Asianet Suvarna News Asianet Suvarna News

' ಆಂತರಿಕ ಸಮಸ್ಯೆಯಿಂದ ಕಳೆದ ಬಾರಿ ಸೋತಿದ್ದೇವೆ: ಈಗ ಕಾಂಗ್ರೆಸ್‌ ಸೋಲುವುದಿಲ್ಲ'

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಂತರಿಕ ಸಮಸ್ಯೆ ಮತ್ತು ಪ್ರಚಾರ, ಕೆಲ ಗೊಂದಲ ಕಾರಣಗಳಿಂದಾಗಿ ಕಾಂಗ್ರೆಸ್‌ ಪಕ್ಷ ಸೋತಿದ್ದೇವೆ ಹೊರತು ಮತದಾರರಿಂದಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ ಹೇಳಿದರು.

Congress Will Win next Karnataka Assembly Election snr
Author
First Published Nov 1, 2022, 4:52 AM IST

 ಸಾಲಿಗ್ರಾಮ (ಅ.01):  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಂತರಿಕ ಸಮಸ್ಯೆ ಮತ್ತು ಪ್ರಚಾರ, ಕೆಲ ಗೊಂದಲ ಕಾರಣಗಳಿಂದಾಗಿ ಕಾಂಗ್ರೆಸ್‌ ಪಕ್ಷ ಸೋತಿದ್ದೇವೆ ಹೊರತು ಮತದಾರರಿಂದಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ ಹೇಳಿದರು.

ತಾಲೂಕಿನಾದ್ಯಂತ ಕಾಂಗ್ರೆಸ್‌ (Congress)  ಪಕ್ಷ ಹಮ್ಮಿಕೊಂದಿರುವ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮಕ್ಕೆ ಚುಂಚನ ಕಟ್ಟೆಹೋಬಳಿಯ ಕಾರ್ಯಕರ್ತರು ಚುಂಚನ ಕಟ್ಟೆ ರಾಮ ದೇಗುಲದಲ್ಲಿ (Temple) ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಮೂಹಿಕವಾಗಿ ಚಾಲನೆ ನೀಡಿ ಮಾತನಾಡಿದರು.

ಮುಂಬರುವ ಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಎಲ್ಲಾ ಸಮಾಜದ ಪಕ್ಷ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಈಗಿನಿಂದಲೇ ಸಿದ್ಧತೆ ಆರಂಭಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ 75 ದಿನಗಳ ಕಾಲ ತಾಲೂಕಿನ ಪ್ರತಿ ಗ್ರಾಮದ ಮನೆ ಮನೆಗಳಿಗೆ ಪಾದಯಾತ್ರೆ ಮೂಲಕ ಹಿರಿಯರ ಮತ್ತು ಕಿರಿಯರ ಹಾಗೂ ಹಿತೈಷಿಗಳ ಆಶೀರ್ವಾದ ಪಡೆದು ಅವರಿಂದ ಮಾರ್ಗದರ್ಶನ ಹಾಗೂ ಸಲಹೆ ಪಡೆಯುವುದರೊಂದಿಗೆ ಈ ಬಾರಿ ಅಂತಹ ಯಾವುದೇ ಸಮಸ್ಯೆಗಳಿಗೆ ಆಸ್ಪದ ಕೊಡದೆ ಸಮರ್ಥವಾಗಿ ಚುನಾವಣೆ ಎದುರಿಸಲು ನಮ್ಮ ಮುಖಂಡರು ಸಿದ್ಧರಿದ್ದೇವೆ ಎಂದರು.

