ಆನೇಕಲ್‌(ಜ.16): ರಾಜ್ಯದಲ್ಲಿ ನಡೆಯುತ್ತಿರುವ ಕಮಲದಾಟವನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನನ್ನ ನಾಲ್ಕು ದಶಕಗಳ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಇದು ಬಾಳಿಕೆ ಬರುವ ಸರ್ಕಾರವಲ್ಲ ಎಂದು ಮಾಜಿ ಸಚಿವ ಬಿಟಿಎಂ ಶಾಸಕರಾದ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

ಅವರು ಆನೇಕಲ್‌ ಪ್ರವಾಸದಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಅತೃಪ್ತರು, ಸಚಿವ ಸ್ಥಾನ ವಂಚಿತರು, ಸ್ವಯಂ ಘೋಷಿತ ನಿಷ್ಠಾವಂತರು, ಆಮದು, ರಫ್ತು ನಾಯಕರು ಸೇರಿದಂತೆ ಹಲವು ಬ್ರಾಂಡ್‌ಗಳ ಜೇಮ್ಸ್‌ ಬಾಂಡ್‌ಗಳಿದ್ದಾರೆ. ಅವರಲ್ಲಿ ಸರ್ಕಾರಗಳನ್ನು ಉಳಿಸುವ ಹಾಗೂ ಉರುಳಿಸುವ ಎಕ್ಸ್‌ಪರ್ಟ್‌ಗಳು ಇದ್ದಾರೆ. ಕೋಟಿ ಕೋಟಿ ರುಪಾಯಿ ಸಾಲ ಕೊಡುವ, ತೆಗೆದುಕೊಂಡು ಡೀಲ್‌ ಕುದುರಿಸುವ ರಿಯಲ್‌ ಎಸ್ಟೇಟ್‌ ಉದ್ಯಮಿ ಶಾಸಕರಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರು; ಕಾಮಗಾರಿ  ವೇಳೆ ಶಿವ-ಪಾರ್ವತಿ ಪ್ರತ್ಯಕ್ಷ!

ಇವರ ನಡುನ ವಾಕ್ಸಮರದ ಝರಿಗಳು, ಒಬ್ಬರನ್ನೊಬ್ಬರು ಹೀಯಾಳಿಸಿ ನಿಂದಿಸುವ ಪರಿಭಾಷೆಯೂ ಮತದಾರ ಪ್ರಭುಗಳಿಗೆ ರಂಜನೀಯವಾಗಿದೆ. ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಸರ್ಜರಿ ಮಾಡುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ನಾವು ತಾಳ್ಮೆಯಿಂದ ಕಾಯುತ್ತೇವೆ. ಜನತಾ ನ್ಯಾಯಾಲಯವೇ ನಮ್ಮ ದೇಗುಲ. ಜನರ ನಡುವೆ ದ್ವೇಷ ಬಿತ್ತುವ, ರೈತರಿಗೆ ನೋವು ಕೊಡುವ, ಜನಸಾಮಾನ್ಯರ ಜೇಬಿಗೆ ನೇರವಾಗಿ ಕತ್ತರಿ ಹಾಕುವ ಕೆಲಸ ಮಾಡಲ್ಲ ಎಂದರು.