Asianet Suvarna News Asianet Suvarna News

ಬೆಳೆ ನಷ್ಟದ ಅನುದಾನ ತರಲು ಎಚ್.ಡಿ. ಕುಮಾರಸ್ವಾಮಿ ಶ್ರಮಿಸಲಿ : ಕಾಂಗ್ರೆಸ್ ವಕ್ತಾರ ಎಸ್. ರಾಜೇಶ್

:  ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಕುರಿತು ಈಗ ಹೆಚ್ಚಿನ ಕಾಳಜಿ ತೋರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅದರ ಬದಲು ಜಿಲ್ಲೆಯ ಬೆಳೆನಷ್ಟದ ಕುರಿತು ಕೇಂದ್ರದಿಂದ ಅನುದಾನ ತರಲು ಶ್ರಮಿಸಲಿ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್. ರಾಜೇಶ್ ತಾಕೀತು ಮಾಡಿದರು.

  Congress spokesperson S. Rajesh Slams HD Kumaraswamy snr
Author
First Published Feb 1, 2024, 11:27 AM IST

 ಮೈಸೂರು :  ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಕುರಿತು ಈಗ ಹೆಚ್ಚಿನ ಕಾಳಜಿ ತೋರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅದರ ಬದಲು ಜಿಲ್ಲೆಯ ಬೆಳೆನಷ್ಟದ ಕುರಿತು ಕೇಂದ್ರದಿಂದ ಅನುದಾನ ತರಲು ಶ್ರಮಿಸಲಿ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್. ರಾಜೇಶ್ ತಾಕೀತು ಮಾಡಿದರು.

ರಾಜ್ಯ ಸರ್ಕಾರಕ್ಕೆ ಜಿ.ಎಸ್.ಟಿ ಕುರಿತು ತಕ್ಕಷ್ಟು ಪ್ರಮಾಣದಲ್ಲಿ ಹಣ ಬಂದಿಲ್ಲ. ಈ ನಿಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಹೋರಾಟ ನಡೆಸಲಿ. ಚಿಕ್ಕಮಗಳೂರು, ಬಾಬಾ ಬುಡನ್ ಗಿರಿಯಂತೆ ಮಂಡ್ಯವನ್ನೂ ಪರಿವರ್ತಿಸಲು ಎಚ್.ಡಿ. ಕುಮಾರಸ್ವಾಮಿ ಅವರು ಸಿ.ಟಿ. ರವಿ ಅವರೊಡನೆ ಕೈಜೋಡಿಸುತ್ತಿರುವುದು ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಜೊತೆಗೆ, ಮಂಡ್ಯದಲ್ಲಿ ಈ ಹಿಂದೆ ಇದ್ದ ಹಳೇ ಕಾಂಗ್ರೆಸ್ ನಂತೆ ಈಗಿನ ಕಾಂಗ್ರೆಸ್ ಇಲ್ಲ ಎಂಬ ಟೀಕೆ ಖಂಡನಾರ್ಹ. ಏಕೆಂದರೆ ಆ ಜಿಲ್ಲೆಯಲ್ಲಿದ್ದ ಜೆಡಿಎಸ್ ಮುಖಂಡರಿಗೆ ಸಮನಾದವರು ಈಗ ಪಕ್ಷದಲ್ಲಿ ಇಲ್ಲ. ಜೆಡಿಎಸ್ ಈಗ ಕೇವಲ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದೆ ಎಂದು ಅವರು ಟೀಕಿಸಿದರು.

ಬಳಿಕ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಜಾತಿ ಸಂಘರ್ಷ ಉಂಟು ಮಾಡಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರವಿ, ಎಸ್.ಎ. ರಹೀಂ, ಸಿದ್ದರಾಜು ಇದ್ದರು.

Follow Us:
Download App:
  • android
  • ios