Asianet Suvarna News Asianet Suvarna News

ಕೊರೋನಾ ಲಾಕ್ ಡೌನ್; ಪಾಸ್ ಪಡೆದುಕೊಳ್ಳುವುದು ಹೇಗೆ?

ಕೊರೋನಾ ವಿರುದ್ಧದ ಹೋರಾಟ/ ಲಾಕ್ ಡೌನ್ ತಥಾಸ್ಥಿತಿ ಮುಂದುವರಿಕೆ/ ತುರ್ತು ಪಾಸ್ ಪಡೆದುಕೊಳ್ಳುವುದು ಹೇಗೆ?/ಸಹಾಯವಾಣಿ ಗಮನಿಸಿ

Coronavirus covid 19 lockdown continue how we get pass
Author
Bengaluru, First Published Apr 19, 2020, 6:07 PM IST

ಬೆಂಗಳೂರು(ಏ. 19) ಲಾಕ್ ಡೌನ್ ಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯಸರ್ಕಾರ ತಿಳಿಸಿದೆ. ಹಾಗಾಗಿ ರಾಜ್ಯದಲ್ಲಿ ತುರ್ತು ಪಾಸ್ ಗಳ ವಿತರಣೆ ಮುಂದುವರಿಯಲಿದೆ. 

ಪಾಸ್ ಗಳ ವಿತರಣೆಗೆ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದಾರೆ.  ಆಯಾ ಠಾಣಾ ವ್ಯಾಪ್ತಿಯಲ್ಲಿ ಪಾಸ್ ಪಡೆಯಲು ಸೂಚನೆ ನೀಡಲಾಗುತ್ತದೆ.  ಈಗಾಗಲೇ ಪಡೆದ ಎಲ್ಲಾ ಪಾಸ್ ಗಳು ಮೇ 20 ವರೆಗೆ ಮಾತ್ರ ಮಾನ್ಯವಾಗಲಿದೆ.

ತರಕಾರಿಯಂತೆ ಕುರಿ-ಮೇಕೆ ಸಾಗಾಟಕ್ಕೆ ಅವಕಾಶ

ತುರ್ತು ಸಂದರ್ಭದಲ್ಲಿ ಎಲ್ಲಾ ಮಾದರಿಯ ಪಾಸ್ ಗಳನ್ನು ಠಾಣಾ ವ್ಯಾಪ್ತಿಯಲ್ಲಿ  ಪಡೆದುಕೊಳ್ಳಬಹುದು.  ಸಹಾಯವಾಣಿ ಸಂಖ್ಯೆ 22942300/2400/2500 ಕರೆ ಮಾಡಿ ದಾಖಲೆ ನೀಡಿ ಪಾಸ್ ಪಡೆದುಕೊಳ್ಳಬೇಕು.

ಕಡ್ಡಾಯವಾಗಿ ವೈದ್ಯಕೀಯ ದಾಖಲೆಗಳ ಸಲ್ಲಿಸಿ ಪಾಸ್ ಪಡೆಯಬಹುದು ಎಂದು ರಾಜ್ಯಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. 

Follow Us:
Download App:
  • android
  • ios