ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೇ ಹೆಚ್ಚು ಲಾಭ : ಕೈ ನಾಯಕ
ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯಿಂದ ಕಾಂಗ್ರೆಸ್ ಗೇ ಹೆಚ್ಚು ಲಾಭವಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರೂ ಹಾಗೂ ಕಾಂಗ್ರೆಸ್ ನ ಪರಾಜಿತ ವಿಧಾನಸಭಾ ಅಭ್ಯರ್ಥಿಯಾಗಿರುವ ಬೆಮಲ್ ಕಾಂತರಾಜ್ ಹೇಳಿದರು.
ತುರುವೇಕೆರೆ : ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯಿಂದ ಕಾಂಗ್ರೆಸ್ ಗೇ ಹೆಚ್ಚು ಲಾಭವಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರೂ ಹಾಗೂ ಕಾಂಗ್ರೆಸ್ ನ ಪರಾಜಿತ ವಿಧಾನಸಭಾ ಅಭ್ಯರ್ಥಿಯಾಗಿರುವ ಬೆಮಲ್ ಕಾಂತರಾಜ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವವರು ಜೆಡಿಎಸ್ ನಲ್ಲಿ ಉಳಿಯುವುದಿಲ್ಲ. ಕೋಮುದಾದಿ ಬಿಜೆಪಿಯೊಂದಿಗೆ ಜೆಡಿಎಸ್ ಕೈ ಜೋಡಿಸುತ್ತಿರುವುದು ಜೆಡಿಎಸ್ ಪಕ್ಷದ ಉಳಿವಿಗಾಗಿ ಅಷ್ಟೆ. ಈಗಾಗಲೇ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಮುಂಬರುವ ಯಾವ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಅಸಾಧ್ಯದ ಮಾತು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎಂದು ಬೆಮಲ್ ಹೇಳಿದರು. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿಯಿಂದ ಹೊರಬಂದ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆ ವೇಳೆಗೆ ಸಾಕಷ್ಟು ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಸಲುವಾಗಿ ಪ್ರತಿ ಗ್ರಾ.ಪಂ.ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಗುವುದು. ಈ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಚಿವ ಕೆ.ಎನ್.ರಾಜಣ್ಣ ಭಾಗವಹಿಸಲಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸುವರು ಎಂದು ಬೆಮಲ್ ಕಾಂತರಾಜ್ ಭವಿಷ್ಯ ನುಡಿದರು.
ಮೂರಾಬಟ್ಟೆ - ಶಾಸಕ ಎಂ.ಟಿ.ಕೃಷ್ಣಪ್ಪನವರು ತಮ್ಮ ಬಗ್ಗೆ ಕ್ಷೇತ್ರದ ಜನರು ಬಹಳ ಎಚ್ಚರದಿಂದಿರಬೇಕು ಎಂದು ಹೇಳಿರುವುದು ವಿಷಾದನೀಯ. ಯಾವುದೋ ಒಂದು ಮಾಧ್ಯಮ ತಮ್ಮನ್ನು ತೇಜೋವಧೆ ಮಾಡುವ ಸಲುವಾಗಿ ಮಿಥ್ಯಾರೋಪ ಹೊರಿಸಿ ಸುದ್ದಿ ಪ್ರಸಾರ ಮಾಡಿತು. ಇದಕ್ಕೆ ಸಂಬಂಧಿಸಿದಂತೆ ತಾವು ಸಂಬಂಧಿಸಿದ ಸುದ್ದಿವಾಹಿನಿ ಮತ್ತು ಆರೋಪ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇನೆ. ಆದರೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಸಧೃಡಗೊಂಡು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಲ್ಲಿ ಗೆಲುವು ಸಾಧಿಸುವುದನ್ನು ತಡೆಗಟ್ಟಲು ವಿನಕಾರಣ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಉರುಳಿಸಲು 50 ಜನ ಶಾಸಕರು ಸಿದ್ಧ: ಸುರೇಶ್‌ಗೌಡ
ಶಾಸಕ ಎಂ.ಟಿ.ಕೃಷ್ಣಪ್ಪನವರು ತಮ್ಮ ಕುರಿತು ವೈಯಕ್ತಿಕವಾಗಿ ದೂರಿರುವುದು ಅವರ ಸಣ್ಣತನವನ್ನು ತೋರುತ್ತದೆ. ಕೃಷ್ಣಪ್ಪನವರು ಹಾಗೂ ಅವರ ಕುಟುಂಬದ ಬಗ್ಗೆ ಕೆದಕಿ ಜಾತಕ ತೆಗೆದರೆ ಅವರ ಮಾನ ಮೂರಾಬಟ್ಟೆಯಾಗುವುದರಲ್ಲಿ ಅನುಮಾನವಿಲ್ಲ. ಕೃಷ್ಣಪ್ಪನವರು ರಾಜಕೀಯವಾಗಿ ಸಾಕ್ಷಾಧಾರವಿಟ್ಟು ಏನನ್ನಾದರೂ ಮಾತನಾಡಲಿ, ಅದು ಬಿಟ್ಟು ಸುಖಾ ಸುಮ್ಮನೆ ನನ್ನ ವೈಯಕ್ತಿಕವಾಗಿ ದೂರಿದಲ್ಲಿ ತಕ್ಕ ಉತ್ತರ ನೀಡಿ ಸಾರ್ವಜನಿಕವಾಗಿ ಅವರ ಗೌರವವನ್ನು ಹರಾಜು ಹಾಕಲಾಗುವುದು ಎಂದು ಬೆಮಲ್ ಕಾಂತರಾಜ್ ಎಚ್ಚರಿಸಿದರು.
