ಕೃಷ್ಣರಾಜ-ಎಂಕೆಎಸ್, ಚಾಮರಾಜ- ಹರೀಶ್‌ಗೌಡ, ಚಾಮುಂಡೇಶ್ವರಿ ಸಿದ್ದೇಗೌಡರಿಗೆ ಕೈ ಟಿಕೆಟ್?
ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಚಾಮರಾಜದಲ್ಲಿ ಮುಖಂಡ ಕೆ. ಹರೀಶ್‌ಗೌಡ ಹಾಗೂ ಚಾಮುಂಡೇಶ್ವರಿಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದೆ ಎಂದು ಗೊತ್ತಾಗಿದೆ.
ಮೈಸೂರು : ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಚಾಮರಾಜದಲ್ಲಿ ಮುಖಂಡ ಕೆ. ಹರೀಶ್‌ಗೌಡ ಹಾಗೂ ಚಾಮುಂಡೇಶ್ವರಿಯಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದೆ ಎಂದು ಗೊತ್ತಾಗಿದೆ.
ಕೃಷ್ಣರಾಜದಲ್ಲಿ ಸೋಮಶೇಖರ್ ಜೊತೆಗೆ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್. ಮೋಹನಕುಮಾರ್ ಪುತ್ರ ಎಂ.ಎನ್. ನವೀನ್‌ಕುಮಾರ್, ಮುಖಂಡ ಗುರುಪಾದಸ್ವಾಮಿ ಮತ್ತಿತರರು ಟಿಕೆಟ್ ಕೇಳಿದ್ದರು.
ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಟಿಕೆಟ್ ಆಕಾಂಕ್ಷಿಯಾಗಿದ್ದರು. ಚಾಮುಂಡೇಶ್ವರಿಯಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಕೆ. ಮರೀಗೌಡ, ಕೂರ್ಗಳ್ಳಿ ಮಹದೇವ್, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಎಸ್. ಅರುಣ್‌ಕುಮಾರ್, ಬೀರಿಹುಂಡಿ ಬಸವಣ್ಣ, ಎಸ್. ಮಾದೇಗೌಡ, ಮುಖಂಡ ಮೆಲ್ಲಹಳ್ಳಿ ಮಹದೇವಸ್ವಾಮಿ, ಎಚ್.ಸಿ. ಕೃಷ್ಣಕುಮಾರ್ ಸಾಗರ್, ಜೆ.ಜೆ. ಆನಂದ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮತ್ತಿತರರು ಟಿಕೆಟ್ ಕೇಳಿದ್ದರು. ಅಂತಿಮವಾಗಿ ಜೆಡಿಎಸ್‌ನಿಂದ ಬಂದಿರುವ ಐವರ ಪೈಕಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ.
ಎಚ್‌ಡಿ ಕೋಟೆ - ನಂಜನಗೂಡಿನಲ್ಲಿ ಕೈ ಗೆಲುವು ನಿಶ್ಚಿತ
ಸರಗೂರು : ಎಚ್.ಡಿ. ಕೋಟೆ ಹಾಗೂ ನಂಜನಗೂಡಿನಲ್ಲಿಯೂ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ…ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಕಾರ್ಯಕರ್ತರನ್ನು ಕುರಿತು ಅವರು ಮಾತನಾಡಿದರು.
ಅರ್. ಧ್ರುವನಾರಾಯಣ… ಅವರು ಇಲ್ಲದೆ ಈ ದಿನ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಭಾವುಕರಾದರು. ಆರ್. ಧ್ರುವನಾರಾಯಣ… ಅವರನ್ನು ಕಳೆದುಕೊಂಡು ರಾಜಕೀಯವಾಗಿ ನನಗೆ ಹಾಗೂ ರಾಜ್ಯದ ಹಲವು ನಾಯಕರಿಗೆ ತುಂಬಲಾರದ ನಷ್ಟವಾಗಿದೆ. ಅವರು ಎಚ್.ಡಿ. ಕೋಟೆ ಮತ್ತು ಜನತೆ ಬಗ್ಗೆ ಅಪಾರವಾದ ಗೌರವವಿತ್ತು. ತಾಲೂಕಿಗೆ ಮೊದಲ ಆಧ್ಯತೆ ನೀಡುತ್ತಿದ್ದರು. ಅನಿಲ್… ಚಿಕ್ಕಮಾದು ಅವರು ಮತ್ತೊಮ್ಮೆ ಶಾಸಕರಾಗಬೇಕೆಂಬುದು ಮಹದಾಸೆಯಾಗಿತ್ತು. ಇಂದು ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸಬೇಕಾಗಿದೆ ಎಂದರು.
ಸರಗೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆದಿರುವುದು ಸಂತಸ ತಂದಿದೆ. ಇದರಿಂದ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಲು ಮತ್ತು ಪಕ್ಷ ಸಂಘಟನೆಗೆ ತುಂಬ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಶಾಸಕ ಅನಿಲ… ಚಿಕ್ಕಮಾದು ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಇಂದು ನನ್ನ ರಾಜಕೀಯ ಗುರುಗಳಾದ ತಂದೆ ಸಮಾನರಾದ ಆರ್. ಧ್ರುವನಾರಾಯಣ… ಅವರನ್ನು ಕಳೆದುಕೊಂಡು ಇಡಿ ಕ್ಷೇತ್ರ ತಬ್ಬಲಿಯಾಗಿದೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಅವರ ಕನಸುಗಳನ್ನು ನನಸು ಮಾಡವ ಮೂಲಕ ತಾಲೂಕಿನ ಅಭಿವೃದ್ಧಿಗೆ ಮುಂದಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ. ಸುಂದರದಾಸ್, ಪುರಸಭೆ ಮಾಜಿ ಅಧ್ಯಕ್ಷ ಎಸ್.ಬಿ. ಸತೀಶ್‌ಕುಮಾರ್, ಏಜಾಜ… ಪಾಷ, ಜಿಪಂ ಮಾಜಿ ಸದಸ್ಯರಾದ ರವಿ, ಕೆಪಿಸಿಸಿ ಸದಸ್ಯರಾದ ಎಸ್.ಆರ್. ಜಯಮಂಗಳ. ಮಾದಪ್ಪ. ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ… ಪಾಷ, ಸರಗೂರು ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು. ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು ಇದ್ದರು.
ಇಂದು ಕೈ ಪಟ್ಟಿ ಬಿಡುಗಡೆ
ನವದೆಹಲಿ/ಬೆಂಗಳೂರು (ಏ.06): ಕಾಂಗ್ರೆಸ್ ಪಾಲಿಗೆ ತಲೆನೋವಾಗಿರುವ ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರು 40ರಿಂದ 45 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಬಿಡುಗಡೆಯಾಗಲಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಅಖೈರುಗೊಳಿಸಲು ಬುಧವಾರ ಇಡೀ ದಿನ ನಡೆದ ಕಸರತ್ತಿನ ನಂತರ ಸುಮಾರು 40ರಿಂದ 45 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಲಾಯಿತು. ಈ ಅಖೈರುಗೊಳಿಸಿದ ಅಂತಿಮ ಪಟ್ಟಿಯನ್ನು ತಡರಾತ್ರಿಯೇ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಲಾಯಿತು. ಅಂತಿಮವಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಿಬಿಡುಗಡೆ ಮಾಡಲು ನಾಯಕರು ತೀರ್ಮಾನಿಸಿದರು ಎಂದು ಮೂಲಗಳು ಹೇಳಿವೆ.
ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರವೇ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ಖಡಕ್ ಸೂಚನೆ ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿದೆ.
ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