ಜಮಖಂಡಿ: ಜಾತ್ರೆಯಲ್ಲಿ ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣ ಕದಿಯುತ್ತಿದ್ದ ಆರು ಕಳ್ಳಿಯರ ಬಂಧನ

ಬಂಧಿತರಿಂದ ಅಂದಾಜು 2 ಲಕ್ಷ ರು, ಕಿಮತ್ತಿನ ಒಟ್ಟು 5 ತೋಲೆ ಬಂಗಾರದ ತಾಳಿಸರ ಹಾಗೂ ಬಂಗಾರದ ಅವಲಕ್ಕಿ ಸರವನ್ನು ಶಹರ ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Six thieves arrested For Gold chain Theft Cases at Jamakhandi in Bagalkot grg

ಜಮಖಂಡಿ(ಸೆ.23):  ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಆರು ಜನ ಅಂತರಾಜ್ಯ ಮಹಿಳೆಯರನ್ನು ಶಹರ ಠಾಣಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಲೂಕಿನ ಕಡಪಟ್ಟಿ ಶ್ರೀದೊಡ್ಡ ಬಸವೇಶ್ವರ ಜಾತ್ರೆಯ ಪಲಕ್ಕಿ ಉತ್ಸವ ವಿಜೃಂಭನೆಯಿಂದ ನಡೆಯುವ ವೇಳೆ ಜಾತ್ರೆಗೆ ಬಂದ ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಮಹಾರಾಷ್ಟ್ರದ ಸೊಲ್ಲಾಪೂರ ಮೂಲದ ಮಾಹಾದೇವಿ ವಿಲಾಸ ಜಾಧವ, ಸರಸ್ವತಿ ಸಂಜಯ ಗಾಯಕವಾಡ, ಉಷಾ ಕಿರಣ ಗಾಯಕವಾಡ, ಚಂದ್ರವ್ವ ಕಾಶಿನಾಥ ಗಾಯಕವಾಡ, ಕೇಶರ ಆನಂದ ಜಾಧವ, ಅರುಣಾ ಅಶೋಕ ಜಾಧವ ಬಂಧಿತ ಆರು ಜನ ಮಹಿಳೆಯರು ಜಾತ್ರೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಅವರನ್ನು ವಿಚಾರಿಸಿ, ಜಾತ್ರೆಗೆ ಬಂದ ಮಹಿಳೆಯರ ಮೈ ಮೇಲಿನ ಆಭರಣಗಳನ್ನು ಕಳ್ಳತನ ಮಾಡಲು ಬಂದಿರುವುದಾಗಿ ಹೇಳಿದ್ದಾರೆ. 

ಜಮಖಂಡಿ: ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

ಬಂಧಿತರಿಂದ ಅಂದಾಜು 2 ಲಕ್ಷ ರು, ಕಿಮತ್ತಿನ ಒಟ್ಟು 5 ತೋಲೆ ಬಂಗಾರದ ತಾಳಿಸರ ಹಾಗೂ ಬಂಗಾರದ ಅವಲಕ್ಕಿ ಸರವನ್ನು ಶಹರ ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಂದು ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.

ಜಿಲ್ಲಾ ಎಸ್ಪಿ ಅಮರನಾಥರೆಡ್ಡಿ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದ ಲ್ಲಿ ಮೂರು ತನಿಖಾ ತಂಡ ರಚಿಸಿದ ಎಸೈ ನಾಗರಾಜ ಚಿಲಾರೆ, ಕೆ.ಟಿ.ಮಾನೆ,ಗ್ರಾಮೀಣ ಠಾಣಿ ಎಸೈ ಮಹೇಶ ಸಂಖ, ಎಎಸ್‌ಐ ಎಚ್.ಎಸ್.ಮಂಡಗಾರ, ವೈ.ಬಿ.ಸೋಸರವಾಡ ಸಿಬ್ಬಂದಿ ಬಿ, ಎಂ, ಜಂಬಗಿ, ಎಸ್.ಎಚ್.ಕೋಟಿ, ಪಿ.ಎಚ್.ಘಾಟಗೆ, ಎಸ್.ಬಿ. ಹನ ಗಂಡಿ, ಬಾಹುಬಲ ಕುಸನಾಳೆ ಮಹಿಳಾ ಸಿಬ್ಬಂದ ಎಸ್.ಜಿ.ದೇಸಾಯಿ, ಎಸ್.ಎಲ್. ಪವಾರ ತನಿಖಾ ತಂಡದಲ್ಲಿದ್ದು,ಇವರ ಕಾರ್ಯವನ್ನು ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ.

Latest Videos
Follow Us:
Download App:
  • android
  • ios