೊಟ್ಟಣದ ವ್ಯವಸ್ಥೆ ಸಹ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
 

Latest Videos
Follow Us:
Download App:
  • android
  • ios