Asianet Suvarna News Asianet Suvarna News

ಕಾಂಗ್ರೆಸ್ ವಶವಾದ 6 ಸ್ಥಾನ : ಭರ್ಜರಿ ಗೆಲುವು

ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹುಮತ ಪಡೆದಿದ್ದಾರೆ. ಅತಿ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. 

Congress Won 6 Co operative Societies in Uttar Kannada Haliyal
Author
Bengaluru, First Published Jan 23, 2020, 12:22 PM IST

ಹಳಿಯಾಳ (ಜ.23): ತಾಲೂಕಿನ 13 ಸೇವಾ ಸಹಕಾರಿ ಸಂಘಗಳ ಪೈಕಿ 11  ಸಂಘಗಳ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನವಾಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ಹೆಚ್ಚು ಸ್ಥಾನಗಳು ಒಲಿದಿವೆ. ಆರು ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹುಮತ ಗಳಿಸಿದ್ದಾರೆ. ಇತ್ತ ಬಿಜೆಪಿಯು 2 ಸಹಕಾರಿ ಸಂಘಗಳಲ್ಲಿ ಬಹುಮತ ಗಳಿಸಿದ್ದರೆ, ಮೂರು ಸಂಘಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಸಮಾನವಾಗಿ
ಆಯ್ಕೆಯಾಗಿದ್ದಾರೆ.

ಸಹಕಾರಿ ಕಾಯ್ದೆ 1959 ರ ಅನುಷ್ಠಾನದಿಂದ ಸಾಕಷ್ಟು ಷೇರುದಾರ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದರು. ಇದನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸಿದ ಮಾಜಿ ಶಾಸಕ ಸುನೀಲ ಹೆಗಡೆ ಅವರ ನೇತೃತ್ವದಲ್ಲಿ ಬಿಜೆಪಿಯೂ ಉತ್ತಮ ಸ್ಪರ್ಧೆಯೊಡ್ಡಿತು. ಕಾಂಗ್ರೆಸ್ ಬೆಂಬಲಿಗರು ತೇರಗಾಂವ ನಾಗಶೆಟ್ಟಿಕೊಪ್ಪ, ಆಲೂರ, ಬಿ.ಕೆ. ಹಳ್ಳಿ ಕಾವಲವಾಡ, ಹಳಿಯಾಳ ಸಹಕಾರಿ ಸಂಘದಲ್ಲಿ ಬಹುಮತ ಗಳಿಸಿದ್ದಾರೆ. 

ಬಿಜೆಪಿಯು ಬೆಳವಟಗಿ, ಯಡೋಗಾ ಸಂಘದಲ್ಲಿ ಬಹುಮತ ಗಳಿಸಿದ್ದಾರೆ. ಗುಂಡೊಳ್ಳಿ ಮಂಗಳವಾಡ ಹಾಗೂ ಮದ್ನಳ್ಳಿ ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಬೆಂಬಲಿತರು ಸಮನಾಗಿ ಗೆದ್ದಿದ್ದರಿಂದ ಫಲಿತಾಂಶ ಟೈ ಆಗಿದೆ. 

ರೈತ ಸೇವಾ ಸಹಕಾರಿ ಸಂಘ: ಈ ಬಾರಿ ಗಮನ  ಸೆಳೆದ ಪಟ್ಟಣದಲ್ಲಿ ರೈತ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನವಾಣೆಯಲ್ಲಿ ಎಲ್ಲ 12 ಸ್ಥಾನಗಳನ್ನು  ಕಾಂಗ್ರೆಸ್ ಬೆಂಬಲಿಗರು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದಾರೆ. ಎಸ್.ಎಲ್. ಘೋಟ್ನೆಕರ, ಶಿವಪುತ್ರಪ್ಪ ನುಚ್ಚಂಬ್ಲಿ, ಲತಿಫಶಾ ಕರೀಮಷಾ ಲತೀಫನವರ, ರೇಷ್ಮಾ ಮಾರುತಿ ಪಾಟೀಲ, ಬಾಲಕೃಷ್ಣ ಪರಶುರಾಮ ಶಹಾಪೂರಕರ, ಮಂಜುನಾಥ ಶಿವಾಜಿ ಬಂಡಿವಾಡ, ಬಸವರಾಜ ಬಸವಣ್ಣಿಪ್ಪ ಮಡ್ಡಿ, ಮನೋಹರ ಈಶ್ವರ ಅಂಗ್ರೋಳ್ಳಿ, ಸಹದೇವ ಯಲ್ಲಪ್ಪಾ ಮಡಿವಾಳ, ಸಂಜು ಓಮಣ್ಣ ಗೌಡಾ(ಪಾಟೀಲ), ರುಕ್ಮಾ ಮಹಾಬಳೇಶ್ವರ ಭಾಗ್ವತಕರ, ವಿಶಾಲ ಶಿವಾಜಿ ಘೋಟ್ನೇಕರ ಆಯ್ಕೆಯಾಗಿದ್ದಾರೆ. 

‘ಡಿ.ಕೆ.ಶಿವಕುಮಾರ್ ದಾಖಲೆ ಕೊಡದಿದ್ದರೆ ಚುನಾವಣೆಗೆ ನಿಲ್ಲೋದು ಬೇಡ...

ಫಲಿತಾಂಶ ವಿವರ: ಕಾಮಧೇನು ಸೇವಾ ಸಹಕಾರಿ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರು 9 ಹಾಗೂ ಬಿಜೆಪಿ 2 ಸ್ಥಾನ. ನಾಗಶೆಟ್ಟಿಕೊಪ್ಪ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರು 9 ಹಾಗೂ ಬಿಜೆಪಿ 3. ಕಲ್ಪತರು ಎಸ್.ಎಸ್. ಸಂಘ ಬಿ.ಕೆ. ಹಳ್ಳಿಯಲ್ಲಿ ಕಾಂಗ್ರೆಸ್ 10 ಬಿಜೆಪಿ 2. ಸೋಮಶ್ವೇರ ಎಸ್.ಎಸ್. ಸಂಘ ಕಾವಲವಾಡದಲ್ಲಿ ಕಾಂಗ್ರೆಸ್ ಬೆಂಬಲಿಗರು 9 ಬಿಜೆಪಿ 2. ದಾಂಡೇಲೆಪ್ಪ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ಎಲ್ಲ 12  ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ನನ್ನಿಂದ ಯಾವ ಖಾತೆಗೂ ಬೇಡಿಕೆ ಇಲ್ಲ : ಶಾಸಕ ಹೆಬ್ಬಾರ್...
 
ಬಸವೇಶ್ವರ ಎಸ್.ಎಸ್. ಸಂಘದಲ್ಲಿ ಬೆಳವಟಗಿ ಬಿಜೆಪಿ ಬೆಂಬಲಿತರಿಗೆ ಎಲ್ಲ 12 ಸ್ಥಾನಗಳಲ್ಲಿ ಜಯ. ಬಿದ್ರೋಳ್ಳಿ  ಎಸ್.ಎಸ್. ಸಂಘ ಯಡೋಗಾ ಬಿಜೆಪಿ ಬೆಂಬಲಿತರು 7 ಕಾಂಗ್ರೆಸ್ ಬೆಂಬಲಿಗರು 5. ಮಂಗಳವಾಡ ಎಸ್. ಎಸ್. ಸಂಘದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ. ಮದ್ನಳ್ಳಿ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ. ಗುಂಡೊಳ್ಳಿಯ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್
ಹಾಗೂ ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ.

Follow Us:
Download App:
  • android
  • ios