Asianet Suvarna News Asianet Suvarna News

ಕಲುಷಿತ ನೀರು ಸೇವನೆ ಪ್ರಕರಣ; ಅಸ್ವಸ್ಥ ರೋಗಿ​ಗಳ ಭೇಟಿ​ಯಾದ ಶಾಸಕಿ ಕರೆಮ್ಮ

ಸಮೀ​ಪದ ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಕರೆಮ್ಮ.ಜಿ ನಾಯಕ ಭೇಟಿ ನೀಡಿ ಕಲುಷಿತ ನೀರು ಸೇವಿಸ ಅಸ್ವಸ್ಥಗೊಂಡು ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಶನಿವಾರ ವಿಚಾರಿಸಿದರು.

Contaminated water drinking case; MLA Karemma met sick patients at devadurga rav
Author
First Published May 28, 2023, 4:48 AM IST

ದೇವ​ದು​ರ್ಗ (ಮೇ.28) : ಸಮೀ​ಪದ ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಕರೆಮ್ಮ.ಜಿ ನಾಯಕ ಭೇಟಿ ನೀಡಿ ಕಲುಷಿತ ನೀರು ಸೇವಿಸ ಅಸ್ವಸ್ಥಗೊಂಡು ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಶನಿವಾರ ವಿಚಾರಿಸಿದರು.

ಬಳಿಕ ಮಾತನಾಡಿದ ಅವ​ರು, ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಿಗೆ ರೇಕಲಮರಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ವಾಂತಿ, ಭೇದಿ, ತಲೆನೋವು, ಜ್ವರ ಪೀಡಿತರು ನಿರ್ಲಕ್ಷ್ಯ ವಹಿಸದೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆ ಚಿಕಿತ್ಸೆ ನೀಡಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ ರಾಯಚೂರಿನ ರಿಮ್ಸ್‌ ಆಸ್ಪತ್ರೆ, ಅರಕೇರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

 

ರಾಯಚೂರು: ಕಲುಷಿತ ನೀರು ಸೇವನೆಗೆ 5 ವರ್ಷದ ಮಗು ಸಾವು, 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ!

ಸರ್ಕಾರ ಪ್ರಕರಣವವನ್ನು ಗಂಭೀರವಾಗಿ ಪರಿಗಣಿಸಿದೆ. ಸ್ಥಳಕ್ಕೆ ತಹಸೀಲ್ದಾರ್‌, ಡಿಎಚ್‌ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಸ್ವಸ್ಥಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಹಿನ್ನಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲೆ ಬೀಡು ಬಿಟ್ಟಿದ್ದಾರೆ. ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಿ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಜಾಗೃತಿಯನ್ನು ಮೂಡಿಸುವಂತೆ ಹೇಳಲಾಗಿದೆ ಎಂದರು.

‰‰‰‰‰‰‰‰‰‰ಈ ಸಂದರ್ಭದಲ್ಲಿ ಟಿಎಚ್‌ಒ ಡಾ.ಬನದೇಶ್ವರ, ಡಾ.ಶಿವಕುಮಾರ ನಾರಾ, ಜೆಡಿಎಸ್‌ ಹಿರಿಯ ಮುಖಂಡ ಮುದುಕಪ್ಪ ನಾಯಕ, ಹನುಮಂತ್ರಾಯ ಚಿಕ್ಕಗುಡ್ಡ, ಸಿದ್ದಪ್ಪ ದೊಂಡಂಬಳಿ, ಗೋವಿಂದರಾಜ ಚಿಕ್ಕಗುಡ್ಡ ಸೇರಿದಂತೆ ಇತರರಿದ್ದರು.

ಬಾಲಕ ಸಾವು ಪರಿಹಾರದ ಭರವಸೆ

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಹನುಮೇಶ ಈರಪ್ಪ ಮೃತನ ಕುಟುಂಬಕ್ಕೆ ಶಾಸಕಿ ಕರೆಮ್ಮ ಜಿ ನಾಯಕ ಭೇಟಿ ನೀಡಿ ಶುಕ್ರವಾರ ಸಾಂತ್ವಾನ ಹೇಳಿದ್ದಾರೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ಮೃತ ಬಾಲಕನ ಕುಟುಂಬಕ್ಕೆ ನೀಡುವ ಭರವಸೆ ನೀಡಿದರು.

ಆರೊಗ್ಯ ಸಿಬ್ಬಂದಿಗೆ ಸೂಚನೆ

ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸತ್ತಿರುವ ಸಿಬ್ಬಂದಿ ಗೈರಾಗುವುದು, ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ಆರೋಪವಿದೆ. ಇದೇ ರೀತಿ ಮುಂದುವರಿದಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕರೆಮ್ಮ ಜಿ ನಾಯಕ ಖಡಕ್‌ ಎಚ್ಚರಿಕೆ ನೀಡಿದರು.

 

ಪ್ರಭಾವಿ ರಾಜಕಾರಣಿಯ ಕೆರೆ ಸ್ವಚ್ಛಗೊಳಿಸುವ ನೆಪಕ್ಕೆ ಕಲುಷಿತ ನೀರು ಕುಡಿದು ಜಾನುವಾರು ಸಾವು!

ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ನಿತ್ಯ ನೂರಾರು ರೋಗಿಗಳು ಸಿಬ್ಬಂದಿ ಉತ್ತಮ ಚಿಕಿತ್ಸೆ ಹಾಗೂ ಸ್ಪಂದನೆ ನೀಡಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು ಸಿಬ್ಬಂದಿ ಕೆಲಸವಾಗಿದೆ. ನೂತನ ಮಾದರಿ ಎಕ್ಸರೆ ಯಂತ್ರವನ್ನು ಶೀಘ್ರದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಟಿಎಚ್‌ಒ ಡಾ.ಬನದೇಶ್ವರಗೆ ಸೂಚಿಸಿದರು.

Follow Us:
Download App:
  • android
  • ios