ರಾಯಚೂರು: ಜನ​ರಿಗೆ ಶುದ್ಧ ಕುಡಿ​ಯುವ ನೀರು ಸರ​ಬ​ರಾಜು ಸವಾ​ಲು

ಜಿಲ್ಲೆ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವ​ಜ​ನಿ​ಕ​ರಿಗೆ ಶುದ್ಧ ಕುಡಿ​ಯುವ ನೀರು ಸರ​ಬ​ರಾಜು ಮಾಡು​ವುದೇ ಜಿಲ್ಲಾ​ಡ​ಳಿತ, ಜಿಪಂ ಹಾಗೂ ಸ್ಥಳೀಯ ಆಡ​ಳಿತ ಸಂಸ್ಥೆ​ಗ​ಳಿಗೆ ಸವಾ​ಲಾಗಿ ಮಾರ್ಪ​ಟ್ಟಿದೆ.

Contaminated water case dc in-charge Shasidhara kurer and ceo visit rampur Reservoir rav

ರಾಮ​ಕೃಷ್ಣ ದಾಸ​ರಿ

ರಾಯ​ಚೂರು (ಮೇ.30) : ಜಿಲ್ಲೆ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವ​ಜ​ನಿ​ಕ​ರಿಗೆ ಶುದ್ಧ ಕುಡಿ​ಯುವ ನೀರು ಸರ​ಬ​ರಾಜು ಮಾಡು​ವುದೇ ಜಿಲ್ಲಾ​ಡ​ಳಿತ, ಜಿಪಂ ಹಾಗೂ ಸ್ಥಳೀಯ ಆಡ​ಳಿತ ಸಂಸ್ಥೆ​ಗ​ಳಿಗೆ ಸವಾ​ಲಾಗಿ ಮಾರ್ಪ​ಟ್ಟಿದೆ.

ಪ್ರಸಕ್ತ ಸಾಲಿ​ನಲ್ಲಿ ಜನ​ಸಾ​ಮಾ​ನ್ಯರು ಬಿರು ಬೇಸಿ​ಗೆಯ ಜೊತೆಗೆ ಕಲು​ಷಿತ ನೀರನ್ನು ಕುಡಿದು ಅಸ್ವ​ಸ್ಥ​ಗೊ​ಳ್ಳು​ತ್ತಿರುವ ಘಟ​ನೆ​ಗಳು ನಿರಂತ​ರ​ವಾಗಿ ನಡೆ​ಯು​ತ್ತಿವೆ. ಮೊನ್ನೆ ದೇವ​ದುರ್ಗ ಸಮೀ​ಪದ ಅರ​ಕೇರಾ ತಾಲೂ​ಕಿನ ರೇಕ​ಲ​ಮ​ರ​ಡಿ ಗ್ರಾಮ​ದಲ್ಲಿ ಕಲು​ಷಿತ ನೀರು ಕುಡಿದು ಒಬ್ಬ ಬಾಲಕ ಸಾವ​ನ್ನಪ್ಪಿದ್ದು, ಸುಮಾರು 50ಕ್ಕೂ ಹೆಚ್ಚು ಜನರು ಅಸ್ವ​ಸ್ಥ​ಗೊಂಡಿ​ರುವ ಪ್ರಕ​ರ​ಣ ಮಾಸುವ ಮುನ್ನವೇ ಜಿಲ್ಲೆ ಲಿಂಗ​ಸು​ಗೂರು ತಾಲೂ​ಕಿನ ಗೊರೇ​ಬಾಳ ಗ್ರಾಮ​ದಲ್ಲಿ ಸುಮಾರು 30 ಜನರು ಅಸ್ವ​ತ್ಥ​ಗೊಂಡಿ​ದ್ದಾರೆ. ಅದೇ ರೀತಿ ಲಿಂಗ​ಸು​ಗೂರು ತಾಲೂ​ಕಿನ ಜೂಲ​ಗು​ಡ್ಡ​ದ​ಲ್ಲಿಯ ಸಹ 8 ಜನರು ಅಸ್ವ​ಸ್ಥ​ಗೊಂಡಿ​ರುವ ಘಟನೆ ನಡೆ​ದಿದೆ. ಜೂಲ​ಗು​ಡ್ಡ​ದಲ್ಲಿ ಪೈಪ್‌ಲೈನ್‌ ಒಡೆದು ಕಲು​ಷಿತ ನೀರು ಸರ​ಬ​ರಾ​ಜಾ​ಗಿದೆ ಎಂದು ಸ್ಥಳೀ​ಯರು ದೂರಿ​ದ್ದಾ​ರೆ. ನರೇಗಾ ಕೆಲ​ಸಕ್ಕೆ ತೆರ​ಳಿದ್ದ ಅವರಿಬ್ಬರು ಕಲು​ಷಿತ ನೀರಿನ ಜೊತೆಗೆ ತಾಪ​ಮಾ​ನ​ದಿಂದ ಅಸ್ವ​ಸ್ಥ​ಗೊಂಡಿದ್ದು, ಆಸ್ಪ​ತ್ರೆ​ಯಲ್ಲಿ ದಾಖ​ಲಾಗಿ ಚಿಕಿ​ತ್ಸೆ​ ಪಡೆದು ಗುಣ​ಮು​ಖ​ರಾ​ಗಿ​ದ್ದಾರೆ.

