ಬಿಜೆಪಿಯಿಂದ ನನಗೂ ಆಫರ್‌ ಬಂದಿತ್ತು, 50 ಕೋಟಿ, ಸಚಿವ ಸ್ಥಾನ ಆಮಿಷ ಒಡ್ಡಿದ್ದರು: ಕೈ ಶಾಸಕ

ಹಣಕ್ಕಾಗಿ ಸ್ಥಾನ ಮಾರಿಕೊಳ್ಳದೆ ಕಾಂಗ್ರೆಸ್‌ನಲ್ಲೇ ಶಾಸಕನಾಗಿ ಉಳಿದಿದ್ದೇನೆ| ಬಿಜೆಪಿ ಶಾಸಕರನ್ನು ಖರೀದಿಸುವ ಪ್ರವೃತ್ತಿಯನ್ನು ಹೊಸದಾಗಿ ಆರಂಭಿಸಿ, ಆಮಿಷಗಳಿಗೆ ಹೆಸರುವಾಸಿಯಾಗಿದೆ| ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ: ಡಿ.ಎಸ್‌.ಹೂಲಗೇರಿ| 

Congress MLA DH Hoolageri Talks Over BJP grg

ಮುದಗಲ್‌(ಮಾ.29): ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಾಗ ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸುವ ಪ್ರವೃತ್ತಿಯನ್ನು ಬಿಜೆಪಿ ದೊಡ್ಡ ಅಜೆಂಡಾ ಹಾಕಿಕೊಂಡಿತ್ತು. ಅದರ ಸುಳಿಯಲ್ಲಿ ನನಗೂ ಆಫರ್‌ ಇತ್ತು ಎಂದು ಲಿಂಗಸುಗೂರು ಶಾಸಕ ಡಿ.ಎಸ್‌.ಹೂಲಗೇರಿ ಆರೋಪಿಸಿದ್ದಾರೆ.

ಮಸ್ಕಿ ಉಪಚುನಾವಣೆಯ ಮಟ್ಟೂರ ಪಂಚಾಯ್ತಿ ವ್ಯಾಪ್ತಿಯ ಹಳ್ಳಿ-ಮಟ್ಟೂರ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿ, ಬಸನಗೌಡರಿಗೆ ಬಿಜೆಪಿ ಮೋಸ ಮಾಡಿದೆ. ಅವರನ್ನು ಪಕ್ಷಕ್ಕೆ ಸೇರಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ಅವರು ತಮಗೆ ದೂರಾದರೂ ಪಕ್ಕದ ಕ್ಷೇತ್ರ ಲಿಂಗಸುಗೂರ ಶಾಸಕನಾಗಿರುವುದರಿಂದ ತಮ್ಮ ಸಮಸ್ಯೆಗೆ ನಾನೂ ಸ್ಪಂದಿಸುತ್ತೇನೆ, ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಲು ಕೋರಿದ್ದಾರೆ.

ಮಸ್ಕಿ ಉಪಚುನಾವಣೆಯಲ್ಲಿ ಕೋಟ್ಯಧೀಶರ ಫೈಟ್‌..!

ಕಳೆದ ಬಾರಿ ಪ್ರತಾಪಗೌಡರಿಗೆ ಕಾಂಗ್ರೆಸ್‌ನಿಂದ ಗೆದ್ದರೂ ಅವರು ಹಣ, ಅಧಿಕಾರಕ್ಕಾಗಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ ಉಪಚುನಾವಣೆ ತರಲು ಕಾರಣೀಬೂತರಾಗಿದ್ದಾರೆ. ಅವರೇ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆ ಸಮಯದಲ್ಲಿ ನನಗೂ ಆಮಿಷ ನೀಡಿದ್ದರು. ನನ್ನ ಸಮುದಾಯದ ಸ್ವಾಮೀಜಿಗಳ ಸಲಹೆ ಮೇರೆಗೆ ಹಣಕ್ಕಾಗಿ ಸ್ಥಾನ ಮಾರಿಕೊಳ್ಳುವುದು ಸರಿಯಲ್ಲವೆಂದು ಕಾಂಗ್ರೆಸ್‌ನಲ್ಲೇ ಶಾಸಕನಾಗಿ ಉಳಿದಿದ್ದೇನೆ. ಬಿಜೆಪಿ ಶಾಸಕರನ್ನು ಖರೀದಿಸುವ ಪ್ರವೃತ್ತಿಯನ್ನು ಹೊಸದಾಗಿ ಆರಂಭಿಸಿ, ಆಮಿಷಗಳಿಗೆ ಹೆಸರುವಾಸಿಯಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಪಾಟೀಲ್‌, ಶರಣಪ್ಪ ಮೇಟಿ, ಚನ್ನವೀರಪ್ಪ, ಮಲ್ಲಪ್ಪ, ಪರಮಣ್ಣ, ಬಸವರಾಜ ಇದ್ದರು.

Latest Videos
Follow Us:
Download App:
  • android
  • ios