ಎಲ್‌ಐಸಿ ಜಗದೀಶ್‌ ಮಾತನಾಡಿದರು. ಈ ವೇಳೆ ಹೋಬಳಿ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಸಚ್ಚಿನ್‌, ಲಾಯರ್‌ ಪುನೀತ್‌, ಅಭಿಷೇಕ್‌ ಗೌಡ, ಹಳೆಯೂರು ಮಂಜುನಾಥ್‌, ಹೊಸೂರ್‌ ಮೀನ್‌ ಮಧು, ಮಾಯಿಗೌಡನಹಳ್ಳಿ ಜಯರಾಮ…, ಮೇಕಾನಿಕ್‌ ಮುನ್ನ, ಗ್ರಾಪಂ ಸದಸ್ಯರಾದ ಮಹದೇವ, ಸಾಲೆಕೊಪ್ಪಲು ನೂತನ್‌, ಸೋಮನಹಳ್ಳಿ ಶಿವಪ್ಪ, ದಿನೇಶ್‌, ಹರೀಶ್‌, ಹಾಡ್ಯ ಪ್ರಸನ್ನ, ರಘು, ಕುಮಾರಸ್ವಾಮಿ, ಹೊಸಕೋಟೆ ಮಾದಪ್ಪ, ಚಿಕ್ಕೆಗೌಡ, ವೆಂಕಟೇಶ್‌, ಪ್ರಸನ್ನ, ಜಯಣ್ಣ, ಹನಸೋಗೆ ನವೀನ್‌, ನವೀನ್‌ ನಾಯಕ, ಹರೀಶ್‌, ಪಾನಿ ಮಹೇಶ್‌, ಮುಖಂಡರಾದ ಮಲ್ಲಿಕಾರ್ಜುನ, ವಿಜಿ, ಅನಂತ ಸೇರಿದಂತೆ ಸಾವಿರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್‌ನಲ್ಲಿ ಅರ್ಜಿ ಆಹ್ವಾನ : 

ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್‌ ಅಧಿಕೃತ ಚಾಲನೆ ನೀಡಿದ್ದು, ನ.5ರಿಂದ ನ.15ರವರೆಗೆ 224 ಕ್ಷೇತ್ರಗಳಿಂದಲೂ ಅರ್ಹ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ

ಭಾನುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದ ಸಿದ್ಧತೆ ಕುರಿತು ಚರ್ಚಿಸಲು ಹಿರಿಯ ನಾಯಕರ ಸಭೆ ನಡೆಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.

ಕಳೆದ ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರು ಪಕ್ಷದ ನಿಧಿಗೆ 1 ಲಕ್ಷ ರು. ನೀಡಬೇಕು ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಷ್ಟುಶುಲ್ಕ ನಿಗದಿ ಮಾಡಬೇಕು. ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ನ.4ರಿಂದ ಸುರ್ಜೇವಾಲಾ ಸರಣಿ ಸಭೆ:

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿರುವ ಪರಿಸ್ಥಿತಿ ಹಾಗೂ ಯಾರಿಗೆ ಟಿಕೆಟ್‌ ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂಬ ಬಗ್ಗೆ ಚರ್ಚಿಸಲು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳ ಜತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ನೇರ ಸಭೆ ಹಮ್ಮಿಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸಮನ್ವಯ ಸಭೆ ಹೆಸರಿನಲ್ಲಿ ನ.4 ರಂದು ಶುಕ್ರವಾರ ಕೋಲಾರ, ವಿಜಯಪುರ, ಉತ್ತರ ಕನ್ನಡ, ನ.5 ರಂದು ಹಾಸನ, ದಕ್ಷಿಣ ಕನ್ನಡ, ಬೆಳಗಾವಿ ನಗರ ಮತ್ತು ಗ್ರಾಮೀಣ, ಚಿಕ್ಕೋಡಿ, ನ.8 ರಂದು ಬೆಂಗಳೂರು ನಗರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್‌, ಬೆಂಗಳೂರು ಗ್ರಾಮಾಂತರ, ನ.9 ರಂದು ರಾಯಚೂರು, ತುಮಕೂರು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

 ಬೆಂಗಳೂರು: ಭಾನುವಾರ ನಡೆದ ಕೆಪಿಸಿಸಿ ಸಭೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿರುವ ಯಾತ್ರೆಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ. ಈ ವೇಳೆ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹೈಕಮಾಂಡ್‌ ನೀಡಿರುವ ಟಾಸ್‌್ಕನಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೂರು ಪ್ರತ್ಯೇಕ ರಾರ‍ಯಲಿಗಳು ನಡೆಯಬೇಕು ಎಂದು ಸಭೆಗೆ ತಿಳಿಸಿದ್ದಾರೆ.

Follow Us:
Download App:
  • android
  • ios