ತಿನ್ನೋದು ಭಾರತದ ಅನ್ನ ಆದ್ರೂ ಮನಸ್ಸು ಮಾತ್ರ ವೈರಿ ರಾಷ್ಟ್ರದಲ್ಲಿ: ಪೊಲೀಸ್ ಇಲಾಖೆಯಲ್ಲೊಬ್ಬ ಪಾಕ್ ಪ್ರೇಮಿ...!

ಪೊಲೀಸ್ ಇಲಾಖೆಯಲ್ಲಿ ಕೆಲಸ, ಪಾಕಿಸ್ತಾನದ ಮೇಲೆ ಪ್ರೇಮ| ವಾಟ್ಸಾಪ್ ಗ್ರೂಪ್‌ನಲ್ಲಿ ದೇಶವಿರೋಧಿ ಪೋಸ್ಟ್‌ ಹಾಕಿದ ಪೇದೆ| ಈ ಹಿಂದೆ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪಂಡ್ ಆಗಿದ್ದ ಪೊಲೀಸ್ ಪೇದೆ| 

Constable Sent Anti National Post on Whatsapp Group in Davanagere

ದಾವಣಗೆರೆ(ಆ.23):  ದೇಶವಿರೋಧಿ ಪೋಸ್ಟ್‌ ಹಾಕುವ ಮೂಲಕ ಪೇದೆಯೊಬ್ಬರು ಪಾಕಿಸ್ತಾನದ ಪ್ರೇಮ ವ್ಯಕ್ತಪಡಿಸಿದ್ದಾರೆ ಎಂದ ಆರೋಪವೊಂದು ಕೇಳಿ ಬಂದ  ಘಟನೆ ನಗರದಲ್ಲಿ ನಡೆದಿದೆ. ಸನಾವುಲ್ಲಾ ಎಂಬುವರೇ ದೇಶವಿರೋಧಿ ಪೋಸ್ಟ್‌ ಹಾಕಿದ ಪೇದೆಯಾಗಿದ್ದಾರೆ. 

"

ದಾವಣಗೆರೆಯ ಬಸವನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ ಅಗಿ ಕಾರ್ಯನಿರ್ವಹಸುತ್ತಿರುವ ಸನಾವುಲ್ಲಾ 2014 ರಲ್ಲೂ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪಂಡ್ ಆಗಿದ್ದರು ಎಂದು ತಿಳಿದು ಬಂದಿದೆ.

ದಾವಣಗೆರೆ: ಆಯುಷ್ಮಾನ್‌ ಕಾರ್ಡ್‌ ವಿತರಿಸದೆ ತಿಪ್ಪೆಗೆಸೆದ ಪೋಸ್ಟ್‌ಮ್ಯಾನ್‌..!

2008 ಬ್ಯಾಚ್ ಪೊಲೀಸ್ ಟೀಮ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಪವರ್ ಆಫ್ ಪಾಕಿಸ್ತಾನ ಎನ್ನುವ ಪೇಜ್ ಶೇರ್ ಮಾಡಿದ್ದಾನೆ. ಈ ಹಿಂದೆ ಕೂಡ ಇಂತಹದ್ದೇ ದೇಶವಿರೋಧಿ ಪೋಸ್ಟ್ ಹಾಕಿ ಸನಾವುಲ್ಲಾ ಅಮಾನತ್ತುಗೊಂಡಿದ್ದ. ಈಗ ಮತ್ತೊಂದು ದೇಶವಿರೋಧಿ ಪೋಸ್ಟ್ ಹಾಕಿ ಮತ್ತೆ ಪಾಕ್‌ ಪ್ರೇಮವನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾನೆ. ಈ ಸಂಬಂಧ ದಾವಣಗೆರೆ ಎಸ್‌ಪಿ ಹನುಮಂತರಾಯ ಅವರು ತನಿಖೆಗೆ ಆದೇಶಿಸಿದ್ದಾರೆ. 
 

Latest Videos
Follow Us:
Download App:
  • android
  • ios