ಬೆಂಗಳೂರು, (ನ.29): ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಸಿದ್ದರಾಮಯ್ಯ, ಡಿ.ಸಿ.ತಮ್ಮಣ್ಣ, ಡಾ.ಜಿ.ಪರಮೇಶ್ವರ್, ಡಿಕೆ ಶಿವಕುಮಾರ್, LR ಶಿವಲಿಂಗೇಗೌಡ ಹಾಗೂ ಸಾರಾ ಮಹೇಶ್ ವಿರುದ್ಧ ಬೆಂಗಳೂರಿನ ಕಮರ್ಸಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಟಿ ದಾಳಿ: ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾದಿಯಲ್ಲಿ ಕುಮಾರಸ್ವಾಮಿ ನಡೆ

ಕೇವಲ ರಾಜಕೀಯ  ನಾಯಕ ಮೇಲೆ ಮಾತ್ರವಲ್ಲದೇ ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳ ಮೇಲೂ FIR ಹಾಕಲಾಗಿದೆ.

2019 ಲೋಕಸಭಾ ಚುನಾವಣೆ ವೇಳೆ ಕೆಲವು ನಾಯಕರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಐಟಿ ದಾಳಿ ಖಂಡಿಸಿ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿ ಮುಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದರು.

ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.ಅಲ್ಲದೇ ಪೊಲೀಸರು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಮಲ್ಲಿಕಾರ್ಜುನ ದೂರು ದಾಖಲಿಸಿದ್ದರು. 

ದಳಪತಿ ಆಪ್ತರ ಮೇಲೆ ಮುಂದುವರಿದ ಐಟಿ ದಾಳಿ!

 ಈ ಹಿನ್ನೆಲೆಯಲ್ಲಿ  ಕಾಂಗ್ರೆಸ್, ಜೆಡಿಎಸ್ ನಾಯಕರು ಸೇರಿದಂತೆ ಪೊಲೀಸ್ ಅಧಿಕಾರಿಗಳ ಮೇಲೆ  ಸೆಕ್ಷನ್ 217, 176, 121, 177, 506, 153A, 503, 414, 149, 143, 505(2), 124A, 353, 409, 350, 405, 417, 120(A), 416, 171C, 119, 141,142 ಮತ್ತು 499ರ ಅನ್ವಯ ಕಂಪ್ಲೆಂಟ್ ಆಗಿದೆ.