ಸಂಸತ್ ಅಕ್ರಮ ಪ್ರವೇಶ ದೇಶವೇ ತಲೆ ತಗ್ಗಿಸುವಂತಾಗಿದೆ: ಉಗ್ರಪ್ಪ
ಸಂಸತ್ ಒಳಗೆ ಪ್ರವೇಶವಾಗಲು ನಾಲ್ಕು ಹಂತದ ತಪಾಸಣೆ ಇರುತ್ತದೆ. ಎಲ್ಲ ತಪಾಸಣೆಗಳನ್ನು ಭೇದಿಸಿಕೊಂಡು ಯುವಕರು ಒಳ ನುಗ್ಗಿದ್ದಾರೆ ಎಂದಾದರೆ ಬೇಹುಗಾರಿಕೆ ಇಲಾಖೆ ಏನು ಮಾಡುತ್ತಿತ್ತು. ದೇಶದಲ್ಲಿ ಎಲ್ಲೋ ನಡೆಯುವ ದಾಳಿಯ ಬಗ್ಗೆ ಮೊದಲೇ ಬೇಹುಗಾರಿಕೆ ಇಲಾಖೆಗೆ ಮಾಹಿತಿ ಇರುತ್ತದೆ. ಆದರೆ, ಸಂಸತ್ ನಲ್ಲಿ ನಡೆಯುವ ದಾಳಿಯ ಬಗ್ಗೆ ಯಾಕೆ ಮಾಹಿತಿ ಇರಲಿಲ್ಲ ಎಂದು ಪ್ರಶ್ನಿಸಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ
ಬಳ್ಳಾರಿ(ಡಿ.17): ಸಂಸತ್ ಅಕ್ರಮ ಪ್ರವೇಶ ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಈ ಪ್ರಕರಣದಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್ ಒಳಗೆ ಪ್ರವೇಶವಾಗಲು ನಾಲ್ಕು ಹಂತದ ತಪಾಸಣೆ ಇರುತ್ತದೆ. ಎಲ್ಲ ತಪಾಸಣೆಗಳನ್ನು ಭೇದಿಸಿಕೊಂಡು ಯುವಕರು ಒಳ ನುಗ್ಗಿದ್ದಾರೆ ಎಂದಾದರೆ ಬೇಹುಗಾರಿಕೆ ಇಲಾಖೆ ಏನು ಮಾಡುತ್ತಿತ್ತು. ದೇಶದಲ್ಲಿ ಎಲ್ಲೋ ನಡೆಯುವ ದಾಳಿಯ ಬಗ್ಗೆ ಮೊದಲೇ ಬೇಹುಗಾರಿಕೆ ಇಲಾಖೆಗೆ ಮಾಹಿತಿ ಇರುತ್ತದೆ. ಆದರೆ, ಸಂಸತ್ ನಲ್ಲಿ ನಡೆಯುವ ದಾಳಿಯ ಬಗ್ಗೆ ಯಾಕೆ ಮಾಹಿತಿ ಇರಲಿಲ್ಲ ಎಂದು ಪ್ರಶ್ನಿಸಿದರು.
News Hour: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿಗೆ ಹಣದ ಮೂಲ ಯಾವುದು?
ಇಡೀ ಘಟನೆಯ ಬಳಿಕದ ಬೆಳವಣಿಗೆ ನೋಡಿದರೆ ಬಿಜೆಪಿ ನಾಯಕರು ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಂಸತ್ ರಕ್ಷಣೆ ಮಾಡದ ಪ್ರಧಾನಮಂತ್ರಿಗಳಿಂದ ಈ ದೇಶದ ರಕ್ಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ದೇಶದ ಕಾವಲುಗಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ರಕ್ಷಣೆ ಮಾಡಲು ವಿಫಲರಾಗಿರುವುದು ಕಂಡುಬರುತ್ತಿದೆ ಎಂದರಲ್ಲದೆ, ಈ ಪ್ರಕರಣದಲ್ಲಿ ಮೈಸೂರು ಸಂಸದ, ಬೇಹುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ, ಕಲ್ಲುಕಂಬ ಪಂಪಾಪತಿ ಸುದ್ದಿಗೋಷ್ಠಿಯಲ್ಲಿದ್ದರು.