* ಧ್ವನಿವರ್ಧಕ ಶಬ್ಧ ಸ್ವಯಂ ನಿಯಂತ್ರಣಕ್ಕೆ ಸಮ್ಮತಿ* 60 ಡೆಸಿಬಲ್ ಮೀರದಂತೆ ಧ್ವನಿ ವರ್ಧಕ ಬಳಕೆ* ಧಾರ್ಮಿಕ ಮುಖಂಡರೊಂದಿಗೆ ಸಭೆ
ಬೆಂಗಳೂರು(ಡಿ.24): ಸುಪ್ರೀಂಕೋರ್ಟ್(Supreme Court) ಆದೇಶ ಪಾಲಿಸುವಂತೆ ಪೊಲೀಸರ(Police) ಸೂಚನೆ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಮಸೀದಿಗಳಲ್ಲಿ(Masjid) ಧ್ವನಿವರ್ಧಕ ಬಳಕೆಗೆ ಸ್ವಯಂ ನಿಯಂತ್ರಣ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಸ್ಲಿಂ ಸಮುದಾಯದ ಧರ್ಮಗುರುಗಳು(Muslim Clerics) ಸಮ್ಮಿತಿಸಿದ್ದಾರೆ.
ನ್ಯಾಯಾಲಯದ ಆದೇಶದ ಪ್ರಕಾರ ಮಸೀದಿಗಳಲ್ಲಿ 60 ಡಿಸಿಬಲ್ ಪ್ರಮಾಣ ಮೀರದಂತೆ ಧ್ವನಿ ವರ್ಧಕ ಬಳಕೆಗೆ ಅವಕಾಶವಿದೆ. ಹೀಗಾಗಿ ನಿಗದಿತ ಪ್ರಮಾಣದ ಶಬ್ಧ ಮೀರದಂತೆ ಧ್ವನಿವರ್ಧಕಗಳಿಗೆ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಿಕೊಳ್ಳಲು ಸಿಟಿ ಮಾರುಕಟ್ಟೆ ಜಾಮೀಯಾ ಮಸೀದಿಯ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಸೇರಿದಂತೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಒಪ್ಪಿದ್ದಾರೆ. ಈ ಸಂಬಂಧ ಪ್ರತ್ಯೇಕವಾದ ಸಾಧನವನ್ನು ಧಾರ್ಮಿಕರ ಮುಖಂಡರು ಅಭಿವೃದ್ಧಿಪಡಿಸಿದ್ದು, ಕೆಲವೇ ದಿನಗಳಲ್ಲಿ ನಗರದ ಎಲ್ಲ ಮಸೀದಿಗಳಿಗೆ ಅವರು ವಿತರಣೆ ಮಾಡಲಿದ್ದಾರೆ ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿವೆ.
Srirangapatna Mosque : ಬಾಬ್ರಿ ರೀತಿ ಶ್ರೀರಂಗಪಟ್ಟಣ ಮಸೀದಿ ಕೆಡವಲು ಸಂಚು: ಆರೋಪ
ಈ ಸಂಬಂಧ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಅಧ್ಯಕ್ಷತೆಯಲ್ಲಿ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಮಸೀದಿಗಳ ಧ್ವನಿವರ್ಧಕಗಳಿಗೆ ಅಳವಡಿಸಲಾಗುವ ಸಾಧನವನ್ನು ಪರಿಶೀಲಿಸಲಾಯಿತು. ಆನಂತರ ಪ್ರಾಯೋಗಿಕವಾಗಿ ಪರೀಕ್ಷೆಗೆ ಕೆಲ ಮಸೀದಿಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಧ್ವನಿವರ್ಧಕ ನಿಷೇಧಿಸಿಲ್ಲ: ಪೊಲೀಸರು
ನಗರ ವ್ಯಾಪ್ತಿಯ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಗೆ ನಿರ್ಬಂಧ ಹೇರಿಲ್ಲ. ನ್ಯಾಯಾಲಯದ ಆದೇಶದಂತೆ ಧ್ವನಿ ವರ್ಧಕಗಳ ಶಬ್ಧದ ಪ್ರಮಾಣ ತಗ್ಗಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಸ್ಥಳೀಯ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮಸೀದಿಗಳ ಮುಖ್ಯಸ್ಥರಿಗೆ ಲಿಖಿತವಾಗಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದಾಪುರ ಹಾಗೂ ಸಂಪಿಗೆಹಳ್ಳಿ ಸೇರಿದಂತೆ ನಗರದ ಕೆಲವೆಡೆ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿದ್ದವು.
