ಆಗ ಬಿಜೆಪಿಗೆ, ಈಗ ಕೈಗೆ JDS ಶಾಕ್‌ : ಕಾಂಗ್ರೆಸ್ ನಾಯಕರ ಬೆವರಿಳಿಸಿದ ದಳಪತಿ

ರಾಜ್ಯದಲ್ಲಿ ಉಪ ಚುನಾವಣೆ ಕಣ ರಂಗೇರುತ್ತಿದ್ದು ಇದರ ಬೆನ್ನಲ್ಲೇ ಪಕ್ಷಗಳಲ್ಲಿ ಸಾಕಷ್ಟು ಪ್ರಚಾರ ತಯಾರಿಯೂ ನಡೆಯುತ್ತಿದೆ.  ಅಂದು ಬಿಜೆಪಿ ನಿದ್ದೆಗೆಡಿಸಿದ್ದ ದಳದ ಮುಖಂಡರು ಇದೀಗ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಕಾಂಗ್ರೆಸ್ ಮತಗಳು ಜೆಡಿಎಸ್‌ ಜೊತೆಗೆ ಹಂಚಿಹೋಗುವ  ಭಯದಲ್ಲಿ ಕೈ ನಾಯಕರಿದ್ದಾರೆ. 

Congress Votes Divided With JDS in Basavakalyan Bypoll snr

ಬೀದರ್ (ಏ.10): 2018ರ ಚುನಾವಣೆಯಲ್ಲಿ ಮರಾಠಾ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಸೋಲಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೆಡಿಎಸ್‌, ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ಗೆ ಬೆವರಿಳಿಸಿದೆ. 

ಬಹುಸಂಖ್ಯಾತ ಲಿಂಗಾಯತ ಮತಗಳು ಬಿಜೆಪಿ ಕಡೆಗಿದ್ದಂತೆ ಕಾಣುತ್ತಿದ್ದು, ಕಾಂಗ್ರೆಸ್‌ ಗೆಲುವಿಗೆ ಮರಾಠ ಮತ್ತು ಮುಸ್ಲಿಂ ಮತಗಳೇ ನಿರ್ಣಾಯಕ ಎನ್ನುವ ವಾತಾವರಣ ಇದೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿಯೊಬ್ಬರು ಕಣಕ್ಕಿಳಿದಿರುವುದು ಮತ್ತು ಸ್ಥಳೀಯವಾಗಿ ನಗರಸಭೆಯಲ್ಲೂ ಸದಸ್ಯರನ್ನು ಹೊಂದಿರುವ ಎಂಐಎಂ ಕೂಡ ಅಭ್ಯರ್ಥಿಯನ್ನು ಹಾಕಿರುವುದು ಕಾಂಗ್ರೆಸ್‌ ನಿದ್ದೆಗೆಡಿಸಿದೆ.

'2023ಕ್ಕೆ 2 ಪಕ್ಷಗಳ ರಾಜಕೀಯ ನಾಟಕಕ್ಕೆ ತೆರೆ : ಜೆಡಿಎಸ್‌ಗೆ ಅಧಿಕಾರ'

 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ. ನಾರಾಯಣರಾವ್‌ 61,425 ಮತಗಳನ್ನು ಪಡೆದು ಜಯ ಸಾಧಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾ 44,153 ಮತ ಪಡೆದಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮರಾಠಾ ಮುಖಂಡ ಪಿ.ಜಿ.ಆರ್‌. ಸಿಂಧ್ಯ 31,414 ಮತಗಳಿಸಿದ್ದರು. ಇದೀಗ ಲಿಂಗಾಯತ, ಮರಾಠಾ ಹಾಗೂ ಮುಸ್ಲಿಂ ಮತಗಳ ವಿಭಜನೆ ಸೋಲು-ಗೆಲುವಿಗೆ ನಿರ್ಣಾಯಕ ಆಗಲಿದೆ. ಸಿಂಧ್ಯ ಅವರು ಈಗ ಕಾಂಗ್ರೆಸ್‌ಗೆ ಸೇರಿದ್ದಾರೆ. ಅವರಿಂದ ಪಕ್ಷಕ್ಕೆ ನೆರವಾಗಲಿದೆಯೇ ಎಂಬುದು ಕುತೂಹಲಕರವಾಗಿದೆ.

Latest Videos
Follow Us:
Download App:
  • android
  • ios