ಉಡುಪಿಯಲ್ಲಿ ದುಬೈ ಕರಿನೆರಳು: ಗ್ರೀನ್ ಝೋನಲ್ಲಿ 5 ಪಾಸಿಟಿವ್ ಕೇಸ್
ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನದಲ್ಲಿ 5 ಹೊಸ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಕಳೆದ 47 ದಿನಗಳಿಂದ ಕೊರೋನಾ ಪಾಸಿಟಿವ್ ಕೇಸ್ ಗಳಿಲ್ಲದೇ ಗ್ರೀನ್ ಝೋನ್ ನ ಎಲ್ಲಾ ಲಾಕ್ ಡೌನ್ ಸಡಿಲಿಕೆಗಳನ್ನು ಅನುಭವಿಸುತಿದ್ದ ಉಡುಪಿ ಜಿಲ್ಲೆಗೆ ಇದು ಮತ್ತೇ ಆತಂಕಕ್ಕೆ ಕಾರಣವಾಗಿವೆ.
ಉಡುಪಿ(ಮೇ 15): ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನದಲ್ಲಿ 5 ಹೊಸ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಕಳೆದ 47 ದಿನಗಳಿಂದ ಕೊರೋನಾ ಪಾಸಿಟಿವ್ ಕೇಸ್ ಗಳಿಲ್ಲದೇ ಗ್ರೀನ್ ಝೋನ್ ನ ಎಲ್ಲಾ ಲಾಕ್ ಡೌನ್ ಸಡಿಲಿಕೆಗಳನ್ನು ಅನುಭವಿಸುತಿದ್ದ ಉಡುಪಿ ಜಿಲ್ಲೆಗೆ ಇದು ಮತ್ತೇ ಆತಂಕಕ್ಕೆ ಕಾರಣವಾಗಿವೆ.
ಈ 5 ಮಂದಿಯೂ ಮೇ 12ರಂದು ದುಬೈಯಿಂದ ಉಡುಪಿಗೆ ಬಂದವರಾಗಿದ್ದಾರೆ. ಒಟ್ಟು 176 ಮಂದಿ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ 53 ಮಂದಿ ಉಡುಪಿ ಜಿಲ್ಲೆಯವರಾಗಿದ್ದರು. ಅವರನ್ನು ಅಲ್ಲಿಯೇ ಪರೀಕ್ಷೆಗೊಳಪಡಿಸಿ, ಅವರ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಉಡುಪಿ ಜಿಲ್ಲೆಗೆ ಕರೆತಂದು ಸರ್ಕಾರಿ ಕ್ವಾರಂಟೈನ್ ಗೊಳಪಡಿಸಲಾಗಿತ್ತು.
ರಾಜ್ಯದಲ್ಲಿ ಕೋವಿಡ್ 19 ಸಮೂಹ ಸೋಂಕಿನ ಯಾವುದೇ ಲಕ್ಷಣಗಳಿಲ್ಲ: ಸುಧಾಕರ್
ಇದೀಗ ಅವರಲ್ಲಿ ಪ್ರಥಮ ಹಂತದಲ್ಲಿ 3 ಪುರುಷರು ಮತ್ತು2 ಬ್ಬರು ಮಹಿಳೆಯರೂ ಸೇರಿ ಒಟ್ಟು 5 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಆದರೇ ಅವರೆಲ್ಲರೂ ಕ್ವಾರಂಟೈನ್ ನಲ್ಲಿರುವುದರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆಗಳಿಲ್ಲದಿರುವುದು ಸ್ವಲ್ಪ ಸಮಾಧಾನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಎಲ್ಲಾ ಪ್ರಯಾಣಿಕರನ್ನು ಅದೇ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಬೇಕು. ಅದರಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 176 ಮಂದಿಯನ್ನು ಮಂಗಳೂರಿನಲ್ಲಿಯೇ ಕ್ವಾರಂಟೈನ್ ಮಾಡಬೇಕಾಗಿತ್ತು.
ಯಾವುದೇ ವೈರಸ್ ಮನುಷ್ಯನ ಸೋಲಿಸಿಲ್ಲ: ಜನರಿಗೆ ಧೈರ್ಯ ತುಂಬಿದ ಸಚಿವ ಸುಧಾಕರ್..!
ಆದರೇ ಅಲ್ಲಿ ವ್ಯವಸ್ಥೆಗಳಿಲ್ಲದಿರುವುದರಿಂದ ಉಡುಪಿ ಜಿಲ್ಲೆಯವರನ್ನು ಇಲ್ಲಿಗೆ ಕಳುಹಿಸಲಾಗಿತ್ತು. ಇನ್ನೂ ಎಲ್ಲಾ 53 ಮಂದಿಯ ಗಂಟಲದ್ರವದ ಮಾದರಿಗಳ ವರದಿಗಳು ಬಂದಿಲ್ಲ, ಆದ್ದರಿಂದ ಪಾಸಿಟಿಲ್ ಕೇಸುಗಳ ಸಂಖ್ಯೆ ಇನ್ನೂ ಹೆಚ್ಚು ಸಾಧ್ಯತೆಗಳಿವೆ.