ಬಿಜೆಪಿ ಶಾಸಕ ಅಭಯ ಪಾಟೀಲಗೆ ಕೊರೋನಾ ದೃಢ| ಯಡಿಯೂರಪ್ಪ ಪ್ರವಾಹ ಕುರಿತಾದ ಸಭೆ ನಡೆಸಲು ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಕೂಡ ಪಾಲ್ಗೊಂಡಿದ್ದರು| ಸಿಎಂ ಯಡಿಯೂರಪ್ಪ ಕೂಡ ಮತ್ತೊಮ್ಮೆ ಕೊರೋನಾ ಭೀತಿ|

ಬೆಳಗಾವಿ(ಆ.29): ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರಿಗೆ ಶುಕ್ರವಾರ ಕೊರೋನಾ ದೃಢವಾಗಿದ್ದು, ಆದರೆ ಅವರು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಹ ಕುರಿತಾದ ಸಭೆ ನಡೆಸಲು ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಕೂಡ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಅವರು ಬಿಮ್ಸ್‌ಗೆ ಕೊಡಮಾಡಿದ ಆಕ್ಸಿಜನ್‌ ಉಪಕರಣವನ್ನು ಉದ್ಘಾಟನೆ ಮಾಡಿದ್ದರು. 

ರಾಯಣ್ಣ V/S ಶಿವಾಜಿ: ಇಂಥಾ ರಾಜಕಾರಣ ಬೇಕಾ?

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕೂಡ ಮತ್ತೊಮ್ಮೆ ಕೊರೋನಾ ಭೀತಿ ಎದುರಾಗಿದೆ. ಇನ್ನು ನಿನ್ನೆ(ಶುಕ್ರವಾರ) ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಸುಳ್ಯ ಶಾಸಕ ಎಸ್‌.ಅಂಗಾರ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.