ಯಲ್ಲಾಪುರ [ನ.29]:  ಉಪ ಚುನಾವಣೆಯಲ್ಲಿ ರಾಜ್ಯದ ಯಲ್ಲಾಪುರ ಸೇರಿದಂತೆ 12 ಕ್ಷೇತ್ರಗಳನ್ನು ಗೆಲ್ಲುವುದು ಖಚಿತ ಎಂದು ಮಾಜಿ ಸಚಿವಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. 

ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದ ರಾಜಕಾರಣ ಇಲ್ಲಿನ ಉಪ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧೆಡೆ ಚೌಕಾಶಿ ರಾಜಕಾರಣ ಮಾಡುವ ಮೂಲಕ ಬಿಜೆಪಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ. 

ಉಪ ಚುನಾವಣೆ ನಿಷ್ಠೆ ಮತ್ತು ದ್ರೋಹದ ನಡುವೆ, ಪ್ರಾಮಾಣಿಕರು ಹಾಗೂ ಭ್ರಷ್ಟಾಚಾರಿಗಳ ನಡುವೆ, ವಿಶ್ವಾಸಿಗರು ಹಾಗೂ ಮೋಸಗಾರರ ನಡುವಿನ ಸಮರ ವಾಗಿದ್ದು, ಕಾಂಗ್ರೆಸ್‌ನ ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಕ್ಕೆ ಜಯ ದೊರಕಲಿದೆ ಎಂದರು. ಅನರ್ಹರ ಹಣೆಬರಹವನ್ನು ಕಾಂಗ್ರೆಸ್ ನಾಯಕರು ಜನರೆದುರು ಬಿಚ್ಚಿಡುತ್ತಿದ್ದಾರೆ. ಇದನ್ನು ಸಹಿಸಲಾಗದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ. 

ಐಟಿ ದಾಳಿ: ಡಿಕೆಶಿ, ಸಿದ್ದರಾಮಯ್ಯ, HDK ಸೇರಿದಂತೆ ಹಲವರ ವಿರುದ್ಧ FIR...

ಪ್ರಕರಣ ದಾಖಲಿಸಿದರೆ ಅಭ್ಯಂತರವಿಲ್ಲ. ಸೂಕ್ತ ಪುರಾವೆಗಳನ್ನು ನ್ಯಾಯಾಲಯದಲ್ಲಿ ಒದಗಿಸಲಾಗುವುದು. ಅನರ್ಹರು ಬಿಜೆಪಿಯಿಂದ ಕೋಟಿಗಟ್ಟಲೆ ಹಣ ಪಡೆದಿರುವುದಕ್ಕೆ ಯಡಿಯೂರಪ್ಪ ಅವರ ಆಡಿಯೊ, ಕೆಲ ಅನರ್ಹ ಶಾಸಕರ ಮಾತುಗಳು ಸೇರಿದಂತೆ ಸಾಕಷ್ಟು ಪುರಾವೆಗಳಿವೆ ಎಂದ ಅವರು ಅನರ್ಹರು ಪಕ್ಷಕ್ಕೆ ಹಾಗೂ ಜನತೆಗೆ ಮಾಡಿದ ಮೋಸವನ್ನು ಜನತಾ ನ್ಯಾಯಾಲಯದ ಎದುರು ತೆರೆದಿಡುತ್ತಿದ್ದೇವೆ. ನ್ಯಾಯಾಧೀಶರಾದ ಜನತೆ ಸೂಕ್ತ ತೀರ್ಪು ನೀಡಲಿದ್ದಾರೆ ಎಂದರು. 

ಅನರ್ಹರಿಗೆ ಸೋಲಿನ ರುಚಿ; ಡಿಕೆಶಿ ಲಾಜಿಕ್‌ಗೆ ಜೆಡಿಎಸ್ ಕಾರ್ಯಕರ್ತರು ರೆಡಿ?...

ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗ್ವತ, ಶಂಭು ಶೆಟ್ಟಿ, ಸದಸ್ಯ ಉಲ್ಲಾಸ ಶಾನಭಾಗ, ಡಿ. ಎನ್. ಗಾಂವ್ಕರ ಮುಂತಾದವರಿದ್ದರು.