ಬಾಗಲಕೋಟೆ: ಇಲ್ಲಿನ ಜನರಿಗೆ ಕಲುಷಿತ ನೀರೇ ಕುಡಿಯುವ ನೀರು..!
ಹೊಲಸು ವಾಸನೆ ಇರುವ ಕಪ್ಪು ನೀರಿನ ಪೂರೈಕೆಯಿಂದಾಗಿ ಜನರು ಪ್ರತಿದಿನ ಗ್ರಾಮ ಪಂಚಾಯತಿಯವರಿಗೆ ಶಾಪ ಹಾಕುತ್ತಿದ್ದಾರೆ. ಬಹಳಷ್ಟು ದಿನಗಳಿಂದ ಮನೆಗಳಿಗೆ ಪೂರೈಕೆ ಆಗುವ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು, ಇದು ಅಮಾನವೀಯ ಸಂಗತಿಯಾಗಿದೆ.
ಲೋಕಾಪುರ(ಸೆ.24): ಕಳೆದ ಎಳೆಂಟು ವಾರಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರು ಸೇವಿಸಿ ಅನೇಕ ಮಕ್ಕಳು ಆಸ್ಪತ್ರೆ ಸೇರುತ್ತಿರುವ ಘಟನೆ ನಡೆದಿದ್ದು, ಜನರು ಆತಂಕದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಹೌದು ಸಮೀಪದ ಕಿಲ್ಲಾ ಹೊಸಕೋಟಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ನಾಲ್ಕೈದು ವಾರಗಳಿಂದ ಗ್ರಾಮಸ್ಥರು ಪ್ರತಿದಿನ ಅನಾರೋಗ್ಯಕ್ಕಿಡಾಗುತ್ತಿದ್ದು ವಾಂತಿ ಭೇದಿ, ಜ್ಚರ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗ್ರಾಮಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ಕಳೆದ ನಾಲ್ಕೈದು ದಿನದಿಂದ ಪ್ರತಿದಿನ 2 ರಿಂದ 3 ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಎಲ್ಲರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ ಎನ್ನುತ್ತಾರೆ ಇಲ್ಲಿನ ಪ್ರಜ್ಞಾವಂತ ಯುವಕರು.
ಜಮಖಂಡಿ: ಜಾತ್ರೆಯಲ್ಲಿ ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣ ಕದಿಯುತ್ತಿದ್ದ ಆರು ಕಳ್ಳಿಯರ ಬಂಧನ
ಹೊಲಸು ವಾಸನೆ ಇರುವ ಕಪ್ಪು ನೀರಿನ ಪೂರೈಕೆಯಿಂದಾಗಿ ಜನರು ಪ್ರತಿದಿನ ಗ್ರಾಮ ಪಂಚಾಯತಿಯವರಿಗೆ ಶಾಪ ಹಾಕುತ್ತಿದ್ದಾರೆ. ಬಹಳಷ್ಟು ದಿನಗಳಿಂದ ಮನೆಗಳಿಗೆ ಪೂರೈಕೆ ಆಗುವ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು, ಇದು ಅಮಾನವೀಯ ಸಂಗತಿಯಾಗಿದೆ.
ಗ್ರಾಮ ಪಂಚಾಯತಿಯವರು ಸರಬರಾಜು ಮಾಡುವ ಹೊಲಸು ನೀರಿನಿಂದ ಜನರ ನೆಮ್ಮದಿ ಕದಡಿದೆ. ಎಸ್.ಸಿ ಕಾಲೋನಿಯ ನಲ್ಲಿಗಳಲ್ಲಿ ತುಂಬಾ ಕೆಟ್ಟ ವಾಸನೆ ಮತ್ತು ಕಾಫಿ ಬಣ್ಣದ ನೀರು ಪೂರೈಕೆ ಆಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಜನರ ಆರೋಪವಾಗಿದೆ.
ಸರ್ಕಾರ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಕ?್ಟು ಅನುದಾನ ನೀಡಿದರೂ, ಸಂಬಂದಿಸಿದ ಅಧಿಕಾರಿಗಳು ಕುಡಿಯುವ ನೀರು ಶುದ್ಧ ಮಾಡದೇ ಹಾಗೇ ಜನರಿಗೆ ಸರಬರಾಜು ಮಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ, ನಂತರ ಎಲ್ಲ ನೀರು ಶುದ್ದೀಕರಿಸಿದ ಸಾರ್ವಜನಿಕರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಎಸ್.ಸಿ ಕಾಲೋನಿಯ ಜನರು ಒತ್ತಾಯಿಸಿದ್ದಾರೆ.
ಸನಾತನ ಧರ್ಮ ಉಳಿದರೆ ಮಾತ್ರ ಭಾರತದ ಉಳಿವು ಸಾಧ್ಯ: ಯತ್ನಾಳ
ಶುದ್ಧ ಕುಡಿಯುವ ನೀರು ಫಿಲ್ಟರ್ ಮಾಡದೆ ಕಲುಷಿತ ನೀರು ಸರಬರಾಜು ಮಾಡುತ್ತಿರುವ ಗ್ರಾಮ ಪಂಚಾಯತ, ತಾಪಂ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮ ಕೈಗೊಳ್ಳತ್ತ ಎಂಬುದನ್ನು ಕಾದು ನೋಡಬೇಕಾಗಿದೆ.
ಗ್ರಾಮ ಪಂಚಾಯತಿಯವರು ಕಲುಷಿತ ಕುಡಿಯುವ ನೀರು ಸರಬರಾಜು ಮಾಡಿತಿದ್ದು, ಸದರಿ ಕಲುಷಿತ ನೀರು ವಾಸನೆ, ಹೊಲಸು ಇದ್ದು, ಇದನ್ನು ಫಿಲ್ಟರ್ ಮಾಡದೇ ಹಾಗೆಯೇ ಸರಬರಾಜು ಮಾಡುತ್ತಿದ್ದಾರೆ ಇಂತಹ ನೀರು ಸರಬರಾಜು ಮಾಡಿರುವ ಕುರಿತು 2 ತಿಂಗಳಿಂದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತಿಳಿಸುತ್ತಿದ್ದರೂ ಗಮನ ಹರಿಸುತ್ತಿಲ್ಲ. ಒಂದು ವೇಳೆ ಇಂತಹ ನೀರನ್ನು ಕುಡಿದು ಯಾವುದೇ ಅನಾಹುತ ಆದ್ರೆ ಅದಕ್ಕೆ ಗ್ರಾಮ ತಾಪಂ ಅಧಿಕಾರಿಗಳೇ ನೇರ ಹೊಣೆಗಾರರು. ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಗ್ರಾಮದ ಕಿಲ್ಲಾ ಹೊಸಕೋಟಿ ಎಸ್.ಸಿ ಕಾಲೋನಿಯ ನಿವಾಸಿಗಳು ತಿಳಿಸಿದ್ದಾರೆ.
ಕಲುಷಿತ ನೀರು ಪೂರೈಕೆಯಾಗುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಏರ್‌ಟ್ಯಾಂಕ್ ಮೂಲಕ ಬರುವ ನೀರಿನ ಪೈಪಲೈನ್‌ನಲ್ಲಿ ಸಮಸ್ಯೆಯಾಗಿದೆ. ಇದನ್ನು 2-3 ದಿನಗಳಲ್ಲಿ ಸರಿಪಡಿಸಲಾಗುವದು ಎಂದು ದಾದನಟ್ಟಿ ಪಿಡಿಒ ವಿಜಯಕುಮಾರ ಕಮ್ಮಾರ ಹೇಳಿದ್ದರಾರೆ.