ಬೈಲಹೊಂಗಲ(ಜು. 01): ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖರಾಗಿ ಮನೆಗೆ ಮರಳಿದ ಬೆನ್ನಲ್ಲೇ ಲಖನೌದಿಂದ ಪಟ್ಟಣಕ್ಕೆ ಬಂದಿದ್ದ ಯೋಧ, ವಾಪಸ್‌ ಲಖನೌಗೆ ಹೋದಾಗ ಕೊರೋನಾ ದೃಢಪಟ್ಟಿದೆ. 

ಯೋಧ ಇಲ್ಲಿ ಓಡಾಡಿದ್ದರಿಂದ ಸಹಜವಾಗಿ ಉತ್ತರ ಪ್ರದೇಶದ ಲಖನೌದಲ್ಲಿ ಎಎಂಸಿ ವಿಭಾಗದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ 21 ವರ್ಷದ ಯುವಕ ಜೂ.22 ರಂದು ರಜೆ ಮೇರೆಗೆ ಬೈಲಹೊಂಗಲಕ್ಕೆ ಬಂದಿದ್ದ. ಈ ವೇಳೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದ ಆತನಿಗೆ ಸೋಂಕಿನ ಲಕ್ಷಣಗಳಿರಲಿಲ್ಲ. 

ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್

ಜೂ.28 ರಂದು ರೈಲು ಮುಖಾಂತರ ಮತ್ತೆ ಸೇನೆಗೆ ವಾಪಸಾಗಿ ಜೂ.30 ರಂದು ಲಖನೌ ತಲುಪಿ ಅಲ್ಲಿ ಆತನ ಆರೋಗ್ಯ ಪರಿಶೀಲಿಸಿದಾಗ ಸೋಂಕು ಪತ್ತೆಯಾಗಿದೆ. ಹೀಗಾಗಿ ತಹಶೀಲ್ದಾರ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ಎಂ.ಬಿ.ಹಿರೇಮಠ, ಪುರಸಭೆ ಪರಿಸರ ಅಭಿಯಂತರ ಸತೀಶ ಖಜ್ಜಿಡೋಣಿ, ಆರೋಗ್ಯ ಇಲಾಖೆ ಅಧಿಕಾರಿ ಎಸ್‌.ಎನ್‌. ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ, ಸಿಬ್ಬಂದಿ, ಅಂಗನವಾಡಿ ಶಿಕ್ಷಕಿ ಅವರ ಮನೆಗೆ ತೆರಳಿ ಯೋಧನ, ಪ್ರಾಥಮಿಕ ಸಂಪರ್ಕದವರ ಕುರಿತು ಮಾಹಿತಿ ಕಲೆ ಹಾಕಿ. ಮನೆ ಬಿಟ್ಟು ಹೊರಗೆ ಸಂಚಾರ ಮಾಡದಂತೆ ಸೂಚಿಸಿದ್ದಾರೆ.