Asianet Suvarna News Asianet Suvarna News

Covid-19 Variant: ಹೈರಿಸ್ಕ್‌ ದೇಶದಿಂದ ಬಂದ ಮತ್ತೊಬ್ಬನಿಗೆ ಸೋಂಕು, ಆತಂಕದಲ್ಲಿ ಜನತೆ

*   ಲಂಡನ್‌ನಿಂದ ಬಂದ ಒಬ್ಬರಲ್ಲಿ ಸೋಂಕು ಪತ್ತೆ
*   ಹೈರಿಸ್ಕ್‌ ದೇಶಗಳಿಂದ ಬಂದ ಸೋಂಕಿತರ ಸಂಖ್ಯೆ ಮೂರಕ್ಕೇರಿಕೆ
*   211 ಮಂದಿಗೆ ಸೋಂಕು: 133 ಗುಣ
 

Corona Positive to Man Who Came From High Risk Country to Bengaluru grg
Author
Bengaluru, First Published Dec 10, 2021, 7:25 AM IST

ಬೆಂಗಳೂರು(ಡಿ.10):  ಲಂಡನ್‌ನಿಂದ(London) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗಿನ ಜಾವ ಬಂದಿಳಿದ ಪ್ರಯಾಣಿಕರ(Passengers) ಪೈಕಿ ಒಬ್ಬರಲ್ಲಿ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದ ಎರಡು ದಿನಗಳಲ್ಲಿ ಹೈರಿಸ್ಕ್‌ ದೇಶಗಳಿಂದ ಆಗಮಿಸಿ ಸೋಂಕು ದೃಢಪಟ್ಟವರ ಸಂಖ್ಯೆ ಮೂರಕ್ಕೆ ಹೆಚ್ಚಳವಾಗಿದೆ.

ಬುಧವಾರವಷ್ಟೇ ಜರ್ಮನಿಯ(Germany) ಫ್ರಾಂಕ್‌ಫರ್ಟ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಗುರುವಾರ ಬೆಳಿಗ್ಗೆ 5 ಗಂಟೆಗೆ ಲಂಡನ್‌ನಿಂದ ಬಂದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿದಾಗ ಒಬ್ಬರ ಸೋಂಕು ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ. ಸೋಂಕಿತರ ವ್ಯಕ್ತಿಯ ಗಂಟಲು ಮಾದರಿಯನ್ನು(Swab) ವಂಶವಾಹಿ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ(Lab) ಕಳುಹಿಸಲಾಗಿದೆ. ಸೋಂಕಿತರನ್ನು ಬೌರಿಂಗ್‌ ಆಸ್ಪತ್ರೆಗೆ ವರ್ಗಾಹಿಸಲಾಗಿದ್ದು, ಮೂವರಿಗೂ ಸೋಂಕಿನ ಲಕ್ಷಣಗಳಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

Covid 19 Booster Doseಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು: ರೋಗನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಲಸಿಕೆ

211 ಮಂದಿಗೆ ಸೋಂಕು: 133 ಗುಣ

ಬೆಂಗಳೂರು(Bengaluru) ನಗರದಲ್ಲಿ ಗುರುವಾರ ಹೊಸದಾಗಿ 211 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ, ಮೂವರು ಪುರುಷರು ಸೇರಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ(Death).

114 ಪುರುಷರು ಮತ್ತು 97 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,58,330ಕ್ಕೆ ಏರಿಕೆ ಆಗಿದೆ. ನಾಲ್ವರ ಸಾವಿನಿಂದ ಒಟ್ಟು ಸಾವಿನ ಸಂಖ್ಯೆ 16,359 ತಲುಪಿದೆ. ಒಂದೇ ದಿನ 133 ಜನರು ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,36,462ಕ್ಕೆ ಏರಿಕೆ ಆಗಿದೆ. ಸಕ್ರಿಯವಾಗಿರುವ 5,509 ಕೋವಿಡ್‌ ರೋಗಿಗಳಿಗೆ(Covid Patients) ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಿಬಿಎಂಪಿ(BBMP) ವ್ಯಾಪ್ತಿಯ ಎಂಟು ವಲಯಗಳಲ್ಲಿನ ಒಟ್ಟು ಕಂಟೈನ್ಮೆಂಟ್‌ ವಲಯಗಳ(Containment Zone) ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿಯಲ್ಲಿ 23, ದಕ್ಷಿಣ ವಲಯ 13, ಪೂರ್ವ 15, ಪಶ್ಚಿಮ 6, ಯಲಹಂಕ 10, ಮಹದೇವಪುರ 13, ಆರ್‌ಆರ್‌ ನಗರ 3, ದಾಸರಹಳ್ಳಿಯಲ್ಲಿ 2 ಕಂಟೈನ್ಮೆಂಟ್‌ ವಲಯಗಳು ಇವೆ.

