Asianet Suvarna News Asianet Suvarna News

Mathura: ಮಥುರಾದ ಮಸೀದಿ ಹಿಂದೂಗಳಿಗೆ ಕೊಡಿ: ಯೋಗಿ ಸಚಿವನ ಹೇಳಿಕೆ!

* ಮಥುರಾದ ಮಸೀದಿ ಹಿಂದೂಗಳಿಗೆ ನಿಡುವಂತೆ ಸಚಿವನ ಹೇಳಿಕೆ

* ನೀವಾಗೇ ನೀಡ್ದಿದ್ದರೆ ನ್ಯಾಯಾಲಯದ ಮೂಲಕ ಪಡೆಯುವ ಮಾತು

* ಮುಸಲ್ಮಾನರೂ ಹಿಂದೂ ಧರ್ಮಕ್ಕೆ ಮರಳುವಂತೆ ಮನವಿ

Should hand over white structure in Mathura to Hindus UP minister Anand Swarup Shukla pod
Author
Bangalore, First Published Dec 7, 2021, 3:55 PM IST

ಲಕ್ನೋ(ಡಿ.07): ಉತ್ತರ ಪ್ರದೇಶದ ಯೋಗಿ ಸರ್ಕಾರದ (Uttar pradesh, Yogi Adityanath Govt) ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಸ್ವರೂಪ್ ಶುಕ್ಲಾ (Anand Swarup Shukla) ಅವರು ಮಥುರಾದಲ್ಲಿ ನಡೆಯುತ್ತಿರುವ ವಿವಾದದ ಕುರಿತು ಮುಸ್ಲಿಂ ಸಮಾಜಕ್ಕೆ ಮನವಿ ಮಾಡಿದ್ದಾರೆ. ಮಥುರಾದ 'ಶ್ರೀ ಕೃಷ್ಣ ಜನ್ಮಭೂಮಿ (Shri Krishna Janmabhoomi) ಸಂಕೀರ್ಣ'ದಲ್ಲಿರುವ 'ಸಫೇದ್ ಭವನ' (ಮಸೀದಿ)ಯನ್ನು ಮುಸ್ಲಿಮರೇ ಮುಂದೆ ಬಂದು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಆನಂದ್ ಸ್ವರೂಪ್ ಮಂಗಳವಾರ ಹೇಳಿದ್ದಾರೆ. ನ್ಯಾಯಾಲಯವು ಅಯೋಧ್ಯೆ ಸಮಸ್ಯೆಯನ್ನು ಪರಿಹರಿಸಿದೆ ಆದರೆ ಕಾಶಿ ಮತ್ತು ಮಥುರಾದಲ್ಲಿನ ಶ್ವೇತ ಗುಮ್ಮಟಗಳು ಹಿಂದೂಗಳಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು. ಅವರು ಕಾಶಿ ಮತ್ತು ಮಥುರಾದಲ್ಲಿ ನಿರ್ಮಿಸಲಾದ ಎರಡು ಮುಸ್ಲಿಂ ಧಾರ್ಮಿಕ ರಚನೆಗಳ ಬಗ್ಗೆ ಈ ಮಾತು ಹೇಳಿದ್ದಾರೆ.

ಮಥುರಾದಲ್ಲಿರುವ ಪ್ರತಿ ಹಿಂದೂಗಳನ್ನು ಚುಚ್ಚುವ ಶ್ವೇತ ಗುಮ್ಮಟಗಳನ್ನು ನ್ಯಾಯಾಲಯದ ಸಹಾಯದಿಂದ ತೆಗೆದುಹಾಕುವ ಸಮಯ ಬರುತ್ತದೆ ಎಂದು ಆನಂದ್ ಸ್ವರೂಪ್ ಹೇಳಿದ್ದಾರೆ. ಭಾರತದ ಮುಸ್ಲಿಮರು ರಾಮ ಮತ್ತು ಕೃಷ್ಣ ತಮ್ಮ ಪೂರ್ವಜರೆಂದು ನಂಬಬೇಕು ಮತ್ತು ಬಾಬರ್, ಅಕ್ಬರ್ ಮತ್ತು ಔರಂಗಜೇಬ್ ದಾಳಿಕೋರರು ಎಂದು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ್ದರು. ಅವರು ನಿರ್ಮಿಸಿದ ಯಾವುದೇ ಕಟ್ಟಡದೊಂದಿಗೆ ನಿಮ್ಮನ್ನು ಸಂಯೋಜಿಸಬೇಡಿ. ಮುಸ್ಲಿಂ ಸಮುದಾಯದವರು ಮುಂದೆ ಬಂದು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿರುವ ಬಿಳಿ ಕಟ್ಟಡವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಈ ಕೆಲಸ ಪೂರ್ಣಗೊಳ್ಳುವ ಕಾಲ ಬರಲಿದೆ ಎಂದಿದ್ದಾರೆ.

'I am Babri' Badges: ಕೇರಳದ ಶಾಲಾ ಮಕ್ಕಳ ಎದೆ ಮೇಲೆ ನಾನು ಬಾಬ್ರಿ ಬ್ಯಾಡ್ಜ್‌!

