ಮಂಡ್ಯ(ಜ.30): ಆಮಿಷಗಳಿಗೆ ಓಳಗಾಗಿ ಹಿಂದುತ್ವ ತೊರೆದು ಕ್ರೈಸ್ತ ಧರ್ಮ ಸ್ವೀಕರಿಸಿದವರು ಮತ್ತೆ ಹಿಂದುತ್ವ ಸ್ವೀಕರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಶಿವನ ಮಂತ್ರವನ್ನು ಹೇಳುವ ಮೂಲಕ ಮತ್ತೆ ಹಿಂದುತ್ವವನ್ನು ಸ್ವೀಕರಿಸಿದ್ದಾರೆ.

ಋಷಿ ಕುಮಾರ ಸ್ವಾಮೀಜಿ ಮತಾಂತರಗೊಂಡವರ ಮನಪರಿವರ್ತಿಸಿದ್ದಾರೆ. ಕಾಳಿ ಸ್ವಾಮಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನ್ನ ಮರಳಿ ಹಿಂದು ಧರ್ಮಕ್ಕೆ ಕರೆತಂದಿದ್ದಾರೆ.

ಮದುವೆ ಮನೆಯಿಂದ ಹಿಂದೂ ಯುವತಿ ಅಪಹರಿಸಿ ಮತಾಂತರ!

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ಮತಾಂತರಗೊಂಡ ಕುಟುಂಬಸ್ಥರ ಮನೆಗೆ ತೆರಳಿ ಮಾತುಕತೆ ನಡೆಸಲಾಗಿದೆ. ಮಾತುಕತೆಯ ಸಂದರ್ಭ ಆಸೆ ಆಮಿಷ ತೋರಿಸಿ ಮತಾಂತರ ಮಾಡಿದ್ರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ ಗಣಪತಿ ಫೋಟೋ ಕೊಟ್ಟು ಶಿವನ ಮಂತ್ರ ಹೇಳಿಸಿ ಮತಾಂತರಗೊಂಡವರನ್ನು ಹಿಂದು ಧರ್ಮಕ್ಕೆ ಕರೆತರಲಾಗಿದೆ.