Asianet Suvarna News Asianet Suvarna News

ಕೊರೋನಾ ರಿಪೋರ್ಟ್ ಎಕ್ಸ್‌ಚೇಂಜ್‌: ಸೋಂಕಿತೆ ಮನೆಗೆ, ನೆಗೆಟಿವ್ ಬಂದಾಕೆ ಐಸೊಲೇಷನ್‌ಗೆ

ರಾಣೇಬೆನ್ನೂರಿನ ಬಾಲಕಿಗೆ ನೆಗಟಿವ್‌ ವರದಿ ಬಂದಿದೆ. ಮುಂಬೈನ ಬಾಲಕಿಗೆ ಪಾಸಿಟಿವ್‌ ವರದಿ ಬಂದಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದ ಎಡವಟ್ಟು ಭಾರಿ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಸೋಮವಾರ ವಿವರಿಸಿದ್ದಾರೆ.

Corona test report exchanged positive girl sent to home
Author
Bangalore, First Published May 26, 2020, 2:05 PM IST

ಮಂಡ್ಯ(ಮೇ 26): ರಾಣೇಬೆನ್ನೂರಿನ ಬಾಲಕಿಗೆ ನೆಗಟಿವ್‌ ವರದಿ ಬಂದಿದೆ. ಮುಂಬೈನ ಬಾಲಕಿಗೆ ಪಾಸಿಟಿವ್‌ ವರದಿ ಬಂದಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದ ಎಡವಟ್ಟು ಭಾರಿ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಸೋಮವಾರ ವಿವರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪುಟ್ಟರಾಜು, ಜಿಲ್ಲಾಡಳಿತ ಕೊರೋನಾ ಪ್ರಕರಣವೊಂದರಲ್ಲಿ ಮಾಹಾ ಎಡವಟ್ಪು ಮಾಡಿಕೊಂಡಿದೆ. ಮೇ 21ರಂದು ಪ್ರಕಟವಾಗಿದ್ದ ಪಿ 1475 ಸೋಂಕಿತ ಬಾಲಕಿ ಹಾಗೂ ಮೇ 24ರಂದು ಪ್ರಕಟವಾಗಿರುವ ಪಿ 2020 ರ ಬಾಲಕಿ ಒಬ್ಬಳೆ ಎಂಬ ಅನುಮಾನ ಕಾಡಿದೆ. ಆದರೆ ಅಸಲಿಗೆ ಸೋಂಕು ತಗುಲಿರುವುದು ಒಬ್ಬರಿಗೆ, ಚಿಕಿತ್ಸೆ ನೀಡುತ್ತಿರುವುದು ಮತ್ತೊಬ್ಬರಿಗೆ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳುತ್ತಾರೆ ಪುಟ್ಟರಾಜು.

ಕ್ವಾರಂಟೈನ್‌ನಲ್ಲಿ ಇಟ್ಟಿದ್ದು ಯಾಕೆ:

ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ದೊಡ್ಡ ಅನಾಹುತ ಆಗಿದೆ. ಮೇ 21ರ ಹೆಲ್ತ್‌ ಬುಲೆಟಿನ್‌ ಪ್ರಕಾರ ಸೋಂಕಿತ ಬಾಲಕಿಗೆ 7 ವರ್ಷ, ಮುಂಬೈನಿಂದ ಬಂದಿರೋ ಟ್ರಾವಲ್ ಹಿಸ್ಟರಿ ಎಂದು ಹೇಳುತ್ತಾರೆ. ಮೇ 24ರ ಹೆಲ್ತ್‌ ಬುಲೆಟಿನ್‌ನಲ್ಲೂ 2020ರ ಸಂಖ್ಯೆಯ ಬಾಲಕಿಗೂ 7 ವರ್ಷ ಮುಂಬೈನಿಂದ ಬಂದಿರೊ ಟ್ರಾವೆಲ್ ಹಿಸ್ಟರಿ ಎಂದು ವಿವರಿಸುತ್ತಾರೆ.

ಒಂದು ರುಪಾಯಿಗೆ ಇಡ್ಲಿ ನೀಡಿ ಹಸಿವು ನೀಗಿಸುವ ಸೆಲ್ವಮ್ಮ

ಆದರೆ ಮೇ 21ರಂದೇ ಅದೇ ಬಾಲಕಿಗೆ ಪಾಸಿಟಿವ್ ಬಂದಿದ್ದರೆ ಆಕೆಯನ್ನು ಐಶೋಲೇಷನ್‌ ವಾರ್ಡ್‌ಗೆ ಕರೆತರದೆ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ಇಟ್ಟಿದ್ದು ಯಾಕೆ ಎಂಬ ಪ್ರಶ್ನೆ ಜಿಲ್ಲಾಡಳಿತವು ಇದುವರೆಗೂ ಉತ್ತರ ನೀಡಿಲ್ಲ.