ವಾಸಿಂ ರಿಜ್ವಿಯಿಂದ ಮುಸ್ಲಿಮರು ಕಲಿಯಬೇಕು

ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಸನಾತನ ಧರ್ಮವನ್ನು ಸ್ವೀಕಾರ ಸಂಬಂಧಿಸಿದ ಪ್ರಶ್ನೆಗೆ ಆನಂದ್ ಸ್ವರೂಪ್ ಇದು ಘರ್‌ ವಾಪಸಿಯಾಗಿದೆ ಮತ್ತು ಮುಸ್ಲಿಮರು ವಾಸಿಂ ರಿಜ್ವಿಯನ್ನು ಅನುಕರಿಸಬೇಕು ಎಂದು ಹೇಳಿದರು. ದೇಶದಲ್ಲಿರುವ ಮುಸ್ಲಿಮರೆಲ್ಲರೂ ಮತಾಂತರಗೊಂಡವರೇ ಆಗಿದ್ದಾರೆ. ಅವರ ಇತಿಹಾಸವನ್ನು ಅವಲೋಕಿಸಿದರೆ 200 ರಿಂದ 250 ವರ್ಷಗಳ ಹಿಂದೆ ಅವರು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರು. ಅವರೆಲ್ಲರೂ ಮನೆಗೆ ಮರಳಬೇಕೆಂದು ನಾವು ಬಯಸುತ್ತೇವೆ. ಭಾರತದ ಮೂಲ ಸಂಸ್ಕೃತಿ 'ಹಿಂದುತ್ವ' ಮತ್ತು 'ಭಾರತೀಯತೆ' ಪರಸ್ಪರ ಪೂರಕವಾಗಿದೆ. ಅಯೋಧ್ಯೆಯಲ್ಲಿ ನಿರಾಯುಧ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ ಸಮಾಜವಾದಿ ಪಕ್ಷ, ಅದರ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಹಿಂದೂ ವಿರೋಧಿ ಎಂದು ಶುಕ್ಲಾ ಬಣ್ಣಿಸಿದರು.

ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

 

ಅಯೋಧ್ಯೆಯ ರಾಮಜನ್ಮಭೂಮಿ (Ayodhya Ram Temple) ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುತ್ತಿರುವಂತೆ ಶ್ರೀಕೃಷ್ಣ ಜನ್ಮಸ್ಥಳವಾದ ಮಥುರೆಯಲ್ಲಿ (Krishna Janmabhoomi in Mathura) ಭವ್ಯ ದೇಗುಲ ನಿರ್ಮಾಣ ಮಾಡುವ ಸುಳಿವನ್ನು ಉತ್ತರ ಪ್ರದೇಶ ಉಪಮುಖ್ಯಮಂತ್ರಿ (Uttar Pradesh) ಕೇಶವ ಪ್ರಸಾದ್‌ ಮೌರ್ಯ (Keshav Prasad Maurya) ನೀಡಿದ್ದಾರೆ. ‘ಅಯೋಧ್ಯೆ ಮತ್ತು ಕಾಶಿಯಲ್ಲಿ ವೈಭವಯುತ ದೇಗುಲ ನಿರ್ಮಾಣ ಕೆಲಸ ಜಾರಿಯಲ್ಲಿದೆ; ಮಥುರಾದಲ್ಲಿ ಸಿದ್ಧತೆ ನಡೆಯುತ್ತಿದೆ’ ಎಂದು ಮೌರ್ಯ ಟ್ವೀಟ್‌ (Tweet) ಮಾಡಿದ್ದಾರೆ. 

ಅಯೋಧ್ಯೆಯಂತೆ ಮಥುರೆಯೂ ಹಿಂದು-ಮುಸ್ಲಿಮರ (Hindu- Muslim) ನಡುವೆ ವಿವಾದದ ಕೇಂದ್ರ ಬಿಂದುವಾಗಿದ್ದು, ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಅವರು ನೀಡಿರುವ ಹೇಳಿಕೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಯೋಧ್ಯೆ-ಕಾಶಿಯ ಬಳಿಕ ಮಥುರಾ ಅಭಿವೃದ್ಧಿಯನ್ನು ಬಿಜೆಪಿ ತನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ವಿವಾದ:

ಕೆಲ ದಿನಗಳ ಹಿಂದಷ್ಟೇ ಹಲವು ಹಿಂದೂ ಸಂಘಟನೆಗಳು (Hindu Organisations) , ಬಾಬ್ರಿ ಮಸೀದಿ ಧ್ವಂಸದ ದಿನವಾದ ಡಿ.6ರಂದು ಕೃಷ್ಣನ ಮೂಲ ಜನಸ್ಥಳ ಎನ್ನಲಾದ ಮತ್ತು ಹಾಲಿ ಮಸೀದಿಯಾಗಿ ಪರಿವರ್ತನೆಗೊಂಡಿರುವ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ (Shahi Mosque Eidgah) ಕೃಷ್ಣನ ವಿಗ್ರಹ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದವು. ಜೊತೆಗೆ ಅಂದು ಕೃಷ್ಣ ದೇವಸ್ಥಾನದ ಕಡೆಗೆ ಬೃಹತ್‌ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಮಥುರಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.

Follow Us:
Download App:
  • android
  • ios