 

ಕಲುಷಿತ ನೀರಿಗೆ ಬಾಲಕ ಬಲಿ: ಅಧಿಕಾರಿಗಳಿಗೆ ಸಿದ್ದು ತರಾಟೆ

ರೇಕ​ಲ​ಮ​ರಡಿ ಘಟ​ನೆ​ಯನ್ನು ಸರ್ಕಾರ ಗಂಭೀ​ರ​ವಾಗಿ ಪರಿ​ಗ​ಣಿಸಿ ಸಿಎಂ ಸಿದ್ದ​ರಾ​ಮಯ್ಯ(CM Siddaramaiah) ಹಾಗೂ ಸಚಿವ ಬೋಸ​ರಾಜು(NS Bosaraju) ಅವರು ಸೂಕ್ತ ಕ್ರಮ ಜರು​ಗಿ​ಸು​ವಂತೆ ಜಿಲ್ಲಾ​ಡ​ಳಿ​ತಕ್ಕೆ ಸೂಚನೆ ನೀಡಿದ್ದರು ಸಹ ಘಟ​ನೆ​ಗಳು ಸಂಭ​ವಿ​ಸು​ತ್ತಿ​ರು​ವುದು ಜಿಪಂ, ​ತಾಪಂ ಹಾಗೂ ಗ್ರಾಪಂಗಳ ನಿರ್ಲಕ್ಷ್ಯ ಎದ್ದು ಕಾಣು​ವಂತೆ ಮಾಡು​ತ್ತಿವೆ.

ಜಿಲ್ಲೆ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮಕ್ಕೆ ಸಿಇ​ಒ ಭೇಟಿ ನೀಡಿದ್ದು, ಕಳೆದ ಮೂರು ದಿನಗಳಲ್ಲಿ ವಿಷಪೂರಿತ ಆಹಾರ ಮತ್ತು ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಸಂಭವಿಸಿದೆ ಎನ್ನಲಾದ ಒಟ್ಟು 25 ವಾಂತಿ ಬೇಧಿ ಪ್ರಕರಣಗಳ ಕುರಿತು ಪರೀಶೀಲನೆ ನಡೆಸಲಾಗಿದೆ. ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗಾಗಲೇ 10 ರೋಗಿಗಳನ್ನು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾಡಳಿತದಿಂದ ಸೂಕ್ತ ಕ್ರಮ:

ಜಿಲ್ಲೆ ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಪಂ ವ್ಯಾಪ್ತಿಯ ರೇಕಲಮರಡಿ ಗ್ರಾಮದಲ್ಲಿ ಮೇ 25ರಂದು 10, ಮೇ 26ರಂದು 15 ಹಾಗೂ ಮೇ 27ರಂದು 9 ಜನರಲ್ಲಿ ವಾಂತಿ ಬೇಧಿ ಪ್ರಕರಣಗಳು ಕಂಡುಬಂದಿದ್ದು, ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ 6, ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ 9 ಹಾಗೂ ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ಸೇರಿದಂತೆ ಒಟ್ಟು 18 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ 18 ರೋಗಿಗಳು ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದುಹೋಗಿ ಕಲುಷಿತ ನೀರು ಸೇವನೆ ಮಾಡಿದ್ದ ಪರಿಣಾಮವಾಗಿ 34 ಜನ ಅಸ್ವಸ್ಥಗೊಂಡಿದ್ದಾರೆ. ಜೊತೆಗೆ 5ವರ್ಷದ ಹನುಮೇಶ ಎಂಬ ಬಾಲಕ ಸಾವನಪ್ಪಿದ್ದು, ಆರೋಗ್ಯ, ಕಂದಾಯ ಹಾಗೂ ಗ್ರಾಮೀನ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಕಳೆದ ಮೇ 27ರಂದು ಸಂಪುಟ ಸಚಿವರಾದ ಎನ್‌.ಎಸ್‌ ಬೋಸರಾಜು ಹಾಗೂ ಮೇ 28ರಂದು ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ ಅವ​ರು ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಆದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಆರೋಗ್ಯ ಇಲಾಖೆಯಿಂದ ಅಸ್ವಸ್ಥಗೊಂಡವರಿಗೆ ಸೂಕ್ತ ವೈದ್ಯಕೀಯ ಉಪಚಾರ ಮಾಡುವಂತೆ ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಜಿಲ್ಲಾ​ಡ​ಳಿ​ತಕ್ಕೆ ನಿರ್ದೇಶನ ನೀಡಿದ್ದಾರೆ.

ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ತೆಗೆದು ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿಯನ್ನು ನಿಯೋಜಿಸಿ ಗ್ರಾಮಕ್ಕೆ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವ್ಥೆಯನ್ನು ಮಾಡಲಾಗಿದೆ.

ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆಯಿಂದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಮತ್ತು ಒಆರ್‌ಎಸ್‌ ಪೊಟ್ಟಣಗಳನ್ನು ವಿತರಿಸಲಾಗಿದೆ. ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕುದಿಸಿ ಆರಿಸಿದ ನೀರನ್ನು ಸೇವಿಸುವಂತೆ ಜನ​ರಲ್ಲಿ ಜಾಗೃತಿ ಮೂಡಿ​ಸ​ಲಾ​ಗು​ತ್ತಿದೆ.

ಒಡೆದ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್‌ಲೈನ್‌ ಅಳವಡಿಸಲು ಕ್ರಮ ಜರುಗಿಸಲಾಗಿದೆ. ಕುಡಿಯುವ ನೀರಿನ ಮೇಲ್ತೊಟ್ಟಿಸ್ವಚ್ಛತೆ ಮತ್ತು ಗ್ರಾಮದಲ್ಲಿ ಸ್ವಚ್ಛತೆಯ ಕುರಿತು ಗ್ರಾಮ ಪಂಚಾಯಿತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಿಷ್ಕಿ್ರೕಯವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮರುಪ್ರಾರಂಭಿಸಲಾಗಿದ್ದು, ಇದರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಮೃತರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಕಂದಾಯ ಇಲಾಕೆಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ ್ಯ ತೋರಿಸ ಜಾಗೀರಜಾಡಲದಿನ್ನಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸೂಕ್ತ ಕ್ರಮ ಜರುಗಿಸಲಾಗಿದೆ.

ಸಾರ್ವಜನಿಕರಲ್ಲಿ ಮನವಿ

ಬೇಸಿಗೆಯಲ್ಲಿ ನಿರ್ಜಲೀಕರಣಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಬಿಸಿಲಿನ ತಾಪಮಾನದಿಂದ ಅನಾರೋಗ್ಯಕ್ಕೆ ಒಳಗಾದವರು ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಪಡೆದು, ಜಾಗೃತಿ ವಹಿಸಬೇಕು. ವಾಂತಿ ಬೇಧಿ ಕಂಡುಬಂದಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ್ನು ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೆ ಸೇವನೆ ಮಾಡತಕ್ಕದ್ದು. ಹೊಲಗದ್ದೆಗಳ ನಾಲೆ ಹಾಗೂ ಬಾವಿಗಳಲ್ಲಿ ನಿಂತಿರುವ ಅಶುದ್ಧ ನೀರನ್ನು ಸೇವನೆ ಮಾಡಬಾರದು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿಂದ ವಿತರಿಸಲಾದ ಒಆರ್‌ಎಸ್‌ ಪ್ಯಾಕೇ​ಟ್‌ಗಳನ್ನು ಅವಶ್ಯಕತೆಗನುಗುಣವಾಗಿ ಸೇವನೆ ಮಾಡಬೇಕು ಎಂದು ಜಿಲ್ಲಾಡಳಿತ ಜನ​ಸಾ​ಮಾ​ನ್ಯ​ರಲ್ಲಿ ಮನವಿ ಮಾಡಿ​ದೆ.

 

ರಾಯಚೂರು: ಕಲುಷಿತ ನೀರು ಸೇವನೆಗೆ 5 ವರ್ಷದ ಮಗು ಸಾವು, 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ!

ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸಿಇಒ ಭೇಟಿ ಪರಿಶೀಲನೆ

ರಾಯಚೂರು ನಗರಸಭೆ ವ್ಯಾಪ್ತಿಯ ಟಿಪ್ಪು ಸುಲ್ತಾನ್‌ ರಸ್ತೆ, ಸೂಪರ್‌ ಮಾರ್ಕೆಟ್‌, ಮಂಳವಾರ ಪೇಟೆ, ಜಹಿರಾಬಾದ್‌ ವೃತ್ತ, ತಿಮ್ಮಾಪೂರ ಪೇಟೆ, ವಾಸವಿ ನಗರ, ಬೋಳಮಾನದೊಡ್ಡಿ ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳಾದ ಶಶಿಧರ ಕುರೇರ ಅವರು ಭೇಟಿ ನೀಡಿ ಕಸ ವಿಲೇವಾರಿ ಪರಿಶೀಲನೆ ಹಾಗೂ ರಾಂಪೂರು ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ನೀರು ಶುದ್ಧೀಕರಣ ಘಟಕವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಕೆ. ಗುರುಲಿಂಗಪ್ಪ ಅವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios