Asianet Suvarna News Asianet Suvarna News

ಮಸ್ಕಿ ಉಪಚುನಾವಣೆಯಲ್ಲಿ ಕೋಟ್ಯಧೀಶರ ಫೈಟ್‌..!

13 ವರ್ಷಗಳಲ್ಲಿ ಪ್ರತಾಪಗೌಡರ ಆಸ್ತಿ 4 ಕೋಟಿ ಹೆಚ್ಚಳ| ಮೂರು ವರ್ಷದಲ್ಲಿ ತುರ್ವಿಹಾಳರ ಆಸ್ತಿಯಲ್ಲಿ ಹೇಳಿಕೊಳ್ಳುವಷ್ಟು ಏರುಪೇರಾಗಿಲ್ಲ| ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ| 

Millionaires Fighting in Maski Byelection grg
Author
Bengaluru, First Published Mar 26, 2021, 3:51 PM IST

ರಾಮಕೃಷ್ಣ ದಾಸರಿ

ರಾಯಚೂರು(ಮಾ.26): ಮಸ್ಕಿ ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸಿರುವ ಬಿಜೆಪಿಯ ಪ್ರತಾಪಗೌಡ ಪಾಟೀಲ್‌ಮತ್ತು ಕಾಂಗ್ರೆಸ್‌ನ ಆರ್‌.ಬಸನಗೌಡ ತುರ್ವಿಹಾಳ ಕೋಟ್ಯಧೀಶರಾಗಿದ್ದಾರೆ.

ಬಿಎ ಪದವಿ ಪಡೆದಿರುವ ಪ್ರತಾಪಗೌಡ ಪಾಟೀಲ್‌ಸತತ ಮೂರು ಸಲ ಶಾಸಕರಾಗಿ ಹ್ಯಾಟ್ರಿಕ್‌ಬಾರಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇದೀಗ ನಾಲ್ಕನೇ ಬಾರಿ ಗೆಲುವಿನ ನಗೆ ಬೀರುವುದಕ್ಕಾಗಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ.

2008 ರಲ್ಲಿ ಮೊದಲ ಬಾರಿಗೆ ಮಸ್ಕಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್‌ಕೇವಲ 94 ಲಕ್ಷ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. 13 ವರ್ಷಗಳಲ್ಲಿ ಅವರ ಆಸ್ತಿ ನಾಲ್ಕು ಕೋಟಿ ಹೆಚ್ಚಾಗಿದ್ದು, ಇದೀಗ ಅವರು 5.92 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ. 2008ರ ಬಳಿಕ 2013 ಮತ್ತು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಗೌಡ ಪಾಟೀಲ್‌ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದು, ಇದೀಗ ಆ ಸ್ಥನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

2013 ರಲ್ಲಿ ನಡೆದಂತ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್‌5 ಕೋಟಿ ಆಸ್ತಿ ಹೊಂದಿದ್ದರು. ಆದರೆ ಕಳೆದ 2018 ರಲ್ಲಿ ಜರುಗಿದ ಚುನಾವಣೆಯಲ್ಲಿ 4.92 ಕೋಟಿ ಆಸ್ತಿ ಮತ್ತು 39 ಲಕ್ಷ ಸಾಲ ಹೊಂದಿರುವುದಾಗಿ ತೋರಿಸಿದ್ದರು. ಇದೀಗ ಒಟ್ಟು 4.52 ಕೋಟಿ ಆಸ್ತಿ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 33.58 ಲಕ್ಷ ಸಾಲ ಪಡೆದುಕೊಂಡಿರುವುದಾಗಿ ಘೋಷಿಸಿದ್ದಾರೆ.

ರೈತರಿಗೆ ಸುಳ್ಳು ಹೇಳಿ ರಾಜಕೀಯ ಮಾಡಲಾರೆ: ಪ್ರತಾಪಗೌಡ ಪಾಟೀಲ್‌

ಬಸನಗೌಡರ ಆಸ್ತಿ:

ಕಳೆದ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಆರ್‌.ಬಸನಗೌಡ ತುರ್ವಿಹಾಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಳೆದ ಮೂರು ವರ್ಷದಲ್ಲಿ ಇವರ ಆಸ್ತಿಯಲ್ಲಿ ಹೇಳಿಕೊಳ್ಳುವಷ್ಟುಏರುಪೇರಾಗಿಲ್ಲ. 2018ರಲ್ಲಿ ಸಲ್ಲಿಸಿದ್ದ ಅಫಿಡಿವೇಟ್‌ನಲ್ಲಿ 1.55 ಕೋಟಿ ಚರ ಮತ್ತು ಸ್ಥಿರಾಸ್ತಿ ಹಾಗೂ 5 ಲಕ್ಷ ಸಾಲ ಹೊಂದಿದ್ದ ಬಸನಗೌಡ, ಇದೀಗ ಒಟ್ಟು 1.45 ಸ್ಥಿರಾಸ್ತಿ ಹೊಂದಿದ್ದಾರೆ.

ಅದರಲ್ಲಿ ಬಸನಗೌಡ ಎರಡು ಲಕ್ಷ ನಗದು, ಚಿನ್ನಾಭರಣ, ವಾಹನ ಸೇರಿ ಒಟ್ಟು 47,57,634 ರು.ಮೌಲ್ಯದ ಚರಾಸ್ತಿ ಹಾಗೂ ವಿವಿಧ ಪ್ರದೇಶಗಳಲ್ಲಿ ನಿವೇಶ, ಕೃಷಿ ಭೂಮಿ ಇತರ ಕಟ್ಟಡಗಳ ಸೇರಿ ಸ್ವಯಾರ್ಜಿತ, ಪಿತ್ರಾರ್ಜಿತ 1 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಅವರ ಪತ್ನಿ ದಿ.ಪಾರ್ವತಮ್ಮ ಅವರ ಹೆಸರಿನಲ್ಲಿ ಸಹ 15 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ. ಬಸನಗೌಡ ಹಾಗೂ ಪುತ್ರ ಸತೀಶ ಹೆಸರಿನ ಮೇಲೆ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 22,99,020 ರು. ಸಾಲ ಹೊಂದಿದ್ದಾರೆ.

ಒಟ್ಟಿನಲ್ಲಿ ದಿನೇ ದಿನೆ ಕಾವು ಪಡೆಯುತ್ತಿರುವ ಮಸ್ಕಿ ಉಪಕದನ ಕಣಕ್ಕೆ ಜಿಗಿದಿರುವ ಬಿಜೆಪಿ-ಕಾಂಗ್ರೆಸ್‌ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಆಸ್ತಿಯು ಕೋಟ್ಯಾಧೀಶರಾಗಿರುವುದನ್ನು ತೋರಿಸುತ್ತಿದೆ. ಬೈ ಎಲೆಕ್ಷನ್‌ಕೋಟ್ಯಧೀಶರ ನಡುವೆ ಕಾದಾಟ ಜೋರಾಗಿ ಸಾಗುವ ವಾತಾವರಣ ಸೃಷ್ಟಿಸುತ್ತಿದೆ.
 

Follow Us:
Download App:
  • android
  • ios