Asianet Suvarna News Asianet Suvarna News

ತಪ್ಪಿದ ಭಾರೀ ಅನಾಹುತ; ಅಂಗನವಾಡಿಯಲ್ಲಿ ಕುಕ್ಕರ್ ಸ್ಫೋಟ 14 ಮಕ್ಕಳು ಪಾರು, ಹಲವು ಮಕ್ಕಳಿಗೆ ಗಾಯ!

ಮಧ್ಯಾಹ್ನದ ವೇಳೆ ಅಂಗನಾಡಿ ಮಕ್ಕಳಿಗೆ ಊಟ ತಯಾರಿಸುವ ಕುಕ್ಕರ್ ಸ್ಫೋಟಗೊಂಡ ಘಟನೆ ತುಮಕೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್ ಪುರ ಬಳಿಯ ಸಿ ಯಡವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

Cooker blast in anganwadi school injures many children in yadamanahalli village gubbi taluku tumakuru rav
Author
First Published Jul 12, 2024, 4:35 PM IST | Last Updated Jul 12, 2024, 4:37 PM IST

ತುಮಕೂರು (ಜು.12) ಮಧ್ಯಾಹ್ನದ ವೇಳೆ ಅಂಗನಾಡಿ ಮಕ್ಕಳಿಗೆ ಊಟ ತಯಾರಿಸುವ ಕುಕ್ಕರ್ ಸ್ಫೋಟಗೊಂಡ ಘಟನೆ ತುಮಕೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್ ಪುರ ಬಳಿಯ ಸಿ ಯಡವನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಘಟನೆಯಲ್ಲಿ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಅಡುಗೆ ತಯಾರಿಸುವ ವೇಳೆ 14ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿದ್ದರು. ಇಂದು ಮಧ್ಯಾಹ್ನ ಮಕ್ಕಳಿಗೆ ಊಟ ತಯಾರಿಸುತ್ತಿದ್ದ ಅಡುಗೆ ಸಿಬ್ಬಂದಿ. ಈ ವೇಳೆ ಏಕಾಏಕಿ ಸ್ಫೋಟಗೊಂಡಿರುವ ಕುಕ್ಕರ್. ಕೂಡಲೇ ಮಕ್ಕಳನ್ನು ಅಂಗನವಾಡಿ ಕೊಠಡಿಯಿಂದ ಹೊರಕರೆತಂದು ರಕ್ಷಣೆ ಮಾಡಿದ ಅಡುಗೆ ಸಿಬ್ಬಂದಿ

ಬಿ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದ ಬಗ್ಗೆ ನನಗೆ ಈಗ ಮಾಹಿತಿ ಬಂದಿದೆ: ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ

ಅಂಗನವಾಡಿ ಕೊಠಡಿಯಲ್ಲೇ ಅಡುಗೆ ಕೋಣೆ!

ಅಂಗನಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿದ್ದಾರೆ. ಅಡುಗೆ ಕೋಣೆ ನಿರ್ಮಾಣ ಮಾಡಿಕೊಡುವುದರ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ನಡೆಯುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಬ್ಬಿ ತಾಲೂಕಿನ ಸಿ.ಎಸ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.

Latest Videos
Follow Us:
Download App:
  • android
  • ios