ಶಿರಸಿ [ಡಿ.02]:  ಯಲ್ಲಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನದ್ದು. ಒಮ್ಮೆ ಮಾತ್ರ ಬಿಜೆಪಿ ಗೆದ್ದಿತ್ತು. ಈ ಕ್ಷೇತ್ರವನ್ನು ಈ ಬಾರಿ ಕೂಡ ಕಾಂಗ್ರೆಸ್ ಉಳಿಸಿಕೊಳ್ಳಲಿದೆ. ನಮ್ಮ ಪಕ್ಷದ ನಾಯಕರ, ಪ್ರಮುಖ ಕಾರ್ಯಕರ್ತರು ಒಂದಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಕಾಳಂಗಿ ಭಾಗದಲ್ಲಿ ಮತ ಯಾಚನೆ ನಡೆಸುವ ವೇಳೆ ಕಾರ್ಯಕರ್ತರಲ್ಲಿ, ಮತದಾರರಲ್ಲಿಅವರು ವಿಶ್ವಾಸ ವ್ಯಕ್ತಪಡಿಸಿದರು.ಯಲ್ಲಾಪುರ ಕ್ಷೇತ್ರದ ಪರಿಚಯ ನನಗಿದೆ. ಜಿಲ್ಲಾ ಪಂಚಾಯ್ತಿ ಬದನಗೋಡದ ಸದಸ್ಯನೂ ಆಗಿದ್ದೇನೆ. ಈ ಕ್ಷೇತ್ರ ಹೊಸತಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಹನ್ನೊಂದು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. 

ಎಲ್ಲ ಕಡೆ ಪಕ್ಷ ವೀಕ್ ಇದೆ ಎಂಬ ಭಾವನೆ ಇಲ್ಲ. ಗೆಲವು ನಮ್ಮದೇ ಎಂದರು. ಈ ರೀತಿ ಉಪ ಚುನಾವಣೆಗೆ ಚುನಾಯಿತ ಯಾವ ಸದಸ್ಯರೂ ಮಾಡಬಾರದು ಎಂದೂ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.