Asianet Suvarna News Asianet Suvarna News

ಮದುವೆ ಮನೆಯಿಂದ ಹಿಂದೂ ಯುವತಿ ಅಪಹರಿಸಿ ಮತಾಂತರ!

ಮದುವೆ ಮನೆಯಿಂದ ಹಿಂದೂ ಯುವತಿ ಅಪಹರಿಸಿ ಮತಾಂತರ| ಮುಸ್ಲಿಂ ಆಗಿ ಮತಾಂತರ, ಮುಸ್ಲಿಂ ಜತೆ ನಿಖಾ| ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಆಘಾತಕಾರಿ ಘಟನೆ| ಕಳೆದ ವರ್ಷವೇ ಈಕೆಯ ಮತಾಂತರವಾಗಿತ್ತು: ಮದುವೆ ಆದವನ ವಾದ| ಭಾರತದಿಂದ ಘಟನೆ ಬಗ್ಗೆ ಆಕ್ರೋಶ

Pakistan Hindu woman abducted from wedding forcibly converted married off
Author
Bangalore, First Published Jan 29, 2020, 7:38 AM IST
  • Facebook
  • Twitter
  • Whatsapp

ಕರಾಚಿ[ಜ.29]: ಪಾಕಿಸ್ತಾನದಲ್ಲಿ 24ರ ಹರೆಯದ ಹಿಂದೂ ಯುವತಿಯನ್ನು ಆಕೆಯ ಮದುವೆ ಸ್ಥಳದಿಂದಲೇ ಅಪಹರಿಸಿದ ಶಸ್ತ್ರಧಾರಿಗಳು, ಬಲವಂತವಾಗಿ ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಮನೊಬ್ಬನ ಜತೆ ವಿವಾಹ ಮಾಡಿಸಿದ ಘಟನೆ ನಡೆದಿದೆ.

ಈ ಮಾಸದ ಆರಂಭಕ್ಕೆ 15 ವರ್ಷದ ಹಿಂದೂ ಯುವತಿಯನ್ನು ಸಿಂಧ್‌ ಪ್ರಾಂತ್ಯದಲ್ಲೇ ಅಪಹರಿಸಿ ಹಾಗೂ ಮತಾಂತರಿಸಿ ಮುಸ್ಲಿಮನೊಬ್ಬನಿಗೆ ವಿವಾಹ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಸಿಂಧ್‌ ಪ್ರಾಂತ್ಯದ ಮತಿಯಾರಿ ಜಿಲ್ಲೆಯ ಹಾಲಾ ಪಟ್ಟಣದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಂಧ್‌ ಅಲ್ಪಸಂಖ್ಯಾತ ವ್ಯವಹಾರ ಸಚಿವ ಹರಿರಾಂ ಕಿಶೋರಿ ಅವರು ಪೊಲೀಸರಿಂದ ಘಟನೆಯ ವರದಿ ಬಯಸಿದ್ದಾರೆ.

ಲವ್‌ ಜಿಹಾದ್‌ ನಿರ್ಲಕ್ಷ್ಯ ಮೌನ ಸಮ್ಮತಿ ಇದ್ದಂತೆ: ಕೇರಳ ಪಾದ್ರಿ

ಭಾರತೀ ಬಾಯಿ ಎಂಬಾಕೆಯೇ ಅಪಹರಣಕ್ಕೀಡಾದ ಯುವತಿ. ಈಕೆಯ ಮದುವೆ ಕಳೆದ ವಾರ ಆಯೋಜನೆಗೊಂಡಿತ್ತು. ಆದರೆ ಪೊಲೀಸ್‌ ಸಮವಸ್ತ್ರದಲ್ಲಿದ್ದ ಬಂದೂಕುಧಾರಿಗಳು ಆಕೆಯನ್ನು ಅಪಹರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದ್ದು, ಶಾರುಖ್‌ ಗುಲ್‌ ಎಂಬಾತನ ಜತೆ ಮದುವೆ ಮಾಡಿದ್ದಾರೆ ಎಂದು ಅಖಿಲ ಪಾಕಿಸ್ತಾನ ಹಿಂದೂ ಕೌನ್ಸಿಲ್‌ ಆರೋಪಿಸಿದೆ.

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್‌ ಪ್ರಕಟಿಸಿರುವ ಶಾರುಖ್‌ ಗುಲ್‌ ಬೇರೆ ಕತೆಯನ್ನೇ ಹೇಳಿದ್ದಾನೆ. 2019ರಲ್ಲೇ ಈಕೆ ಇಸ್ಲಾಂಗೆ ಮತಾಂತರಗೊಂಡಿದ್ದು, ಬುಶ್ರಾ ಎಂದು ಮರುನಾಮಕರಣ ಮಾಡಿಕೊಂಡಿದ್ದಳು ಎಂದು ಕೆಲವು ದಾಖಲೆಗಳನ್ನು ಪ್ರಕಟಿಸಿದ್ದಾನೆ. ಬನೋರಿ ನಗರದ ಜಮೀಯತ್‌ ಉಲ್‌ ಉಲೂಂ ಇಸ್ಲಾಮಿಯಾದಲ್ಲಿ ಈಕೆಯ ಮತಾಂತರ ನಡೆದಿತ್ತು ಎಂದು ದಾಖಲೆಗಳಲ್ಲಿದೆ. ಪೊಲೀಸರು ಈ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆ ನಡೆಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಶೇ.2ರಷ್ಟಿದೆ. ಸಿಂಧ್‌ ಪ್ರಾಂತ್ಯದಲ್ಲೇ ಹಿಂದೂಗಳು ಹೆಚ್ಚು.

'ಕುಂಕುಮ ಇಟ್ಕೋಬೇಡ, ಓಂ ಟ್ಯಾಟೂ ತೆಗೆಸು' ಲವ್ ಜಿಹಾದ್.. ಕಾಸರಗೋಡು ಟು ಬೆಂಗಳೂರು!

ಭಾರತದಿಂದ ಪ್ರತಿಭಟನೆ:

ಈ ಘಟನೆಯ ಬಗ್ಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ದಿಲ್ಲಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಯನ್ನು ಭಾರತದ ವಿದೇಶಾಂಗ ಸಚಿವಾಲಯ ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದ್ದು, ಕೃತ್ಯ ಎಸಗಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದೆ.

Follow Us:
Download App:
  • android
  • ios