ಚಿತ್ರದುರ್ಗ [ಜ.20] : ದೇಶದಲ್ಲಿ ಭಸ್ಮಾಸುರರು ವಕ್ಕರಿಸಿದ್ದಾರೆ. ಮೋದಿ, ಶಾ ಇಬ್ಬರೂ ಆಧುನಿಕ ಭಸ್ಮಾಸುರರು ಎಂದು ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಟೀಕ ಪ್ರಹಾರ ನಡೆಸಿದ್ದಾರೆ. 

ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಉಗ್ರಪ್ಪ, ಇವರು ಕೊಟ್ಟ ಯಾವ ಭರವಸೆಗಳು ಈಡೇರಲಿಲ್ಲ. ಇವರಿಬ್ಬರಿಂದ ದೇಶದ ಆರ್ಥಿಕತೆಯೂ ಕೂಡ ತಳಮಟ್ಟಕ್ಕೆ ಹೋಗಿದೆ. ದೇಶದ ಯೋಧರಿಗೆ ನೀಡಿದ್ದ 1 ಕೋಟಿ ರು. ಅನುದನವನ್ನು ಕಡಿಮೆ ಮಾಡಿದ್ದಾರೆ. ಇದ್ಯಾವ ರೀತಿಯ ಆಡಳಿತ ಎಂದು  ಪ್ರಶ್ನೆ ಮಾಡಿದ್ದಾರೆ. 

ದೇಶದ  ಆರ್ಥಿಕತೆಯೂ ದಿವಾಳಿಯ ಅಂಚನ್ನು ತಲುಪಿದೆ. ದೇಶದ ಆರ್ಥಿಕತೆ ಸರಿಪಡಿಸದೇ ಹೋದರೆ ಬಿಜೆಪಿ ಮುಕ್ತ ಭಾರತ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನು ಯಾವ ದೇಶಲ್ಲಿಯೂ ಜಾರಿ ಧರ್ಮದ ಆಧಾರದಲ್ಲಿ ಪೌರತ್ವ ನೀಡಿಲ್ಲ. ಸಮಾಜವನ್ನು ಒಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದರು. 

ಮೋದಿ, ಷಾ ವಿರುದ್ದ ಕಿಡಿ ಕಾರಿದ ಉಗ್ರಪ್ಪ ವಿ.ಎಸ್ ಉಗ್ರಪ್ಪ, ಇವರಿಬ್ಬರಿಗೂ ದಪ್ಪ ಚರ್ಮ ಇದೆ. ಮೋದಿ ನಿಮಗೆ ಧಮ್, ತಾಕತ್ತು ಇದ್ರೆ ಇದೇ ವಿಷಯದ ಮೇಲೆ ಜನಾದೇಶಕ್ಕೆ ಹೋಗೋಣ. ನೀವೆನಾದ್ರು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಬಂದ್ರೆ ನಾನು ಕೊನೆ ಉಸಿರು ಇರೋವರೆಗೂ ಬಿಜೆಪಿ ಹೇಳಿದ ಹಾಗೆ ಕೇಳುತ್ತೇನೆ ಎಂದು ಉಗ್ರಪ್ಪ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ. 

ಗರ್ಭಿಣಿಯರಿಗೆ ಅವಾಚ್ಯ ನಿಂದನೆ : ಜಿಲ್ಲಾಧಿಕಾರಿ ಬೇಸರ...

ಇನ್ನು ಪಾಕಿಸ್ತಾನದ ಜೊತೆ ಸಂಬಂಧ ಇಟ್ಟುಕೊಂಡಿರುವುದು ಬಿಜೆಪಿ, ಕಾಂಗ್ರೆಸ್ ಅಲ್ಲ. ಪಾಕಿಸ್ತಾನದ ಪ್ರಧಾನಿಗೆ ಸೀರೆ ಕಳಿಸಿದ್ದು ಇದೇ ಮೋದಿ.ಬಿರಿಯಾನಿ ತಿನ್ನಲು ಲಾಹೋರ್ ಗೆ ಹೋಗಿದ್ದು ಇದೇ ಮೋದಿ ಎಂದರು. 

ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ...

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೋಡಿದರೆ ನನಗೆ ಅಯ್ಯೋ ಎನಿಸುತ್ತದೆ. ಬಹಳಷ್ಟು ಜನ ಅವರನ್ನು ರಾಜಾಹುಲಿ ಎನ್ನುತ್ತಿದ್ದರು. ಆದರೆ ಇಂದು ಅವರು ರಾಜಾ ಇಲಿ ಆಗಿದ್ದಾರೆ ಎಂದರು. 

ಇನ್ನು ಯಡಿಯೂರಪ್ಪ ಅವರನ್ನು ತೆಗೆಯಬೇಕು ಎನ್ನುವ ಯತ್ನ ಬಿಜೆಪಿಯಲ್ಲಿಯೇ ನಡೆಯುತ್ತಿದೆ. ನಿಮಗೆ ತಾಕತ್ ಇದ್ರೆ ಹೈ ಕಮಾಂಡ್ ವಿರುದ್ಧ ಸಿಡಿದೇಳಿ. ಇಲ್ಲವಾದಲ್ಲಿ ನೀವು ಇತಿಹಾಸದಲ್ಲಿ ನಿಷ್ಕ್ರೀಯ ಮುಖ್ಯಮಂತ್ರಿ ಆಗಲಿದ್ದೀರಿ ಎಂದು ಉಗ್ರಪ್ಪ ಯಡಿಯೂರಪ್ಪಗೆ ಎಚ್ಚರಿಸಿದರು.