ಬಳ್ಳಾರಿಯಲ್ಲಿ ಹೊಲಗಳಿಗೇ ತೆರಳಿ ಕೊರೋನಾ ಲಸಿಕೆ ಅಭಿಯಾನ

* ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ಹಳ್ಳಿ ಮಂದಿ
*  ಕಾರ್ಮಿಕರ ಬಳಿಗೆ ತೆರಳಿ ಮನವೊಲಿಸಿ ಲಸಿಕೆ ನೀಡಿದ ವೈದ್ಯಕೀಯ ಸಿಬ್ಬಂದಿ
* ಸುಳ್ಳು ವದಂತಿ ನಂಬಿದ್ದ ಜನತೆ
 

Corona Vaccine Campaign Held at Rural Area in Ballari grg

ಬಳ್ಳಾರಿ(ಜೂ.17): ಅಪಪ್ರಚಾರಗಳಿಗೆ ಕಿವಿಗೊಟ್ಟು ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸಿದ್ದ ಗ್ರಾಮಸ್ಥರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹೊಲಗಳಿಗೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿರುವ ಘಟನೆ ಬಳ್ಳಾರಿ ಜಿಲ್ಲೆಯಿಂದ ವರದಿಯಾಗಿದೆ. 

ಲಸಿಕೆ ಪಡೆದುಕೊಂಡರೆ ಮದ್ಯಪಾನ ಬಿಡಬೇಕು, ಲಸಿಕೆ ತೆಗೆದುಕೊಂಡವರು ಕೆಲವರು ಸತ್ತು ಹೋಗಿದ್ದಾರೆ, ಪಾರ್ಶ್ವವಾಯು ಬರುವುದಂತೆ, ಪುರುಷಾರ್ಥ ಕುಸಿವುದಂತೆ. ಮೊದಲಾದ ವದಂತಿಗಳನ್ನು ನಂಬಿ ಜಿಲ್ಲೆಯ ಅಮೇಕ ಹಳ್ಳಿಗಳ ಜನ ಲಸಿಕೆ ಕೇಂದ್ರಗಳಿಗೆ ಆಗಮಿಸಿ ಪಡೆಯಲು ಹಿಂದೇಟು ಹಾಕಿದ್ದರು. 

ಜನರ ಆಕ್ರೋಶದಿಂದ ಪ್ರಧಾನಿ ಮೋದಿ ಭಸ್ಮಾಸುರನಂತೆ ನಾಶವಾಗ್ತಾರೆ: ಉಗ್ರಪ್ಪ

ಆರೋಗ್ಯ ಇಲಾಖೆ ಮನೆಮನೆಗೆ ತೆರಳಿ ಲಸಿಕೆ ಅಭಿಯಾನ ಪ್ರಾರಂಭಿಸಿದಾಗ ಹೊಲಗದ್ದೆಗಳಿಗೆ ತೆರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ 50ಕ್ಕೂ ಹೆಚ್ಚು ಕಡೆ ವೈದ್ಯಕೀಯ ಸಿಬ್ಬಂದಿಯೇ ಹೊಲಗದ್ದೆಗಳು, ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಬಳಿಗೆ ತೆರಳಿ ಮನವೊಲಿಸಿ ಕೋವಿಡ್‌ ಲಸಿಕೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios