ಚಿಕ್ಕಬಳ್ಳಾಪುರ : 73 ಆರಕ್ಷಕರಿಗೆ ಸೋಂಕು ಪಾಸಿಟಿವ್‌ - 2 ಸಾವು

  • ಜಿಲ್ಲೆಯಲ್ಲಿ 73 ಮಂದಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌
  •  ಇಬ್ಬರು ಪೇದೆಗಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ
  • ಜಿಲ್ಲೆಯಲ್ಲಿ 48 ಕೊರೊನಾ ಸಕ್ರಿಯ ಪ್ರಕರಣಗಳು (ಸೋಂಕಿತ ಪೊಲೀಸ್ )
Corona positive for 73 police  in  chikkaballapura snr

ಚಿಕ್ಕಬಳ್ಳಾಪುರ (ಮೇ.24):  ಒಟ್ಟು 73 ಮಂದಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ವ್ ಬಂದಿದ್ದು ಆ ಪೈಕಿ ಇಬ್ಬರು ಪೇದೆಗಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.  

ಉಳಿದಂತೆ 23 ಮಂದಿ ಕೆಲಸಕ್ಕೆ ಹಾಜರಾಗಿದ್ದು ಇನ್ನೂ ಜಿಲ್ಲೆಯಲ್ಲಿ 48 ಕೊರೊನಾ ಸಕ್ರಿಯ ಪ್ರಕರಣಗಳು ಇವೆಯೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಕಳೆದ ಏಪ್ರಿಲ್‌ 1ರಿಂದ ಮೇ.22 ರ ಅಂತ್ಯವರೆಗೂ ಜಿಲ್ಲೆಯಲ್ಲಿ ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಹಾಗೂ ಜಿಲ್ಲಾಡಳಿತ ಹೇರಿದ್ದ ಸಂಪೂರ್ಣ ಲಾಕ್‌ಡೌನ್‌ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸಿದ 2,683 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆಯೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಚೇತರಿಕೆ ಜತೆ ಸಾವಿನ ಸಂಖ್ಯೆಯೂ ಏರಿಕೆ, ಎಚ್ಚರ ತಪ್ಪುವಂತೆ ಇಲ್ಲ

ಒಟ್ಟು ವಶಕ್ಕೆ ಪಡೆದಿರುವ 2,683 ವಾಹನಗಳ ಪೈಕಿ 2,517 ದ್ವಿಚಕ್ರ ವಾಹನ, 114 ಕಾರು ಹಾಗೂ ಇತರೇ 52 ವಾಹನಗಳನ್ನು ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದು ಕೊರೋನಾ ಸಂಕಷ್ಟದ ನಡುವೆಯು ಬೇಜವಾಬ್ದಾರಿಯಿಂದ ಮಾಸ್ಕ್‌ ಹಾಕದ ಜಿಲ್ಲೆಯ 13,694 ಮಂದಿಯಿಂದ ಒಟ್ಟು 13,73,600 ರು, ದಂಡ ವಸೂಲಿ ಮಾಡಲಾಗಿದೆಯೆಂದರು.

162 ಕೇಸ್‌ ದಾಖಲು: 

ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯಡಿ ಒಟ್ಟು 136 ಪ್ರಕರಣ ಹಾಗು ಸಾಂಕ್ರಾಮಿಕ ರೋಗ ಕಾಯ್ದೆಯ ಉಲ್ಲಂಘಿಸಿರುವ ಒಟ್ಟು 26 ಪ್ರಕರಣ ಸೇರಿ ಒಟ್ಟು 162 ಪ್ರಕರಣಗಳನ್ನು ಇದುವರೆಗೂ ಜಿಲ್ಲೆಯ ಆರು ತಾಲೂಕುಗಳಲ್ಲಿ ದಾಖಲಿಸಲಾಗಿದೆಯೆಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios