ಮೈಸೂರು(ಅ.02): ಅಸಾಂವಿಧಾನಿಕ ಪದ ಬಳಸಿ ಪೊಲೀಸರನ್ನು ನಿಂದಿಸಿರುವ ಸಂಸದ ಪ್ರತಾಪ್‌ ಸಿಂಹ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ತಮ್ಮ ಪ್ರತಾಪವನ್ನು ಪೊಲೀಸರ ಮುಂದೆ ತೋರಿಸುವ ಬದಲು ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರಲು ತೋರಿಸಲಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್‌ ಒತ್ತಾಯಿಸಿದ್ದಾರೆ.

ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

ಪ್ರತಾಪ್‌ ಸಿಂಹ ಎರಡನೇ ಬಾರಿಗೆ ಗೆದ್ದಿರುವುದು ಮೋದಿಯ ಮುಖ ಇಟ್ಟುಕೊಂಡು. ಅದು ದೊಡ್ಡ ಸಂಗತಿಯೇನಲ್ಲ, ಸಂಸದರಾದರು ಮೈಸೂರು ಮತ್ತು ಕೊಡಗು ಜಿಲ್ಲೆಗಳಿಗೆ ಅವರ ಕೊಡುಗೆ ಶೂನ್ಯ. ಕೊಡಗು ಸಂತ್ರಸ್ತರಿಗೆ ಮತ್ತು ಅಲ್ಲಿನ ಪ್ರವಾಹಕ್ಕೆ ಇನ್ನು ಸಹ ಪರಿಹಾರ ನೀಡಲಾಗಿಲ್ಲ. ಅವರೊಬ್ಬ ನಾಲಾಯಕ್‌ ಸಂಸದ. ಕೂಡಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪರಿಹಾರ ತರುವುದಕ್ಕೆ ಪೌರುಷ ತೋರಿಸಲಿ:

ಸಂಸದ ಪ್ರತಾಪ್‌ ಸಿಂಹ ಪೊಲೀಸರ ಮುಂದೆ ತಮ್ಮ ಪೌರುಷ ತೋರಿಸುವ ಬದಲು ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರಲು ಬಳಸಲಿ. ಅದನ್ನು ಬಿಟ್ಟು ಇಲ್ಲಿನ ಪೊಲೀಸರ ಮೇಲೆ ನಾಲಿಗೆಯ ಪ್ರತಾಪ ತೋರಿಸುವುದಲ್ಲ. ಕೆಲವು ಬಿಜೆಪಿ ನಾಯಕರಿಗೆ ನಾಲಿಗೆಗೆ ಎಲುಬಿಲ್ಲ. ಅದರಲ್ಲೂ ಸಿಂಹನಿಗೆ ಹಿಂದಿನಿಂದಲೂ ಎಲುಬಿಲ್ಲದ ನಾಲಿಗೆ. ಇಷ್ಟಬಂದಂತೆ ಮಾತನಾಡುತ್ತಾರೆ. ಕೂಡಲೇ ತಮ್ಮ ತಪ್ಪನ್ನು ಅರಿತು ಸಂಸದ ಸ್ಥಾನಕ್ಕೆ ಗೌರವ ಕೊಟ್ಟು ಪೊಲೀಸರಿಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಹೇಳಿದರು.

ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗದ ನಡೆ: ಆರೋಪ