Asianet Suvarna News Asianet Suvarna News

Covid-19 Variant: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು 30 ಲಕ್ಷಕ್ಕೆ?

*  ಶುಕ್ರವಾರ 314 ಕೇಸ್‌, ಒಟ್ಟು ಸೋಂಕಿತರು 29,99,785
*  ಶೇ.0.26 ಪಾಸಿಟಿವಿಟಿ ದರ ದಾಖಲು
*  ಕೋವಿಡ್‌ ಮರಣ ದರ ಶೇ.0.63 ದಾಖಲು 
 

Corona Positive Cases May Reach 30 Lakh  on Dec 11 th in Karnataka grg
Author
Bengaluru, First Published Dec 11, 2021, 6:17 AM IST

ಬೆಂಗಳೂರು(ಡಿ.11): ರಾಜ್ಯದಲ್ಲಿ(Karnataka) ಶುಕ್ರವಾರ 314 ಮಂದಿಯಲ್ಲಿ ಕೋವಿಡ್‌-19(Covid19) ಸೋಂಕು ದೃಢಪಟ್ಟಿದ್ದು. ಇಬ್ಬರು ಮೃತರಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,99,785ಕ್ಕೆ ಮತ್ತು ಸಾವಿನ ಸಂಖ್ಯೆ 38,255ಕ್ಕೆ ತಲುಪಿದೆ. ಅಂದರೆ ಶನಿವಾರ ರಾಜ್ಯದಲ್ಲಿ ಕನಿಷ್ಠ 215 ಜನರಿಗೆ ಸೋಂಕು ತಗುಲಿದರೆ ಒಟ್ಟು ಸೋಂಕಿತರ ಸಂಖ್ಯೆ 30 ಲಕ್ಷ ತಲುಪಲಿದೆ. ಇದುವರೆಗೆ 29.54 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 7,305 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ರಾಜ್ಯದಲ್ಲಿ 1.19 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.0.26 ಪಾಸಿಟಿವಿಟಿ ದರ ದಾಖಲಾಗಿದೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಶುಕ್ರವಾರ 3.51 ಲಕ್ಷ ಡೋಸ್‌ ಲಸಿಕೆ(Vaccine) ನೀಡಲಾಗಿದೆ. 30 ಮಂದಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 84,725 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 2.66 ಲಕ್ಷ ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 7.97 ಕೋಟಿ ಡೋಸ್‌ ಲಸಿಕೆ ನೀಡಲಾಗಿದ್ದು 4.63 ಕೋಟಿ ಮೊದಲ ಮತ್ತು 3.34 ಕೋಟಿ ಎರಡನೇ ಡೋಸ್‌ ನೀಡಲಾಗಿದೆ.

Omicron In Karnataka : ಒಮಿಕ್ರೋನ್‌ ಸೋಂಕು ತಗುಲಿದವರಿಗೆ ಕರ್ನಾಟಕದಲ್ಲಿ ಹೊಸ ರೂಲ್ಸ್!

ಬೆಂಗಳೂರು(Bengaluru) ನಗರದಲ್ಲಿ 179, ದಕ್ಷಿಣ ಕನ್ನಡ, ಕೊಡಗು ತಲಾ 26, ಚಿಕ್ಕಮಗಳೂರು 19, ಮೈಸೂರು ಜಿಲ್ಲೆಯಲ್ಲಿ 15 ಪ್ರಕರಣ ದಾಖಲಾಗಿದೆ. ಯಾದಗಿರಿ, ವಿಜಯಪುರ, ರಾಯಚೂರು, ರಾಮನಗರ, ಕೊಪ್ಪಳ, ಹಾವೇರಿ, ದಾವಣಗೆರೆ, ಚಿಕ್ಕಬಳ್ಳಾಪುರ, ಬೀದರ್‌ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ವರದಿಯಾಗಿದೆ. ಸತತ ಎರಡನೇ ದಿನ ಬೆಂಗಳೂರು ನಗರದಲ್ಲಿ ಮಾತ್ರ ಕೋವಿಡ್‌ ಸಾವು ವರದಿಯಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೋವಿಡ್‌ ಸಾವು ದಾಖಲಾಗಿಲ್ಲ. ದಿನದ ಕೋವಿಡ್‌ ಮರಣ ದರ ಶೇ.0.63 ದಾಖಲಾಗಿದೆ.

