ಭಾರತಕ್ಕೂ ಬಂತು ಮಾರಣಾಂತಿಕ ಕೊರೋನಾ : ಇಬ್ಬರಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಮರಣ ಮೃದಂಗ ಭಾರಿಸಿದ ಕೊರೋನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಭಾರತದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ನವದೆಹಲಿ [ಮಾ.02] : ಚೀನಾದಲ್ಲಿ ತನ್ನ ಆರ್ಭಟ ಶುರು ಮಾಡಿ 3000 ಮಂದಿಯನ್ನು ಬಲಿ ಪಡೆದ ಮಾರಣಾಂತಿಕ ಕೊರೋನಾ ಭೀತಿ ಇದೀಗ ಭಾರತಕ್ಕೂ ಹಬ್ಬಿದೆ.
ನವದೆಹಲಿ ಹಾಗೂ ತೆಲಂಗಾಣದಲ್ಲಿ ಇಬ್ಬರಲ್ಲಿ ಕೊರೋನಾ ಪತ್ತೆಯಾಗಿದೆ.
ಓರ್ವ ವ್ಯಕ್ತಿ ಇಟಲಿ ಹಾಗೂ ಇನ್ನೋರ್ವ ವ್ಯಕ್ತಿ ಅರಬ್ ನಿಂದ ಆಗಮಿಸಿದ್ದು, ಇದೀಗ ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ದಿಲ್ಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ರಿಕೆಟ್‌ಗೆ ತಟ್ಟಿದ ಕೊರೊನಾ ವೈರಸ್; ಸಂಕಷ್ಟದಲ್ಲಿ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯ!.
ವಿಶ್ವದಾದ್ಯಂತ 57ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾ ಪತ್ತೆಯಾಗಿದ್ದು, 3000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಶೇ.90ರಷ್ಟು ಸಾವು ಚೀನಾದಲ್ಲಿಯೇ ಸಂಭವಿಸಿವೆ.
ಶುಗರ್ ಪೇಷೆಂಟ್ಸ್‌ಗೆ 'ಸಿಹಿ' ಸುದ್ದಿ! ಡಯಾಬಿಟಿಸ್‌ಗೆ ಮದ್ದು?...
ಈ ಹಿಂದೆ ಕೇರಳದ ಕೆಲ ವ್ಯಕ್ತಿಗಳಲ್ಲಿಯೂ ಕೊರೋನಾ ಸೋಂಕು ಶಂಕೆ ವ್ಯಕ್ತವಾಗಿತ್ತು. ಆದರೆ ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಭಾರತದಲ್ಲಿ ಕೊರೋನಾ ಬಗ್ಗೆ ತೀವ್ರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬೇರೆ ದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.
#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"