ಮೈಸೂರು(ನ.09):  ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 135 ಮಂದಿಗೆ ಕೊರೋನಾ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ಸೋಂಕಿತರ ಪೈಕಿ 69 ಮಂದಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ.

ಕೊರೋನಾ ಸೋಂಕಿತರ ಸಂಪರ್ಕದಿಂದ 91, ಐಎಲ…ಐ ಪ್ರಕರಣ 29, ಸರಿ ಪ್ರಕರಣ 4, ಇತರೆ 11 ಸೇರಿದಂತೆ ಒಟ್ಟು 135 ಮಂದಿಗೆ ಸೋಂಕು ಇರುವುದು ದೃಢವಾಗಿದೆ.

ಕೋವಿಡ್‌ -19 ಸಂಬಂಧ ಜಿಲ್ಲೆಯಲ್ಲಿ ಈವರೆಗೂ ಒಟ್ಟು 312749 ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 256803 ಮಂದಿ 14 ದಿನಗಳ ಐಸೋಲೇಶನ್‌ ಮುಗಿಸಿದ್ದಾರೆ. ಇನ್ನೂ 7191 ಮಂದಿಯನ್ನು 14 ದಿನಗಳ ಹೋಂ ಐಸೋಲೇಶನ್‌ನಲ್ಲಿ ಇರಿಸಲಾಗಿದೆ.

ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌: ಚಳಿಗಾಲದಲ್ಲಿ ಕೊರೋನಾ ಆಯಸ್ಸು ಹೆಚ್ಚು.

ಜಿಲ್ಲೆಯಲ್ಲಿ ಈವರೆಗೂ 48755 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಇದರಲ್ಲಿ 46,712 ಮಂದಿ ಗುಣಮುಖರಾಗಿದ್ದು, 974 ಮಂದಿ ಮೃತಪಟ್ಟಿದ್ದಾರೆ. ಉಳಿದ 1069 ಮಂದಿ ಸಕ್ರಿಯ ಸೋಂಕಿತರ ಪೈಕಿ 153 ಮಂದಿಯನ್ನು ಸರ್ಕಾರಿ ಕೋವಿಡ್‌ ಆಸ್ಪತ್ರೆ, 291 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ, 60 ಮಂದಿಯನ್ನು ಸರ್ಕಾರಿ ಹಾಗೂ 74 ಮಂದಿಯನ್ನು ಖಾಸಗಿ ಕೋವಿಡ್‌ ಹೆಲ್ತ್‌ ಕೇರ್‌ಗಳಲ್ಲಿ, 36 ಮಂದಿಯನ್ನು ಸರ್ಕಾರಿ ಹಾಗೂ 12 ಮಂದಿಯನ್ನು ಖಾಸಗಿ ಕೋವಿಡ… ರ್ಕೇ ಕೇಂದ್ರಗಳಲ್ಲಿ ಹಾಗೂ 443 ಮಂದಿಯನ್ನು ಮನೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 371389 ಜನರ ಸ್ಯಾಂಪಲ್‌ ಪರೀಕ್ಷಿಸಲಾಗಿದೆ.