ಉಡುಪಿ(ಮೇ 16): ಉಡುಪಿ ಜಿಲ್ಲೆಯ ಯುವಕರಿಗೆ ಒಂದು ಕಾಲದಲ್ಲಿ ಕರೆಕರೆದು ಉದ್ಯೋಗ ನೀಡಿದ ದುಬೈ ಈಗ ತಲೆನೋವಾಗಿ ಕಾಡುತ್ತಿದೆ. ಸುಮಾರು 47 ದಿನಗಳ ಕಾಲ ಹೊಸ ಕೊರೋನಾ ಪ್ರಕರಣಗಳಲ್ಲಿದೆ ಸ್ವಲ್ಪಮಟ್ಟಿನ ನಿರಾಳತೆ ಅನುಭವಿಸುತಿದ್ದ ಉಡುಪಿ ಜಿಲ್ಲೆಗೆ ಕೊರೋನಾ ಹಾಟ್‌ಸ್ಪಾಟ್‌ ದುಬೈ ಶುಕ್ರವಾರ ಮತ್ತೆ 6 ಕೊರೋನಾ ಪ್ರಕರಣಗಳನ್ನು ನೀಡಿ ಆತಂಕಕ್ಕೆ ಗುರಿ ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ಇದುರುವರೆಗೆ 8 ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಮಾಚ್‌ರ್‍ ತಿಂಗಳಲ್ಲಿ ಪತ್ತೆಯಾದ 3 ಪ್ರಕರಣಗಳಲ್ಲಿ 2 ಪ್ರಕರಣಗಳೂ ದುಬೈಯಿಂದ ಬಂದವುಗಳೇ ಆಗಿದ್ದವು. ಒಬ್ಬರು ಮಾತ್ರ ಕೇರಳದಿಂದ ಈ ಸೊಂಕನ್ನು ಉಡುಪಿಗೆ ತಂದಿದ್ದರು.

ಬಾಲ್ಯದ ದಿನಗಳಲ್ಲಿ ಹೀಗಿದ್ರು ಮುತ್ತಪ್ಪ ರೈ, ಚೈಲ್ಡ್‌ಹುಡ್ ಫ್ರೆಂಡ್ ಏನ್ ಹೇಳ್ತಾರೆ ಕೇಳಿ

ಈ ಆತಂಕದ ನಡುವೆಯೇ ಶುಕ್ರವಾರ ಮತ್ತೆ 24 ಮಂದಿ ಹಾಟ್‌ಸ್ಪಾಟ್‌ಗಳಿಂದ ಬಂದವರ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ 4 ಮಂದಿ ಜ್ವರ, ಇಬ್ಬರು ಕೋವಿಡ್‌ ಸಂಪರ್ಕ ಹಾಗೂ ಒಬ್ಬರು ಉಸಿರಾಟದ ತೊಂದರೆಯಲ್ಲಿರುವವರ ಮಾದರಿಗಳು ಸೇರಿ ಒಟ್ಟು 31 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಉಡುಪಿಯಲ್ಲಿ ದುಬೈ ಕರಿನೆರಳು: ಗ್ರೀನ್ ಝೋನಲ್ಲಿ 5 ಪಾಸಿಟಿವ್ ಕೇಸ್

ಶುಕ್ರವಾರ ಉಡುಪಿ ಜಿಲ್ಲೆಯ 138 ಮಾದರಿಗಳ ವರದಿಗಳು ಬಂದಿದ್ದು, ಅದರಲ್ಲಿ 6 ಪಾಸಿಟಿವ್‌ ಆಗಿದ್ದರೆ, ಉಳಿದ 133 ನೆಗೆಟಿವ್‌ ಆಗಿವೆ. ಪ್ರಯೋಗಾಲಯದಿಂದ ಇನ್ನೂ 32 ಮಾದರಿಗಳ ವರದಿಗಳು ಬರಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 725 ಹೋಂಕ್ವಾರಂಟೈನ್‌ನಲ್ಲಿ, 14 ಹಾಸ್ಟಿಟಲ್‌ ಕ್ವಾರಂಟೈನ್‌ ಮತ್ತು 66 ಮಂದಿ ಐಸೋಲೇಶನ್‌ ವಾರ್ಡ್‌ನಲ್ಲಿ ನಿಗಾದಲ್ಲಿದ್ದಾರೆ. ಅವರಲ್ಲಿ 12 ಮಂದಿಯನ್ನು ಹೈರಿಂಗ್ ಶಂಕಿತರು ಎಂದು ಗುರುತಿಸಲಾಗಿದೆ.