KPCC ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಗ್ಯ ಸುಧಾರಣೆಯಾಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು501 ತೆಂಗಿನ ಕಾಯಿಗಳನ್ನು ಒಡೆದು ಪ್ರಾರ್ಥನೆ ಮಾಡಿದ್ದಾರೆ.

ಹಾಸನ (ಆ.28): ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯ ಸುಧಾರಣೆಗಾಗಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ 501 ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಹಾಸನ ನಗರದ ಗಾಂ​ ಬಜಾರ್‌ ಬಳಿ ಇರುವ ಶ್ರೀ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂದೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಆರೋಗ್ಯ ಮತ್ತು ಸಮಾಜದ ಜನರ ಆರೋಗ್ಯ ಸುಧಾರಣೆಗಾಗಿ ಪಕ್ಷದ ಕಾರ್ಯಕರ್ತರು 501 ತೆಂಗಿನಕಾಯಿಗಳನ್ನು ಒಡೆದು ಪ್ರಾರ್ಥಿಸಿದರು.

ಡಿಕೆ ಶಿವಕುಮಾರ್‌ಗೆ ಕಳ್ಳ ಎಂದ ಬಿಜೆಪಿ MLCಗೆ ನೋಟಿಸ್ ಬಿಸಿ.

ನಂತರ ಅಜಾದ್‌ ರಸ್ತೆಯಲ್ಲಿರುವ ಅಜರತ್‌ ಸೈಯಾದ್‌ ಅಹಮದ್‌ ಶಾ ಖಾದ್ರಿ ಉರುಫ್‌ ಗುಜರಾತಿ ಬಾದ್‌ ಶಾ ದರ್ಗದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಎನ್‌.ಆರ್‌. ವೃತ್ತದ ಬಳಿ ಇರುವ ಅಂತ ಅಂತೋಣಿಯವರ ಚಚ್‌ರ್‍ನಲ್ಲಿ ಪಾರ್ಥಿಸಿದರು.

ಕಾಂಗ್ರೆಸ್‌ ಹಾಸನ ಗ್ರಾಮಾಂತರ ಬ್ಲಾಕ್‌ ಸಮಿತಿ ಅಧ್ಯಕ್ಷ ರಘು, ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ಕಾಯಿಲೆಯಿಂದ ಜಗತ್ತೆ ತತ್ತರಿಸಿ ಹೋಗಿದೆ. ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈಗಾಗಾಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟುಬೇಗ ಕೊರೋನಾ ಸೋಂಕಿನಿಂದ ಗುಣಮುಖರಾಗಿ ವಾಪಸ್‌ ಬರಲಿ ಎಂದು ಸಮಾಜದ ಜನತೆಗೂ ಕೂಡ ಬೇಡಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಾಸನ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್‌ನಿಂದ 501 ತೆಂಗಿನಕಾಯಿ ಒಡೆದು ದೇವರಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಜೊತೆಗೆ ಮಸೀದಿಗಳಲ್ಲಿ, ಚಚ್‌ರ್‍ಗಳಲ್ಲಿಯೂ ಪ್ರಾರ್ಥಿಸಿರುವುದಾಗಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಕೊರೋನಾ ಸೋಂಕು!...

ಈ ಸಂದರ್ಭದಲ್ಲಿ ಹಾಸನ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ಆರೀಪ್‌, ಎನ್‌.ಎಸ್‌.ಯು.ಐ. ಜಿಲ್ಲಾಧ್ಯಕ್ಷ ರಂಜೀತ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಣ್ಣ, ಶಿವಕುಮಾರ್‌, ಪ್ರಕಾಶ್‌, ತಾಲೂಕು ಪಂಚಾಯಿತಿ ಸದಸ್ಯೆ ನೇತ್ರಾವತಿ ದೇವರಾಜು ಇತರರು ಪಾಲ್ಗೊಂಡಿದ್ದರು.