ಚಿತ್ರದುರ್ಗಕ್ಕೂ ಕೊರೋನಾ? ವರದಿ ಬರುವ ಮುಂಚೆಯೇ ಬಹಿರಂಗಪಡಿಸಿದ ಬಿಜೆಪಿ ಶಾಸಕ
ಹಸಿರು ವಲಯದಲ್ಲಿದ್ದ ಚಿತ್ರದುರ್ಗಕ್ಕೂ ಅಮರಿಕೊಳ್ತು ಕೊರೋನಾ. ಗುಜರಾತಿನಿಂದ ಬಂದಿದ್ದ ಹದಿನೈದು ಮಂದಿ ಪೈಕಿ ಮೂವರಿಗೆ ಸೋಂಕು ತಗುಲಿರುವ ಶಂಕೆ ಇದೆ. ವರದಿ ಬರುವ ಮುನ್ನವೇ ಬಿಜೆಪಿ ಶಾಸಕ ಘೋಷಣೆ ಮಾಡಿದ್ದಾರೆ.
ಚಿತ್ರದುರ್ಗ, (ಮೇ.08): ಕೋಟೆನಾಡು ಚಿತ್ರದುರ್ಗಕ್ಕೂ ಕೊರೋನಾ ಕಂಟಕ ಇದೀಗ ತಗುಲಿದೆ ಎನ್ನುವ ಮಾಹಿತಿಯನ್ನು ಬಿಜೆಪಿ ಶಾಸಕ ಶಾಸಕ ತಿಪ್ಪಾರೆಡ್ಡಿಯವರೇ ಪತ್ರದ ಬಹಿರಂಗಪಡಿಸಿದ್ದಾರೆ.
ಕೋಟೆನಾಡು ಚಿತ್ರದುರ್ಗಕ್ಕೂ ಕೊರೋನಾ ಕಂಟಕ ಇದೀಗ ತಗುಲಿದೆ. ಗುಜರಾತ್‌ನಿಂದ ಬಂದ 15 ಜನರಲ್ಲಿ ಮೂವರಿಗೆ ಕೊರೋನಾ ಲಕ್ಷಣಗಳು ಕಂಡುಬಂದಿವೆ.
ಹೀಗಾಗಿ ಗ್ರೀನ್ ಝೋನ್ ನಲ್ಲಿದ್ದಂತ ಚಿತ್ರದುರ್ಗಕ್ಕೂ ಕೊರೋನಾ ಕಾಲಿಟ್ಟು ಜಿಲ್ಲೆಯ ಜನರಿಗೆ ಬಿಗ್ ಶಾಕ್ ನೀಡಿದೆ. ಈ ಮೂಲಕ ಕೋಟೆ ನಾಡಿಗೂ ತಬ್ಲೀಘಿಗಿ ನಂಟು ಹಂಟಿರುವುದಾಗಿ ತಿಳಿದು ಬಂದಿದೆ. ಇದನ್ನು ಶಾಸಕ ತಿಪ್ಪಾರೆಡ್ಡಿಯವರೇ ಪತ್ರದ ಮೂಲಕ ಮಾಹಿತಿ ಬಹಿರಂಗ ಮಾಡಿದ್ದಾರೆ.
ಹೆಚ್ಚಾಗಲಿದೆ ಕೊರೋನಾ ಕಂಟಕ, ಗುಡ್ ನ್ಯೂಸ್ ಕೊಟ್ರಾ ದೀಪಿಕಾ; ಮೇ.8ರ ಟಾಪ್ 10 ಸುದ್ದಿ!
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಅಹಮದಾಬಾದ್ ನಿಂದ ಬಂದ ತಬ್ಲೀಘಿಗಳ ಮೂಲಕ ಕೊರೊನಾ ಸೋಂಕು ಹಸಿರು ಝೋನ್ ನಲ್ಲಿದ್ದ ಚಿತ್ರದುರ್ಗಕ್ಕೆ ವಕ್ಕರಿಸುವ ಸಾಧ್ಯತೆ ದಟ್ಟವಾಗಿದೆ.
ಕೊರೋನಾ ಬುಲೆಟಿನ್ ಬರುವುದಕ್ಕೆ ಮುನ್ನವೇ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಪಾಸಿಟಿವ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ನಿವಾಸದ ಸಮೀಪ ಕ್ವಾರೆಂಟೈನ್ ಮಾಡಿರುವ ತಬ್ಲೀಘಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ತಬ್ಲೀಘಿಗಳನ್ನು ಊರ ಹೊರಗೆ ಕ್ವಾರೆಂಟೈನ್ ಮಾಡಬೇಕಿತ್ತು. ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯತೆಯಿಂದ ಜನರ ಓಡಾಟ ಹೆಚ್ಚಾಗಿರುವ ಕಡೆ ಕ್ವಾರೆಂಟೈನ್ ಮಾಡಲಾಗಿದೆ. ಮೊನ್ನೆ ಗುಜರಾತಿನ ಅಹಮದಾಬಾದ್ ನಿಂದ ಬಂದ 15ಜನರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಜೊತೆಗೆ ಬಂದವರಲ್ಲಿ ಕೆಲವರು ಪಾವಗಡಕ್ಕೂ ಹೋಗಿದ್ದಾರೆ. ಇವರಿಂದ ಮತ್ತಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ತಬ್ಲೀಘಿಗಳನ್ನು ನಗರದ ಹೊರಭಾಗದ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸ್ಥಳಾಂತರಕ್ಕೆ ತಗಲುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.