ಬೆಳಗಾವಿ(ಏ.25):  ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ 10 ವರ್ಷದ ಬಾಲಕಿ ಮತ್ತು 15 ವರ್ಷದ ಬಾಲಕನಿಗೆ ಕೊರೋನಾ ಸೋಂಕು ದೃಢವಾಗಿದೆ. 

ಕಳೆದ ಎರಡ್ಮೂರು ದಿನಗಳಿಂದ ಪಾಸಿಟಿವ್‌ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಟ್ಟಿದ್ದ ಬೆಳಗಾವಿ ಜಿಲ್ಲೆಯ ಜನತೆಗೆ ಶುಕ್ರವಾರ ಎರಡು ಪ್ರಕರಣ ಕಂಡುಬಂದಿರುವುದು ಆತಂಕ ಮೂಡಿಸಿದೆ. 

ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಮಾನವೀಯತೆ ಮೆರೆದ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ

ಈ ಇಬ್ಬರು ಪಿ​150 ಹಾಗೂ ಪಿ​148 ರ ಜತೆ ಸಂಪರ್ಕ ಹೊಂದಿದ್ದರಿಂದ ಈ ಇಬ್ಬರಿಗೂ ಸೊಂಕು ತಗುಲಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.