ರೌಡಿಸಂ - ನನ್ನನ್ನು ರೌಡಿ ಪಟಾಲಂ ಹೊಂದಿರುವ ವ್ಯಕ್ತಿ ಎಂದು ದೂರಿದ್ದಾರೆ. ಆದರೆ, ನಿಜವಾದ ರೌಡಿ ಯಾರು ಎಂಬುದು ಈ ಕ್ಷೇತ್ರದ ಜನತೆಗೆ ಗೊತ್ತಿದೆ. ಚುನಾವಣೆ ವೇಳೆ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ಮಾಡಿದವರು ಯಾರು?, ಪ.ಪಂ. ಸದಸ್ಯೆಯನ್ನು ಅಪಮಾನಗೊಳಿಸಿ ನ್ಯಾಯಾಲಯದ ಕಟೆಕಟೆ ಹತ್ತಿದವರು ಯಾರು?, ಜೆಡಿಎಸ್ ನ ಮುಖಂಡರಾಗಿದ್ದ ಎಂ.ಡಿ.ರಮೇಶ್ ಗೌಡರಿಗೆ ಹೊಡೆಸಲು ಹೆಡೆಮಟ್ಟೆ ತಂದಿದ್ದು ಯಾರು?, ಅವರ ಕಟೌಟ್ ನ ಧ್ವಂಸ ಮಾಡಿದ್ದು ಯಾರು?, ಹೀಗೆ ಹತ್ತಾರು ಪ್ರಕರಣಗಳಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಚರಿತ್ರೆ ಎನು ಎಂಬುದನ್ನು ತೋರಿಸುತ್ತದೆ ಎಂದು ಬೆಮಲ್ ಕಾಂತರಾಜ್ ಹೇಳಿದರು.
ಕಾಂಗ್ರೆಸ್ ಸರ್ಕಾರದ 'ಕತ್ತಲೆಭಾಗ್ಯ ಗ್ಯಾರಂಟಿ ನಂಬರ್ ಆರು' ಘೋಷಣೆ ಮಾಡಿದ ಎಚ್.ಡಿ. ಕುಮಾರಸ್ವಾಮಿ!
ಎಚ್ಚರಿಕೆ: ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರಿಗೆ ವಯಸ್ಸಾಗಿದೆ. ಅರುಳು ಮರಳು ಪ್ರಾರಂಭವಾಗಿದೆ. ಮನಸ್ಸಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಇವುಗಳಿಗೆ ಲಗಾಮು ಹಾಕದಿದ್ದಲ್ಲಿ ಸೂಕ್ತ ಉತ್ತರವನ್ನು ಸಾರ್ವಜನಿಕವಾಗಿ ಕೊಡಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡೇನಹಳ್ಳಿ ಪ್ರಸನ್ನಕುಮಾರ್ ಮತ್ತು ಕೋಳಾಲ ನಾಗರಾಜ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಂಜುಂಡಪ್ಪ, ಕೆ.ಹೆಚ್.ಹನುಮಂತಯ್ಯ, ಲಕ್ಷ್ಮೀದೇವಮ್ಮ, ಹುಲಿಕಲ್ ಜಗದೀಶ್, ದಂಡಿನಶಿವರ ಕುಮಾರ್, ಗುರುದತ್, ಗುಡ್ಡೇನಹಳ್ಳಿ ಗವಿರಂಗಪ್ಪ, ಮೂರ್ತಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.