ಬೆಳ್ಳಂದೂರಲ್ಲಿ ಅಧಿಕ ಕೊರೋನಾ ಕೇಸ್‌:

ಕಳೆದ 10 ದಿನಗಳಲ್ಲಿ ಬೆಳ್ಳಂದೂರು ವಾರ್ಡ್‌ ವ್ಯಾಪ್ತಿಯಲ್ಲಿ ಅಧಿಕ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ನಿತ್ಯ 8 ಕೇಸ್‌ಗಳು ಪತ್ತೆ ಆಗುತ್ತಿವೆ. ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ಹೊಂಬೆಗೌಡ ನಗರ, ಆಜಾದ್‌ ನಗರ, ಕೆ.ಆರ್‌.ಮಾರುಕಟ್ಟೆ, ಛಲವಾದಿಪಾಳ್ಯ, ರಾಯಪುರ, ಜಗಜೀವನ್‌ ರಾಮ್‌ನಗರ, ಪಾದರಾಯನಪುರ, ಬಾಪೂಜಿನಗರ ಮತ್ತು ಅತ್ತಿಗುಪ್ಪೆ ವಾರ್ಡ್‌ ವ್ಯಾಪ್ತಿಯ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ ಎಂದು ಬಿಬಿಎಂಪಿಯ ಕೊರೋನಾ ವರದಿ ತಿಳಿಸಿದೆ.

Coronavirus Update ಒಮ್ರಿಕಾನ್ ಭೀತಿ ಮಧ್ಯೆ ರಾಜ್ಯದಲ್ಲಿ ಕೊರೋನಾ ಏರಿಳಿತ

ಹೈರಿಸ್ಕ್‌ ದೇಶಗಳಿಂದ ಬಂದವರ ವರದಿ ನೆಗೆಟಿವ್‌ ಇದ್ರೂ ಆರ್‌ಟಿಪಿಸಿಆರ್‌ ಟೆಸ್ಟ್‌

ದಕ್ಷಿಣ ಆಫ್ರಿಕಾ(South Africa) ಸೇರಿದಂತೆ ಅಪಾಯಕಾರಿ ದೇಶಗಳಿಂದ ಬಂದವರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಇದ್ದರೂ ಮತ್ತೊಮ್ಮೆ ಆರ್‌ಟಿಪಿಸಿಆರ್‌(RTPCR) ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದರು.

ನಗರಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕರಿಗೆ(International Passengers) ಎರಡು ಲಸಿಕೆ(Vaccine) ಮತ್ತು ಕೋವಿಡ್‌ ಆರ್‌ಟಿಪಿಸಿಆರ್‌ ಆಗಿದೆಯೇ ಎಂಬುದನ್ನು ತಪಾಸಣೆ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ. ನಗರಕ್ಕೆ ಯಾರೇ ಬಂದರೂ ಅವರು ಎರಡು ಲಸಿಕೆ ಪಡೆದಿರುವುದು ಮತ್ತು 72 ಗಂಟೆಗಳೊಳಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡಿರುವ ವರದಿ ತರುವುದು ಕಡ್ಡಾಯವಾಗಿದೆ. ಆದರೆ ಅಪಾಯಕಾರಿ ದೇಶಗಳಿಂದ ಬಂದವರ ಕೋವಿಡ್‌ ವರದಿ ನೆಗೆಟಿವ್‌ ಇದ್ದರೂ ಮತ್ತೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios