ಬಿಜೆಪಿ ಸರ್ಕಾರ ರಚನೆ ಸಂದ​ರ್ಭ​ದಲ್ಲಿ ನನಗೂ ಆ ಪಕ್ಷ​ದಿಂದ ಕರೆ ಬಂದಿತ್ತು.  ಹಣ, ಸಮಾಜ ಕಲ್ಯಾಣ ಇಲಾ​ಖೆ ಸಚಿವ ಸ್ಥಾನದ ಆಮಿ​ಷ​ವನ್ನೂ ಬಿಜೆಪಿ ಮುಖಂಡರು ಒಡ್ಡಿ​ದ್ದರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಗರಿಬೊಮ್ಮನಹಳ್ಳಿ ಶಾಸಕ 

ಹಗರಿಬೊಮ್ಮನಹಳ್ಳಿ(ಆ.16): ಬಿಜೆಪಿ ಸರ್ಕಾರ ರಚನೆ ಸಂದ​ರ್ಭ​ದಲ್ಲಿ ನನಗೂ ಆ ಪಕ್ಷ​ದಿಂದ ಕರೆ ಬಂದಿತ್ತು. ಹಣ, ಸಮಾಜ ಕಲ್ಯಾಣ ಇಲಾ​ಖೆ ಸಚಿವ ಸ್ಥಾನದ ಆಮಿ​ಷ​ವನ್ನೂ ಬಿಜೆಪಿ ಮುಖಂಡರು ಒಡ್ಡಿ​ದ್ದರು ಎಂದು ಶಾಸಕ ಎಸ್‌. ಭೀಮಾ​ನಾಯ್ಕ್ ಹೇಳಿ​ದ್ದಾ​ರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಚಿಂತ್ರಪಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕನಕ ಭವನದಲ್ಲಿ ತಾಲೂಕು ಕನಕ ಯುವಸೇನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಗೋಳ್ಳಿ ರಾಯಣ್ಣ 225ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಖಾತೆ ಕ್ಯಾತೆ ಮಧ್ಯೆ ಮೊದಲ ಸಲ ಸಚಿವರಾದವರಿಗೆ ಪ್ರಮುಖ ಖಾತೆ ಹುಡುಕಿಕೊಂಡು ಬಂದವು

ಬಿಜೆಪಿ ಮುಖಂಡರು ನನ​ಗಾಗಿ ವಾಹನ ಕೂಡ ಕಳಿಸಿದ್ದರು. ಆದರೆ, ನನ್ನ ಪತ್ನಿ ಗೀತಾಬಾಯಿಯೊಂದಿಗೆ ಚರ್ಚಿಸಿ, ಜೆಡಿಎಸ್‌ನಲ್ಲಿರುವಾಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡಿರುವುದು ಮತ್ತು ಮರು ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಟಿಕೆಟ್‌ ನೀಡಿ ಸಹಕರಿಸಿದ್ದರು. 

ಇದೆ​ಲ್ಲ​ವನ್ನು ಸ್ಮರಿ​ಸಿ​​ಕೊಂಡು ಯಾವುದೇ ಆಮಿಷಗಳಿಗೆ ಒಳಗಾಗುವುದು ಬೇಡ ಎಂದು ತೀರ್ಮಾನಿಸಿದೆ. ಸಿದ್ದರಾಮಯ್ಯನವರಿಗಾಗಿಯೇ ಪ​ಕ್ಷ​ದಲ್ಲಿ ಉಳಿ​ದು​ಕೊಂಡೆ ಎಂದು ಸ್ಪಷ್ಟಪಡಿಸಿದರು.