ಹುಬ್ಬಳ್ಳಿ(ಜೂ.21): ಕೊರೋನಾ ವಾರಿಯರ್ಸ್‌ ಆಗಿರುವ ಕಿಮ್ಸ್‌ನ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದ್ದು, ನಿನ್ನೆಯಿಂದಲೇ ಅವರನ್ನು ಕಿಮ್ಸ್‌ ಕೋವಿಡ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಇದೇ ಮೊದಲ ಬಾರಿಗೆ ಕಿಮ್ಸ್‌ ವೈದ್ಯರಿಗೂ ಸೋಂಕು ತಗುಲಿರುವುದರಿಂದ ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ. ಪ್ಯಾಥಾಲಜಿ ವಿಭಾಗದಲ್ಲಿ ವೈದ್ಯರಾಗಿರುವ ಇವರಿಗೆ ಐಎಲ್‌ಐ ನಿಂದ ಸೋಂಕು ತಗುಲಿರಬಹುದು ಎನ್ನಲಾಗಿದೆ. 

ಹುಬ್ಬಳ್ಳಿ: ಬಿಲ್ ಕೇಳಲು ಬಂದ ಮಹಿಳೆಗೆ ವೈದ್ಯಾಧಿಕಾರಿಯಿಂದ ಲೈಂಗಿಕ ಕಿರುಕುಳ

ಇವರದ್ದು ಧಾರವಾಡದಲ್ಲಿ ಖಾಸಗಿ ಕ್ಲಿನಿಕ್‌ ಇದೆ. ಅಲ್ಲೂ ಇವರು ಇತರೆ ಕಾಯಿಲೆಗಳಿಗೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡಿದ್ದಾರೆ. ಇವರೂ ಸದ್ಯ ಕಿಮ್ಸ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ಸಂಪರ್ಕದಲ್ಲಿರುವವರ ಹುಡುಕಾಟ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.