ಅಧಿಕಾರ ಹಿಡಿಯಲು ಕಾಂಗ್ರೆಸ್ ಪ್ಲಾನ್ : ಬಿಎಸ್‌ಪಿ, ಪಕ್ಷೇತರರ ಸಪೋರ್ಟ್
ಕಾಂಗ್ರೆಸ್ ಇದೀಗ ಅಧಿಕಾರ ಹಿಡಿಯಲು ಶತ ಪ್ರಯತ್ನ ಮಾಡುತ್ತಿದ್ದು, ಬಿ ಎಸ್ ಪಿ, ಪಕ್ಷೇತರರ ಸಪೋರ್ಟ್ ಪಡೆಯಲು ಮುಂದಾಗಿದೆ.
ವರದಿ : ಎನ್. ನಾಗೇಂದ್ರಸ್ವಾಮಿ
ಕೊಳ್ಳೇಗಾಲ (ಅ.27): ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ 29ರಂದು ಚುನಾವಣೆ ನಡೆಯಲಿದ್ದು, 31 ಸದಸ್ಯರ ಬಲದ ನಗರಸಭೆಯಲ್ಲಿ ಯಾವುದೆ ಪಕ್ಷಕ್ಕೂ ಬಹುಮತವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಾರಣ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ, ಬಿಎಸ್ಪಿ ಸದಸ್ಯರ ಹಾಗೂ ಕಾಂಗ್ರೆಸ್, ಪಕ್ಷೇತರು ಹಾಗೂ ಬಿಎಸ್ಪಿ ಸಹಕಾರದೊಂದಿಗೆ ಅಧಿಕಾರ ಹಿಡಿಯುವುದು ಅನಿವಾರ್ಯವಾಗಿದೆ.
ಏತನ್ಮಧ್ಯೆ ಶಾಸಕ ಎನ್.ಮಹೇಶ್ ಅವರ ಸಹಕಾರದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾಗೂ ಕಾಂಗ್ರೆಸ್ ದೂರವಿಡಲೇ ಬೇಕೆಂಬ ಅಂತಿಮ ತೀರ್ಮಾನಕ್ಕೆ ಬಿಜೆಪಿ ಬಂದಿದ್ದು ಈ ಕುರಿತು ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ನಡೆಸುತ್ತಿದೆ.
'ಹಿಂದಿನ ಸರ್ಕಾರ ಬೀಳಿಸೋದ್ರಲ್ಲಿ ನಾನು ವಿಲನ್ ಅಲ್ಲ, ನನ್ನದೇನಿದ್ರೂ ಹೀರೋ ಪಾತ್ರ' ...
ಈಗಾಗಲೇ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿರುವ ಕಾರಣ ಉಪಾಧ್ಯಕ್ಷ ಸ್ಥಾನ ಸರಾಗವಾಗಿ ಬಿಜೆಪಿಗೆ ಒಲಿದು ಬರಲಿದೆ. ಆದರೆ ಶಾಸಕರ ಬೆಂಬಲಿಗರಲ್ಲಿ ಯಾರು ಅಧ್ಯಕ್ಷರಾಗಲಿದ್ದಾರೆ. ಇವರೆಲ್ಲರೂ ಒಗ್ಗೂಡಿ ಯಾವ ರೀತಿಯ ತಂತ್ರಗಾರಿಕೆಯಿಂದ ಅಧಿಕಾರ ಹಿಡಿಯಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
ಶಾಸಕ ಮಹೇಶ್ ಹಾಗೂ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅಂದುಕೊಂಡಂತೆ ಆದರೆ ಶಿರೀಸಾ ಅಧ್ಯಕ್ಷೆ, ಕವಿತಾ ಉಪಾಧ್ಯಕ್ಷೆ ಹಾಗೂ ಶಂಕನಪುರ ಪ್ರಕಾಶ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಎಸ್ಪಿಯಲ್ಲೂ ಗೊಂದಲ:
ಶಾಸಕ ಮಹೇಶ್ ಅವರ ಜೊತೆ ಗುರುತಿಸಿಕೊಂಡು ಗೆದ್ದ 9 ಸದಸ್ಯರ ಪೈಕಿ 7ಮಂದಿ ಮಾತ್ರ ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ. ಇನ್ನುಳಿದ ಇಬ್ಬರು ಬಿಎಸ್ಪಿ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ 7, ಬಿಎಸ್ಪಿಯ 7, ಶಾಸಕರು ಹಾಗೂ ಸಂಸದರ ಮತ ಸೇರಿದರೆ ಸಂಖ್ಯಾ ಬಲ 16ಕ್ಕೆ ಏರಿಕೆಯಾಗಲಿದೆ.
RR ನಗರ ಉಪಚುನಾವಣೆ: ನನ್ನ ವಿರುದ್ಧ ಅಪಪ್ರಚಾರ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ..
ಇನ್ನಿಬ್ಬರು ಬಿಎಸ್ಪಿ ಸದಸ್ಯರ ಜೊತೆಯೂ ಮಾತುಕತೆ ನಡೆಸಿ ಒಬ್ಬರನ್ನಾದರೂ ಸೆಳೆಯುವ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಜೊತೆಗೆ ಪಕ್ಷೇತರ ಸದಸ್ಯರಿಬ್ಬರು ಸಹಕಾರ ಪಡೆಯುವ ಕುರಿತೂ ಸಹ ಬಿಜೆಪಿ ಹಾಗೂ ಶಾಸಕರು ತಂತ್ರ ರೂಪಿಸಿದ್ದು ನಾಲ್ಕು ಮಂದಿ ಪಕ್ಷೇತರರ ಪೈಕಿ ಬಿಜೆಪಿ ಹಾಗೂ ಶಾಸಕರಿಗೆ ಬೆಂಬಲ ಸೂಚಿಸುವವರು ಯಾರು ಎಂಬ ಪ್ರಶ್ನೆ ಸಹಾ ಇಲ್ಲಿ ಉದ್ಬವಿಸಿದೆ.
ಕೈ ಪಾಳೆಯಕ್ಕೂ ಪ್ರತಿಷ್ಠೆ ಕಣ:
ಕಾಂಗ್ರೆಸ್‌ನಿಂದ ಈಗಾಗಲೇ 11 ಮಂದಿ ಸದಸ್ಯರು ಆಯ್ಕೆಯಾಗಿದ್ದು ಅಧಿಕಾರಕ್ಕೆರಲು ನಾಲ್ಕು ಮಂದಿ ಪಕ್ಷೇತರು, ಬಿಎಸ್ಪಿಯ ಇಬ್ಬರು ಪಕ್ಷೇತರ ಜೊತೆ ಮಾತುಕತೆ ನಡೆಸಿದ್ದಾರೆ . ಈ ಪೈಕಿ ಮೂರು ಮಂದಿ ಪಕ್ಷೇತರರು ಕೈಹಿಡಿಯುವ ಭರವಸೆ ದೊರೆತಿದೆ ಎನ್ನಲಾಗಿದ್ದು ಈ ಪೈಕಿ ಪಕ್ಷೇತರವಾಗಿ ಜಯಿಸಿರುವ ಸತ್ಯನಾರಾಯಣ ಗುಪ್ತ ಎಂಬುವವರು ಮಾತ್ರ ತಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕಾ ಅಥವಾ ಶಾಸಕರು ಹಾಗೂ ಬಿಜೆಪಿ ಬೆಂಬಲಿತರಿಗಾ? ಎಂಬುದು ಮಾತ್ರ ಇನ್ನು ದೃಡಪಟ್ಟಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆರುವುದು ಸತ್ಯನಾರಾಯಣ ಗುಪ್ತ ನಡೆಯ ಮೇಲೆ ನಿರ್ಧಾರವಾಗಲಿದೆ ಎಂದು ನಗರಸಭೆ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಂಸದ ಆರ್ ಧ್ರುವನಾರಾಯಣ್, ಮಾಜಿ ಶಾಸಕ ಎಸ್ ಜಯಣ್ಣ. ಎಸ್ ಬಾಲರಾಜು, ಎ ಆರ್ ಕೃಷ್ಣಮೂರ್ತಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರುಗಳಿಗೆ ನಗರಸಭೆ ಅಧಿಕಾರ ಹಿಡಿಯುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಶತಾಯ ಗತಾಯ ಅಧಿಕಾರಕ್ಕಾಗಿ ಪ್ರತಿ ತಂತ್ರ ಸಹಾ ರೂಪಿಸುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.