* ಸಂವಿಧಾನ ಜಾಗೃತಿ ಸಮಾವೇಶ* ಡಾ.ಬಿ.ಆರ್.ಅಂಬೇಡ್ಕರ್ ಜಯಂತಿನ ಆಚರಣೆ* ಅಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಸಮಾವೇಶ
ಚಿಕ್ಕಮಗಳೂರು(ಏ.19): ಕಾಫಿನಾಡು ಚಿಕ್ಕಮಗಳೂರು(Chikkamagaluru) ನಗರದಲ್ಲಿ ಇಂದು ಸಂವಿಧಾನ ಜಾಗೃತಿ ಸಮಾವೇಶ ನಡೆಯಿತು. ಸಮಾವೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಜನರು ಜಮಾವಣೆಗೊಂಡಿದ್ದರು. ಇಡೀ ನಗರದಲ್ಲಿ ನೀಲಿ ಧ್ವಜ(Blue Flag), ಜೈ ಭೀಮ್(Jai Bheem) ಘೋಷಣೆ ಮೊಳಗಿತ್ತು. ಯುವಕ-ಯುವತಿಯರು ಜಿಟಿಜಿಟಿ ಮಳೆಯ ನಡುವೆಯೂ ಕುಣಿದು ಕುಪ್ಪಳಿಸಿದರು.
ಇಡೀ ನಗರ ನೀಲಿ: ರಸ್ತೆ ಉದ್ದಕ್ಕೂ ಜೈಭೀಮ್ ಘೋಷಣೆ
ಚಿಕ್ಕಮಗಳೂರು ನಗರದಲ್ಲಿ ನಿನ್ನೆ(ಸೋಮವಾರ) ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ(Dr BR Amdedkar Jayanti) ಆಚರಣಾ ಸಮಿತಿ ವತಿಯಿಂದ ಸಂವಿಧಾನ ಜಾಗೃತಿ ಸಮಾವೇಶವನ್ನು(Constitution Awareness Conference) ನಡೆಸಲಾಯಿತು.ನಗರದ ಹನುಮಂತಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತ ಹಾಗೂ ನಗರದ ಮುಖ್ಯ ರಸ್ತೆಯನ್ನು ನೀಲಿ ಬಂಟಿಂಗ್ಸ್ ಗಳಿಂದ ಸಿಂಗರಿಸಲಾಗಿತ್ತು. ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಮಾವೇಶವನ್ನು ನಡೆಸಲಾಯಿತು. ಸಮಾವೇಶಕ್ಕೂ ಮುನ್ನ ನಗರದ ಕೆ.ಇ,ಬಿ ವೃತ್ತದಿಂದ ಅಲಂಕೃತ ವಾಹನಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರ ಭಾವ ಚಿತ್ರಗಳನ್ನಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.
Chikkamagaluru ಹರಿಹರಪುರ ಶ್ರೀ ಮಠದಲ್ಲಿ 1000 ಮಹಿಳೆಯರಿಂದ ಕೋಟಿ ಕುಂಕುಮಾರ್ಚನೆ
ಈ ಮೆರವಣಿಗೆಯಲ್ಲಿ ತಮಟೆ ಏಟು, ಡ್ರಮ್ಸ್, ಡಿ,ಜೆ ಸಂಗೀತಕ್ಕೆ ಮಹಿಳೆಯರು ಮಕ್ಕಳಾದಿಯಾಗಿ ನೂರಾರು ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.ನಗರದ ಪ್ರಮುಖಬೀದಿಗಳಲ್ಲಿ ನೀಲಿ ಬ್ಯಾನರ್ ಗಳಿಂದ ಅಲಂಕಾರ ಮಾಡಲಾಗಿತ್ತು.ಇದೇ ಮೊದಲಬಾರಿಗೆ ನಡೆದ ಅದ್ದೂರಿ ಅಂಬೇಡ್ಕರ್ ಜಯಂತಿ ಮೆರವಣಿಗೆ ಮತ್ತು ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಯುವಕರು ಬೃಹತ್ ಗಾತ್ರದ ಬಾವುಟಗಳನ್ನು ಮೆರ ವಣಿಗೆಯುದ್ದಕ್ಕೂ ಪ್ರದರ್ಶಿಸಿ ಕಳೆಮೂಡಿಸಿದರು. ತುಂತುರು ಮಳೆಯ(Rain) ನಡುವೆಯೂ ಜೈ ಭೀಮ್ ಘೋಷಣೆ ಮುಗಿಲು ಮುಟ್ಟಿತ್ತು. ಕೆ.ಇ.ಬಿ ವೃತ್ತದಿಂದ ಹೊರಟು ಮೆರವಣಿಗೆ ಎಂ. ಜಿಯ ರಸ್ತೆ ಮೂಲಕ ಗಣಪತಿ ದೇವಾಲಯದ ಹತ್ತರ ಬರುತ್ತಿದ್ದಂತೆ ಗುಡುಗು, ಮಿಂಚಿನೊಂದಿಗೆ ಸಾಧಾರಣ ಮಳೆಯ ನಡುವೆಯೂ ಯುವಕರು ಜೈಬೀಮ್ ಘೋಷಣೆಗಳನ್ನು ಕೂಗುತ್ತ, ಬಾವುಟಗಳನ್ನು , ಡಿಜೆ ಸಂಗೀತಕ್ಕೆ ನರ್ತಿಸಿದರು. ಜಿಟಿ ಜಿಟಿ ಮಳೆಯ ನಡುವೆಯೂ ಸಂಘಟಕರು ಸಭಾಕಾರ್ಯಕ್ರಮ ಆರಂಭಿಸಿದರು..
ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಸಮಾವೇಶ
ಬೃಹತ್ ಸಮಾವೇಶದಲ್ಲಿ ಸಾಹಿತಿ ಕುಂ ವೀರಭದ್ರಪ್ಪ ,ಪ್ರಾಧ್ಯಾಪಕ ಮಹೇಶ್ಚಂದ್ರಗುರು ಹೋರಾಟಗಾರ ಶಾಫಿ ಬೆಳ್ಳಾರೆ, ನಟ ಹೋರಾಟಗಾರ ಚೇತನ್, ನಳಂದ ಬೌದ್ದ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೆಭೋಧಿದತ್ತ ಥೇರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು. ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ ದಂಟರ ಮಕ್ಕಿ ಶ್ರೀನಿವಾಸ್, ದಲಿತ ಮುಖಂಡ ಮರ್ಲೆ ಅಣ್ಣಯ್ಯ ವೇದಿಕೆಯಲ್ಲಿದ್ದರು.
