'ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ರೋಸಿ ಹೋದ ರಾಜ್ಯದ ಜನತೆ'
* ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ವಿಫಲ
* ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಲಿರುವ ಜನರು
* ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು
ಕಂಪ್ಲಿ(ಅ.10): ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ(BJP) ಸರ್ಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಕೆಪಿಸಿಸಿ ರಾಜ್ಯಉಪಾಧ್ಯಕ್ಷ ಸೂರ್ಯನಾರಾಯಣರೆಡ್ಡಿ(Suryanarayanareddy) ಆರೋಪಿಸಿದ್ದಾರೆ.
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ(Election)ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಜನರು ಕಾಂಗ್ರೆಸ್ನ್ನು(Congress) ಅಧಿಕಾರಕ್ಕೆ ತರಲಿದ್ದಾರೆ. ಕೊರೋನಾ(Coronavirus) ಹಾವಳಿಯಿಂದ ಮೃತಪಟ್ಟವರ(Death) ಕುಟುಂಬಗಳಿಗೆ ಪರಿಹಾರಧನ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಸಿಂದಗಿ(Sindagi) ಹಾಗೂ ಹಾನಗಲ್ಲ(Hanagal) ಉಪಚುನಾವಣೆಯಲ್ಲಿ(Byelection) ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.
'ಕಾಂಗ್ರೆಸ್, ಬಿಜೆಪಿಯಿಂದ ರೈತರ ಬೆನ್ನು ಮುರಿಯುವ ಕೆಲಸ'
ಶಾಸಕ ಜೆ.ಎನ್. ಗಣೇಶ್(JN Ganesh) ಮಾತನಾಡಿ, ಇತ್ತೀಚೆಗೆ ಜರುಗಿದ ಅಧಿವೇಶನದಲ್ಲಿ ಸಕ್ಕರೆ ಕಾರ್ಖಾನೆ(Sugar Factory) ಪರಭಾರೆ ವಿಚಾರ ಕುರಿತು ಪ್ರಸ್ತಾಪಿಸಲಾಗಿದೆ. ಅಲ್ಲದೇ ಮುಂಬರುವ ಬೆಳಗಾವಿ(Belagavi) ಅಧಿವೇಶನದಲ್ಲಿಯೂ(Session) ಈ ವಿಚಾರ ಕುರಿತು ಪ್ರಸ್ತಾಪಿಸಲಾಗುವುದು. ಇದು ಕಂಪ್ಲಿ ಜನರ ಆಸ್ತಿಯಾಗಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆಯ 176 ಎಕರೆ ಜಾಗ ಪರಭಾರೆ ಮಾಡಲು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಿಗಿ ಬಸವರಾಜ್‌ಗೌಡ, ಪುರಸಭೆ ಸದಸ್ಯರಾದ ಲಡ್ಡು ಹನ್ನೂರ್ವಲಿ, ವೀರಾಂಜಿನಿ, ಓಬಳೇಶ್, ನಾರಾಯಣಪ್ಪ, ಬಿ. ಜಾಫರ್, ಹಬೀಬ್ ರೆಹಮಾನ್, ರಾಘವೇಂದ್ರ, ಜಗದೀಶ್, ಶಶಿಕುಮಾರ ಉಪಸ್ಥಿತರಿದ್ದರು.