ಆರೋಗ್ಯ ಕಾರ್ಯಕರ್ತರು 7.64 ಲಕ್ಷ, ಮುಂಚೂಣಿ ಕಾರ್ಯಕರ್ತರು 9.43 ಲಕ್ಷ, 18 ರಿಂದ 45 ವರ್ಷದೊಳಗಿನ 2.65 ಕೋಟಿ, 45 ವರ್ಷ ಮೇಲ್ಪಟ್ಟ1.81 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಎರಡನೇ ಡೋಸ್‌ ಅನ್ನು ಆರೋಗ್ಯ ಕಾರ್ಯಕರ್ತರು 7.11 ಲಕ್ಷ, ಮುಂಚೂಣಿ ಕಾರ್ಯಕರ್ತರು 8.77 ಲಕ್ಷ, 18 ರಿಂದ 44 ವರ್ಷದೊಳಗಿನ 1.77 ಕೋಟಿ, 45 ವರ್ಷ ಮೇಲ್ಪಟ್ಟ1.43 ಕೋಟಿ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಬೆಂಗ್ಳೂರಲ್ಲಿ ಕೊಂಚ ಇಳಿದ ಸೋಂಕು 

ಬೆಂಗಳೂರು ನಗರದಲ್ಲಿ ಕೊರೋನಾ(Coronavirus) ಅಬ್ಬರ ಕೊಂಚ ಕಡಿಮೆಯಾಗಿದ್ದು, ಶುಕ್ರವಾರ ಹೊಸದಾಗಿ 179 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ, ಇಬ್ಬರು ಪುರುಷರು ಮೃತಪಟ್ಟಿದ್ದಾರೆ(Death).

Corona Update:ರಾಜ್ಯದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಡಿ.10ರ ಅಂಕಿ-ಸಂಖ್ಯೆ

ಪುರುಷರು 104 ಮತ್ತು 75 ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12,58,509ಕ್ಕೆ ಏರಿಕೆ ಆಗಿದೆ. ಇಬ್ಬರ ಸಾವಿನಿಂದ ಒಟ್ಟು ಸಾವಿನ ಸಂಖ್ಯೆ 16,361 ತಲುಪಿದೆ. 204 ಜನರು ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,36,666ಕ್ಕೆ ಏರಿದೆ. ಸಕ್ರಿಯವಾಗಿರುವ 5,482 ಕೋವಿಡ್‌ ರೋಗಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಒಟ್ಟು ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 86ಕ್ಕೆ ಏರಿದೆ. ಬೊಮ್ಮನಹಳ್ಳಿಯಲ್ಲಿ 23, ದಕ್ಷಿಣ ವಲಯ 13, ಪೂರ್ವ 15, ಪಶ್ಚಿಮ 6, ಯಲಹಂಕ 8, ಮಹದೇವಪುರ 16, ಆರ್‌ಆರ್‌ ನಗರ 3, ದಾಸರಹಳ್ಳಿಯಲ್ಲಿ 2 ಕಂಟೈನ್ಮೆಂಟ್‌ ವಲಯಗಳು ಇವೆ.

49,928 ಮಂದಿಗೆ ಲಸಿಕೆ

ಕೊರೋನಾ ಸೋಂಕಿನ ತೀವ್ರತೆ ಹಾಗೂ ಹೊಸ ವೈರಾಣು ಪತ್ತೆಯಿಂದ ಎಚ್ಚೆತ್ತ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಪರಿಣಾಮ ಶುಕ್ರವಾರ ಒಂದೇ ದಿನ 49,928 ಮಂದಿಗೆ ಲಸಿಕೆ ನೀಡಲಾಗಿದೆ.
ಬಿಬಿಎಂಪಿ ಎಂಟು ವಲಯಗಳ ವ್ಯಾಪ್ತಿಯ ವಿವಿಧ ಪ್ರಾಥಮಿಕ ಆರೋಗ್ಯ, ಸರ್ಕಾರ ಆಸ್ಪತ್ರೆ ಮತ್ತು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಈವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 1,46,96,699 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಇದರಲ್ಲಿ ಒಟ್ಟು 82,59,163 ಮಂದಿಗೆ ಮೊದಲ ಡೋಸ್‌ ಪಡೆದರೆ, 64,37,536 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.
 

Follow Us:
Download App:
  • android
  • ios