ಕಾರವಾರ(ಮೇ 09): ಕೊರೋನಾ ಸೋಂಕಿತರು ಆಸ್ಪತ್ರೆಯಲ್ಲಿ ರಂಜಾನ್ ಆಚರಿಸಲು ಹಾಗೂ ರೋಜಾ ಮಾಡಲು ಅವಕಾಶ ಬೇಕೆಂದು ಕೇಳಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ರೋಝಾ ಮಾಡಲು ಅವಕಾಶ ಕೇಳಿದ ಕೊರೋನಾ ಸೊಂಕಿತರು ರಂಜಾನ್ ಹಿನ್ನೆಲೆಯಲ್ಲಿ ರೋಜಾ ಮಾಡಲು ಆಸ್ಪತ್ರೆಯಲ್ಲಿ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ತುಮಕೂರಿನ ಪಾವಗಡದಲ್ಲೂ ತಬ್ಲೀಘಿ ಟೆನ್ಷನ್; ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ..!

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೋವಿಡ್ ವಾರ್ಡ್‌ನಲ್ಲಿ ದಾಖಲಾಗಿರುವ ಸೋಂಕಿತರಿಂದ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಆರೋಗ್ಯ ದೃಷ್ಠಿಯಿಂದ ಸೋಂಕಿತರ ಮನವಿಯನ್ನು ತಿರಸ್ಕರಿಸಿದೆ.

ನಿನ್ನೆ ಭಟ್ಕಳದ 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ರಾತ್ರಿ ವೇಳೆ ಸೋಂಕಿತರನ್ನು ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್-19 ವಿಶೇಷ ವಾರ್ಡ್‌ಗೆ ರವಾನಿಸಲಾಗಿತ್ತು.

ಕೊರೋನಾ ಸೋಂಕು ದೃಢ: ಶಿರಾ ನಗರದಲ್ಲಿ ಹೈ ಅಲರ್ಟ್‌, ಡಿಸಿ ರಾಕೇಶ್ ಕುಮಾರ್

ಸೋಂಕಿತರು ರಂಜಾನ್ ಹಿನ್ನೆಲೆಯಲ್ಲಿ ಉಪವಾಸವಿದ್ದು ರೋಜಾ ಮಾಡುತಿದ್ದರು. ಆರೋಗ್ಯ ಮತ್ತಷ್ಟು ಹದೆಗೆಡುವುದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಂಕಿತರ ಮನಪರಿವರ್ತನೆ ಮಾಡಲಾಗಿದೆ. ಕಡ್ಡಾಯವಾಗಿ ಮಾತ್ರೆ ಸೇರಿದಂತೆ ಚಿಕಿತ್ಸೆಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಪಂಚಾಯತ್ ಸಿ.ಇ.ಓ ಎಂ. ರೋಷನ್ ಮಾಹಿತಿ ನೀಡಿದ್ದಾರೆ.