ಅಧಿಕಾರಿಗಳ ಎಡವಟ್ಟು:

ಮೇ 17ರಂದು ತನ್ನ ಕುಟುಂಬದ ಜತೆ ರಾಣೆಬೆನ್ನೂರಿನಿಂದ ಚಿನಕುರುಳಿಗೆ ಬಂದಿದ್ದ 11 ವರ್ಷದ ಬಾಲಕಿ. ಮೇ 13ರಂದು ತಮ್ಮ ಕುಟುಂಬಸ್ಥರ ಜತೆ ಮುಂಬೈನಿಂದ ಬಂದಿದ್ದ ನಾರಾಯಣಪುರ ಗ್ರಾಮದ 7 ವರ್ಷದ ಬಾಲಕಿ. ಎರಡೂ ಗ್ರಾಮಗಳು ಪಾಂಡವಪುರ ತಾಲೂಕಿಗೆ ಸೇರಿವೆ. ಇಬ್ಬರು ಬಾಲಕಿಯ ಕುಟುಂಬಸ್ಥರ ಗಂಟಲು ದ್ರವವನ್ನು ಮೇ 18ರಂದು ಪಾಂಡವಪುರದಲ್ಲಿ ಸಂಗ್ರಹಲಾಗಿತ್ತು. 21ರಂದು ಎರಡು ವರದಿಗಳು ಬಂದಿತ್ತು. ಈ ವೇಳೆ ಇಲಾಖೆಯ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಬಾಲಕಿಯರನ್ನು ಅದಲು ಬದಲಾಗಿ ಗುರುಸಿಸಲಾಗಿದೆ. ಹೀಗಾಗಿ ಕ್ವಾರಂಟೈನ್‌ನಲ್ಲಿರಬೇಕಾದ ಬಾಲಕಿ ಆಸ್ಪತ್ರೆ ಪಾಲಾದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಬಾಲಕಿ ಕ್ವಾರಂಟೈನ್‌ ಆದಳು.

ಶಾಸಕರ ಪ್ರಶ್ನೆಗೆ ಉತ್ತರವಿಲ್ಲ:

ಮುಂಬೈ ಟ್ರಾವಲ್ ಹಿಸ್ಟರಿ ಹೊಂದಿದ್ದ ಬಾಲಕಿಗೆ ನೆಗಿಟಿವ್‌ ಬಂದಿದೆ ಅನ್ನೋದು ನಂಬದೆ ಮತ್ತೆ ಟೆಸ್ವ್‌ಗೆ ನಾನು ಒತ್ತಾಯಿಸಿದ ಮೇಲೆ ಮತ್ತೊಮ್ಮೆ ಟೆಸ್ವ್‌ ನಡೆಸಿದಾಗ ನಾರಾಯಣಪುರ ಬಾಲಕಿಗೆ ಪಾಸಿಟಿವ್ ಬಂದಿದೆ. ಇತ್ತ ಸರ್ಕಾರ ಬಿಡುಗಡೆ ಮಾಡಿರುವ ಎರಡೂ ಹೆಲ್ತ್‌ ಬುಲೆಟಿನ್‌ನಲ್ಲಿ ಎಲ್ಲೂ 11 ವರ್ಷದ ಬಾಲಕಿಗೆ ಪಾಸಿಟಿವ್‌ ಇದೆ ಅನ್ನೋ ಪ್ರಸ್ತಾಪ ಇಲ್ಲ. ಹಾಗಾದರೆ ಇಬ್ಬರೂ ಬಾಲಕಿಯರಿಗೆ 7 ವರ್ಷ ಎಂದು ವಯಸ್ಸು ನಮೂದಿಸಿರುವುದು ಯಾಕೆ ? ಇಲ್ಲಿ ಯಾರು ತಪ್ಪು ಮಾಡಿದ್ದಾರೆ. ಅಮಾಯಕರನ್ನು ಪಾಸಿಟಿವ್‌ ಹೆಸರಿನಲ್ಲಿ ಚಿಕಿತ್ಸೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಶಾಸಕರ ಪ್ರಶ್ನೆಗೆ ಉತ್ತರವೇ ಇಲ್ಲ. ಈ ಎಲ್ಲ ಸಾಂದರ್ಭಿಕ ಕಾರಣಗಳಿಗಾಗಿ ಎರಡೂ ಪ್ರಕರಣ ಕುರಿತು ಸಮಗ್ರ ತನಿಖೆಗೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕರ ಪುಟ್ಟರಾಜು ಹೇಳಿದರು.

ಈ ಪ್ರಕರಣವನ್ನು ಸಮಗ್ರವಾಗಿ ಪರಿಶೀಲನೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಲೋಪ ಇಲ್ಲ ರಾಣೇಬೆನ್ನೂರು ಬಾಲಕಿಗೆ ಮೊದಲು ನೆಗೆಟಿವ್‌ ಬಂದಿರಬಹುದು. ನಂತರ ಪಾಸಿಟಿವ್‌ ಬಂದಿದೆ. ಮನೆಯಲ್ಲಿ ಕುಟುಂಬದವರಿಗೆ ಯಾರಿಗೂ ಬರದಿದ್ದರೂ ಒಬ್ಬ ವ್ಯಕ್ತಿಗೆ ಬರಬಹುದು. ಮುಂಬೈನಿಂದ ಬಂದ ಬಾಲಕಿಗೂ ಕೂಡ ಮೊದಲು ನೆಗೆಟಿವ್‌ ಬಂತು. ನಂತರ ಪಾಸಿಟಿವ್‌ ಬಂತು. ಹೀಗಾಗಿ ಎರಡು ಪ್ರಕರಣಗಳಲ್ಲಿ ಯಾರು ತಪ್ಪು ಮಾಡಿಲ್ಲ. ಇಬ್ಬರು ಬಾಲಕಿಯರ ಕುಟುಂಬದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಕೆಲವೊಮ್ಮೆ ಸ್ಟೇಟ್‌ ಬುಲೆಟಿನ್‌ನಲ್ಲಿ ಗುಮಾಸ್ತರು ಮಾಡುವ ತಪ್ಪಿನಿಂದ ಇಂತಹ ಅನುಮಾನಗಳು ಮೂಡುತ್ತವೆ ಎಂದು ಡಿಸಿ ಡಾ.ವೆಂಕಟೇಶ್ ತಿಳಿಸಿದ್ದಾರೆ.

ಮೈಮುಲ್‌ ಅಕ್ರಮ ವಿರುದ್ಧ ಹೋರಾಟ ನಿಲ್ಲದು: ಸಾರಾ

ಬಾಲಕಿಯನ್ನು ಗುರ್ತಿಸುವಲ್ಲಿ ಎಡವಟ್ಟು ಮಾಡಿಕೊಂಡಿರುವ ಜಿಲ್ಲಾಡಳಿತ ಪಾಸಿಟಿವ್‌ ಬಂದಿರುವ ಬಾಲಕಿಯನ್ನು ಬಿಟ್ಟು ನೆಗೆಟಿವ್‌ ಬಂದಿದ್ದ ಬಾಲಕಿಯನ್ನು ಐಶುಲೇಷನ್‌ ವಾರ್ಡಗೆ ಅಧಿಕಾರಿಗಳು ಕರೆದು ತಂದಿದ್ದಾರೆ. ರಾಣಿಬೆನ್ನೂರು ಟ್ರಾವಲ… ಹಿಸ್ಟರಿ ಹೊಂದಿರುವ 11 ವರ್ಷದ ಬಾಲಕಿಗೆ ಪಾಸಿಟಿವ್‌ ಎಂದು ಚಿಕಿತ್ಸೆ ನೀಡುತ್ತಿರುವ ಜಿಲ್ಲಾಡಳಿತ. ಇಬ್ಬರು ಬಾಲಕಿಯ ಗಂಟಲು ದ್ರವ ಒಂದೇ ದಿನ, ಒಂದೇ ಟೈಂನಲ್ಲಿ ತೆಗೆದು ಟೆಸ್ವ್‌ಗೆ ಕಳುಹಿಸಿದ್ದರಿಂದ ಇಷ್ಟೆಲ್ಲಾ ಎಡವಟ್ಟು ಆಗಿದೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ತಿಳಿಸಿದ್ದಾರೆ.

Follow Us:
Download App:
  • android
  • ios