ಹುಬ್ಬಳ್ಳಿ [ಮೇ. 16]  ಸಂಸದೆ ಶೋಭಾ ಕರಂದ್ಲಾಜೆಗೆ ಉಮಾಶ್ರೀ ಭರ್ಜರಿ ಟಾಂಗ್ ನೀಡಿದ್ದಾರೆ. ಟಗರಿನ ವಿಷಯಕ್ಕೆ ಬಂದರೆ  ಟಗರು ಗುದ್ದಲಿದೆ ಎಂದು ಎಚ್ಚರಿಸಿದ್ದಾರೆ.

ಕುಂದಗೋಳ ತಾಲೂಕಿನ ಹೀರೆಗುಂಜಳ ಗ್ರಾಮದಲ್ಲಿ ವಾಗ್ದಾಳಿ ನಡೆಸಿ, ಶಾಸಕರನ್ನು ಹಿಡಿದು ಇಡಲು ಆಗದೇ ಇರೋ ಸಿದ್ದರಾಮಯ್ಯ ಕೈಗೆ ಬಳಿ ತೊಡಲಿ ಎಂದು ಶೋಭಾ ಹೇಳಿದ್ದಾರೆ. ಕೈಗೆ ಬಳೆ ತೊಡುವ ಬಗ್ಗೆ ಶೋಭಾ ಮಾತನಾಡಿದ್ದಾರೆ.  ಆದರೆ ಟಗರಿನ ವಿಷಯಕ್ಕೆ ಬಾರದಿರುವುದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ.

ರೇವಣ್ಣಗೆ ಸಿಎಂ ಪಟ್ಟದ ಆಸೆ ತೋರಿಸಿರುವ ಸಿದ್ದು ಒಳ ಮರ್ಮವೇನು..?

ಸಿದ್ದರಾಮಯ್ಯ ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ. ಅವರ ಕೈಗೆ ಬಂಗಾರದ ಬಳೆ ತೊಡಿಸಬೇಕು. ಕಬ್ಬಿಣದ ಬಳೆ ಹಾಕಿಕೊಂಡು ಹೋಗುವುದು ಜೈಲಿಗೆ ಎನ್ನುತ್ತಾ  ಪಕ್ಕಾ ಸಿನಿಮಾ ಶೈಲಿಯಲ್ಲಿ ಡೈಲಾಗ್ ಉದುರಿಸಿದರು.

ಚುನಾವಣೆಗಳ ಸಮಗ್ರ ಸುದ್ದಿಗಾಗಿ