ಮಸೀದಿಗಳ ಧ್ವನಿವರ್ಧಕಗಳಲ್ಲಿ ಶಬ್ಧ ನಿಯಂತ್ರಣಕ್ಕೆ ಧಾರ್ಮಿಕ ಮುಖಂಡರು ಸ್ವಯಂ ಮುಂದಾಗಿರುವುದು ಅಭಿನಂದನಾರ್ಹ ಕ್ರಮವಾಗಿದೆ. ನ್ಯಾಯಾಲಯದ ಆದೇಶದ ಪಾಲನೆ ವಿಚಾರವಾಗಿ ಪೊಲೀಸರಿಗೆ ಸಮುದಾಯದ ಮುಖಂಡರು ಸಹಕರಿಸಿದ್ದಾರೆ ಅಂತ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಯಾವ ಕಾನೂನಿನಡಿ ಮಸೀದಿಯಲ್ಲಿ ಧ್ವನಿವರ್ಧಕಕ್ಕೆ ಅವಕಾಶ?
ಮಸೀದಿಗಳಲ್ಲಿ(mosques) ಧ್ವನಿವರ್ಧಕಗಳನ್ನು ಅಳವಡಿಸಲು ಯಾವ ಕಾನೂನಿನಡಿ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಮತ್ತೊಮ್ಮೆ ಸೂಚಿಸಿದೆ.
Mathura: ಮಥುರಾದ ಮಸೀದಿ ಹಿಂದೂಗಳಿಗೆ ಕೊಡಿ: ಯೋಗಿ ಸಚಿವನ ಹೇಳಿಕೆ!
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ನಗರದಲ್ಲಿ ಮಸೀದಿಗಳು ಧ್ವನಿವರ್ಧಕ(loudspeakers) ಬಳಸಿ ಶಬ್ದ ಮಾಲಿನ್ಯ ಉಂಟಾಗುತ್ತಿರುವ ವಿಚಾರವಾಗಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿತು. ಅಲ್ಲದೆ, ಧ್ವನಿವರ್ಧಕಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯವನ್ನು ತಡೆಯಬೇಕು. ಧ್ವನಿವರ್ಧಕಗಳನ್ನು ನಿರಂತರವಾಗಿ ಶಾಶ್ವತವಾಗಿ ಬಳಸಲು ಅವಕಾಶ ಕೊಡಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ನಗರದ ವಿವಿಧ 15 ಮಸೀದಿಗಳು ಧ್ವನಿವರ್ಧಕಗಳನ್ನು ಬಳಸಲು ಯಾವ ಕಾನೂನಿನ ಅಡಿ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.
ಕರ್ನಾಟಕದಲ್ಲಿ ಶಬ್ದ ಮಾಲಿನ್ಯ(noise pollution) ಪರಿಣಾಮವಾಗಿ ನಿಯಂತ್ರಿಸಲು ರಾಜ್ಯದಲ್ಲಿ ಮಸೀದಿಗಳಲ್ಲಿ ಉಪಯೋಗಿಸುತ್ತಿರುವ ಧ್ವನಿವರ್ಧಕಕಗಳನ್ನು ನಿಷೇಧಿಸಬೇಕು ಎಂದು ಕೋರಿ ಥಣಿಸಂದ್ರ ಸುತ್ತಮುತ್ತಲಿನ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ರಾಜ್ಯ ಸರ್ಕಾವನ್ನು ಪ್ರಶ್ನಿಸಿತ್ತು.
