ಚಿಕ್ಕಮಗಳೂರು: ಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗೆ ಕೀಟ ಬಾಧೆ
ಚಿಕ್ಕಮಗಳೂರಿನ ತರೀಕೆರೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಕೀಟ ಬಾಧೆಯಾಗುವ ಭೀತಿ ಎದುರಾಗಿದೆ. ಕರ್ಪುರೋಗ, ದುಂಡಾಣು ಸೊರಗು ರೋಗ ಮತ್ತು ರಸಹೀರುವ ಕೀಟಗಳ ಬಾಧೆ ಅಲ್ಲಲ್ಲಿ ಕಂಡುಬಂದಿರುವುದು ಕೃಷಿಕರನ್ನು ಕಂಗಾಲಾಗಿಸಿದೆ.
ಚಿಕ್ಕಮಗಳೂರು(ಆ.20): ತರೀಕೆರೆ ತಾಲೂಕಿನಲ್ಲಿ 6 ದಿನಗಳಿಂದ ಹೆಚ್ಚು ಮಳೆಯಾಗುತ್ತಿದ್ದು, ತಾಲೂಕಿನ ಆಲೂಗಡ್ಡೆ ಬೆಳೆಯು ಇದೇ ಮಳೆ ಪರಿಸ್ಥಿತಿ ಮುಂದುವರಿದರೆ ರೋಗ ಮತ್ತು ಕೀಟಬಾಧೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕೀಟ ಕಂಡುಬಂದರೆ ತಪ್ಪದೆ ಔಷಧಿ ಸಿಂಪಡಿಸಿ:
ಆಲೂಗಡ್ಡೆ ಬೆಳೆಯುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ಪುರೋಗ, ದುಂಡಾಣು ಸೊರಗು ರೋಗ ಮತ್ತು ರಸಹೀರುವ ಕೀಟಗಳ ಬಾಧೆ ಅಲ್ಲಲ್ಲಿ ಕಂಡುಬಂದಿದೆ. ಬೆಳೆಗಳಲ್ಲಿ ರೋಗ ಹಾಗೂ ಕೀಟಬಾಧೆ ಕಂಡುಬಂದಲ್ಲಿ ರೈತರು ತಕ್ಷಣ ಔಷಧಿ ಸಿಂಪರಣೆ ಕೈಗೊಳ್ಳಲು ಕೋರಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ಪುರೋಗ ಕಂಡುಬಂದಲ್ಲಿ ಮ್ಯಾಂಕೋಜಬ್ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಅಥವಾ ರಿಡೋುಲ್ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಸಿಂಪರಣೆ ಮಾಡಬೇಕು. ಮಳೆ ಇದ್ದಲ್ಲಿ ಅಂಟನ್ನು ಉಪಯೋಗಿಸಬೇಕು.
ಚಿಕ್ಕಮಗಳೂರು: ನೆರೆ ಸಂತ್ರಸ್ತರ ಮನೆಗಳಿಗೆ ಹಾಸಿಗೆ, ಸ್ಟೌ, ಬಟ್ಟೆ
ದುಂಡಾಣು ಸೊರಗು ರೋಗ ಕಂಡುಬಂದಲ್ಲಿ ಸ್ಟೆ್ರಪ್ಟೊಮೈಸಿನ್- 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಆಲೂಗಡ್ಡೆ ನುಸಿಪೀಡೆ ಕಂಡುಬಂದಲ್ಲಿ ಫೆನೆಝಾಕ್ವಿನ್ 1.8 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದ್ದಾರೆ